ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಜಾಬ್ : ವಾಯುನೆಲೆಯಲ್ಲಿ ಗುಂಡಿನ ಚಕಮಕಿ ಮುಕ್ತಾಯ

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಜನವರಿ 02 : ಪಠಾಣ್ ಕೋಟ್ ವಾಯುನೆಲೆಯಲ್ಲಿ ಗುಂಡಿನ ಚಕಮಕಿ ಮುಕ್ತಾಯಗೊಂಡಿದೆ. 45 ನಿಮಿಷಗಳಿಂದ ಯಾವುದೇ ಗುಂಡಿನ ಸದ್ದು ಕೇಳಿಬಂದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಮಯ 11.30 : ಪಠಾಣ್ ಕೋಟ್ ವಾಯುನೆಲೆಯಲ್ಲಿ ಪುನಃ ಗುಂಡಿನ ಚಕಮಕಿ ಆರಂಭವಾಗಿದೆ. ನಾಲ್ವರು ಉಗ್ರರನ್ನು ಇದುವರೆಗೂ ಯೋಧರು ಹತ್ಯೆ ಮಾಡಿದ್ದಾರೆ. ವಾಯುನೆಲೆಯಲ್ಲಿ ಇನ್ನೊಬ್ಬ ಉಗ್ರ ಅಡಗಿ ಕುಳಿತಿರಬಹುದು ಎಂದು ಶಂಕಿಸಲಾಗಿದೆ.

ಹಿಂದಿನ ಸುದ್ದಿ : ಪಂಜಾಬ್‌ನ ಪಠಾಣ್ ಕೋಟ್ ವಾಯುನೆಲೆ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಸೇನಾ ಸಮವಸ್ತ್ರ ಧರಿಸಿದ್ದ ಉಗ್ರರು ಶನಿವಾರ ಮುಂಜಾನೆ ವಾಯುನೆಲೆಗೆ ನುಗ್ಗಿದ್ದು, ಯೋಧರು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ.

Pathankot

ಎರಡು ದಿನಗಳ ಹಿಂದೆ ಗಡಿದಾಟಿ ಭಾರತಕ್ಕೆ ಪ್ರವೇಶಿಸಿರುವ ಉಗ್ರರು ಗುರುದಾಸ್‌ ಪುರ ಎಸ್ಪಿ ವಾಹನವನ್ನು ಅಪಹರಿಸಿ ಅದರ ಮೂಲಕ ವಾಯುನೆಲೆ ಪ್ರವೇಶಿಸಿದ್ದಾರೆ. ಶನಿವಾರ ಮುಂಜಾನೆ 3.30ರ ಸುಮಾರಿಗೆ ವಾಯುನೆಲೆಗೆ ನುಗ್ಗಿದ ಉಗ್ರರು ಗುಂಡಿನ ದಾಳಿ ಆರಂಭಿಸಿದ್ದಾರೆ. [ಚಿತ್ರಗಳು : ನರೇಂದ್ರ ಮೋದಿ ಅಚ್ಚರಿಯ ಲಾಹೋರ್ ಭೇಟಿ]

ಯೋಧರು ವಾಯುನೆಲೆಯನ್ನು ಸುತ್ತುವರೆದಿದ್ದು, ಉಗ್ರರು ಮತ್ತು ಯೋಧರ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ. ನಾಲ್ಕು ಉಗ್ರರು ಮತ್ತು ಇಬ್ಬರು ಯೋಧರು ಗುಂಡಿನ ಚಕಮಕಿಯಲ್ಲಿ ಮೃತಪಟ್ಟಿದ್ದಾರೆ. ಪಠಾಣ್ ಕೋಟ್ ವಾಯುನೆಲೆ ಪ್ರದೇಶವನ್ನು ಯೋಧರು ತಮ್ಮ ವಶಕ್ಕೆ ತೆಗೆದುಕೊಂಡಿದ್ದು, ವಾಯುನೆಲೆ ಸುತ್ತಲು ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ದೆಹಲಿಯಲ್ಲಿ ಉನ್ನತ ಮಟ್ಟದ ಸಭೆ : ಪಠಾಣ್ ಕೋಟ್‌ನಲ್ಲಿನ ಉಗ್ರರ ದಾಳಿಯ ಕುರಿತು ದೆಹಲಿಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯುತ್ತಿದೆ. ಧೋವಲ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ದಾಳಿಯ ಬಗ್ಗೆ ಮಾಹಿತಿ ನೀಡಲಿದ್ದಾರೆ.

2015ರಲ್ಲಿಯೂ ದಾಳಿ ನಡೆದಿತ್ತು : 2015ರ ಜುಲೈನಲ್ಲಿ ಗುರುದಾಸ್‌ ಪುರ್‌ಕ್ಕೆ ನುಗ್ಗಿದ್ದ ಉಗ್ರರು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದರು. ಸುಮಾರು 11 ಗಂಟೆಗಳ ಕಾರ್ಯಾಚರಣೆ ಬಳಿಕ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳೊಂದಿಗೆ ನುಗ್ಗಿದ ನಾಲ್ವರು ಉಗ್ರರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿದ್ದವು. [ಚಿತ್ರಗಳು : ಪಂಜಾಬಿನಲ್ಲಿ ಉಗ್ರರನ್ನು ಮಟ್ಟ ಹಾಕಿದ ಯೋಧರು]

ಈ ಉಗ್ರರ ದಾಳಿಯಲ್ಲಿ ಹತ್ತು ಜನರು ಮೃತಪಟ್ಟಿದ್ದರು. ಸೇನಾ ಸಮವಸ್ತ್ರ ಧರಿಸಿ ಮಾರುತಿ 800 ಕಾರಿನಲ್ಲಿ ಆಗಮಿಸಿದ ನಾಲ್ವರು ಉಗ್ರರು ಪಂಜಾಬ್ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್‌ ಮೇಲೆ ದಾಳಿ ಮಾಡಿ, ನಂತರ ಪೊಲೀಸ್ ಠಾಣೆಯಲ್ಲಿ ಅಡಗಿ ಕುಳಿತಿದ್ದರು.

English summary
Punjab has been put on high alert as security forces battle terrorists at the Air Force base in Pathankot. Reports suggest that there was gunfire at the Pathankot Air Force station. One terrorist has been killed by the security forces even as the operation continues.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X