Chalapathi Rao : ಟಾಲಿವುಡ್‌ನ ಹಿರಿಯ ನಟ ಚಲಪತಿ ರಾವ್ ನಿಧನ

ಬೆಂಗಳೂರು, ಡಿಸೆಂಬರ್ 25; ಟಾಲಿವುಡ್‌ನ ಹಿರಿಯ ನಟ ಚಲಪತಿ ರಾವ್ ನಿಧನ ಹೊಂದಿದ್ದಾರೆ. ಸುಮಾರು 600 ಸಿನಿಮಾಗಳಲ್ಲಿ ಅವರು ನಟಿಸಿದ್ದರು.

ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಚಲಪತಿ ರಾವ್ (78) ಭಾನುವಾರ ಮುಂಜಾನೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಪುತ್ರ, ಇಬ್ಬರು ಪುತ್ರಿಯರು, ಪತ್ನಿಯನ್ನು ಅವರು ಅಗಲಿದ್ದಾರೆ.

Telugu Cinema Actor Chalapathi Rao No More

ಖಳನಟನಾಗಿ, ಹಾಸ್ಯನಟನಾಗಿ ಸುಮಾರು 600 ಚಿತ್ರಗಳಲ್ಲಿ ಚಲಪತಿ ರಾವ್ ನಟಿಸಿದ್ದರು. 1944ರಲ್ಲಿ ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ಜನಿಸಿದ ಚಲಪತಿ ರಾವ್ ಅವರನ್ನು ಎನ್‌ಟಿಆರ್ ಚಿತ್ರರಂಗಕ್ಕೆ ಕರೆತಂದಿದ್ದರು.

ಚಲಪತಿ ರಾವ್ ಅವರು ನಟಿಸಿದ ಮೊದಲ ಸಿನಿಮಾ 'ಗುಡಾಚಾರಿ 116' ಈ ಚಿತ್ರ 1966ರಲ್ಲಿ ಬಿಡುಗಡೆಯಾಗಿತ್ತು. ಎನ್‌ಟಿಆರ್, ನಾಗಾರ್ಜುನ, ಚಿರಂಜೀವಿ, ವಿಕ್ಟರಿ ವೆಂಕಟೇಶ್, ರವಿತೇಜ ಸೇರಿದಂತೆ ಹಲವು ನಾಯಕರ ಜೊತೆ ಅವರು ನಟಿಸಿದ್ದರು.

ಪೋಷಕ ನಟನಾಗಿ, ಖಳನಾಯಕನಾಗಿ, ಹಾಸ್ಯ ನಟನಾಗಿ ಚಲಪತಿ ರಾವ್ ನಟಿಸಿದ್ದರು. ನಟ ಮಾತ್ರವಲ್ಲದೇ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದರು. ಕಲಿಯುಗ ಕೃಷ್ಣಡು, ಕಡಪ ರೆಡ್ಡಮ್ಮ, ರಕ್ತ ಚಿಂದಿನ ರಾತ್ರಿ ಸೇರಿದಂತೆ ಹಲವು ಚಿತ್ರಗಳನ್ನು ನಿರ್ಮಾಣ ಮಾಡಿದ್ದರು.

ಕಳೆದ ವರ್ಷ ಬಿಡುಗಡೆಯಾದ ಬಂಗಾರರಾಜು ಚಲಪತಿ ರಾವ್ ನಟಿಸಿದ ಕೊನೆಯ ಸಿನಿಮಾವಾಗಿದೆ. ಟಾಲಿವುಟ್‌ನ ಮೂರು ತಲೆಮಾರಿನ ನಟರ ಜೊತೆ ಅವರು ತೆರೆ ಹಂಚಿಕೊಂಡಿದ್ದರು. ತೆಲಗು ಚಿತ್ರರಂಗದ ಗಣ್ಯರು ಚಲಪತಿ ರಾವ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಬಂಜಾರ ಹಿಲ್ಸ್‌ನಲ್ಲಿರುವ ರವಿಬಾಬು ಅವರ ನಿವಾಸದಲ್ಲಿ ಭಾನುವಾರ ಮಧ್ಯಾಹ್ನದ ತನಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಪುತ್ರಿ ಅಮೆರಿಕದಲ್ಲಿದ್ದು, ಅವರು ಬಂದ ಬಳಿಕ ಬುಧವಾರ ಮಧ್ಯಾಹ್ನ 3 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ.

ಕೆಲವು ದಿನಗಳ ಹಿಂದೆ ಕೈಕಲಾ ಸತ್ಯನಾರಾಯಣ್‌ ಮೃತಪಟ್ಟಿದ್ದರು. ಶನಿವಾರ ಅವರ ಅಂತ್ಯಕ್ರಿಯೆ ನಡೆದಿತ್ತು. ಈ ಅಘಾತದಿಂದ ಹೊರಬರುವ ಮೊದಲೇ ಮತ್ತೊಬ್ಬ ಹಿರಿಯ ನಟ ವಿಧಿವಶರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+