ತಮ್ಮ ದೇವಾಲಯ ನಿರ್ಮಿಸಿದವರ ವಿರುದ್ಧ ಮೋದಿ ಗುಡುಗು

ನವದೆಹಲಿ, ಫೆ.12 : ತಮ್ಮ ದೇವಾಲಯವನ್ನು ನಿರ್ಮಿಸಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಸಮಯವಿದ್ದರೆ ಸ್ವಚ್ಛಭಾರತ ಅಭಿಯಾನದಲ್ಲಿ ಪಾಲ್ಗೊಳ್ಳಿ ದೇವಾಲಯ ಕಟ್ಟುವಂತಹ ಕೆಲಸ ಮಾಡಬೇಡಿ ಎಂದು ಅವರು ಟ್ವಿಟರ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಗುಜರಾತ್ ರಾಜ್ಯದ ರಾಜ್‌ಕೋಟ್‌ನಲ್ಲಿ ನರೇಂದ್ರ ಮೋದಿ ಅವರ ಬೆಂಬಲಿಗರು ಸ್ಥಳೀಯರಿಂದ ಹಣವನ್ನು ಸಂಗ್ರಹಿಸಿ ಮೋದಿ ದೇವಾಲಯವನ್ನು ನಿರ್ಮಿಸಿದ್ದಾರೆ. ಓಂ ಯುವ ಗ್ರೂಪ್ ಹೆಸರಿನ ಸಂಘಟನೆಯು ಕೊಥಾರಿಯಾ ರಸ್ತೆಯಲ್ಲಿ ಈ ದೇವಾಲಯ ನಿರ್ಮಿಸಿದೆ.

Narendra Modi

ದೇವಾಲಯದ ನಿರ್ಮಾಣ ಕಾರ್ಯ ಈಗಾಗಲೇ ಪೂರ್ಣಗೊಂಡಿದ್ದು, ಮೋದಿ ಅವರ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ. ಫೆ.16ರಂದು ಈ ದೇವಾಲಯ ಉದ್ಘಾಟನೆಯಾಗಬೇಕಿದೆ. ಪ್ರತಿದಿನ ಎರಡು ಬಾರಿ ದೇವಾಲಯದಲ್ಲಿ ಪೂಜೆ ಸಲ್ಲಿಸಲು ನಿರ್ಧರಿಸಲಾಗಿದೆ.

ಮೋದಿ ಪ್ರತಿಕ್ರಿಯೆ : ತಮ್ಮ ದೇವಾಲಯ ನಿರ್ಮಾಣ ಮಾಡಿರುವ ಸುದ್ದಿಗಳಿಗೆ ಗುರುವಾರ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ. 'ನಿಮ್ಮ ಬಳಿ ಹಣ ಮತ್ತು ಸಮಯವಿದ್ದರೆ ಅದನ್ನು ನನ್ನ ಕನಸಾದ ಸ್ವಚ್ಛ ಭಾರತ ಅಭಿಯಾನಕ್ಕಾಗಿ ಮೀಸಲಾಗಿಡಿ' ಎಂದು ಮೋದಿ ಟ್ವಿಟ್ ಮಾಡಿದ್ದಾರೆ.

' ವ್ಯಕ್ತಿಯ ದೇವಾಲಯ ನಿರ್ಮಾಣ ಮಾಡುವುದು ನಮ್ಮ ಸಂಸ್ಕೃತಿಯಲ್ಲ. ಈ ಸುದ್ದಿ ಕೇಳಿ ತುಂಬಾ ಬೇಸರವಾಗಿದೆ. ಇಂತಹ ಕೆಲಸ ಮಾಡಬೇಡಿ ಎಂದು ಅವರು' ಕರೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+