Telangana poll: ಸೋನಿಯಾ ಗಾಂಧಿ ನನ್ನ 'ಸಿಎಂ ಮಾಡುತ್ತಾರೆ' ಎಂದ ಸಂಸದ: ವಿಡಿಯೋ
ಬೆಂಗಳೂರು, ನವೆಂಬರ್ 15: ಸದರಿ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ವಿಜಯ ಸಾಧಿಸಿದರೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ತಮ್ಮನ್ನು ಮುಖ್ಯಮಂತ್ರಯನ್ನಾಗಿ ಮಾಡುತ್ತಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಲೋಕಸಭಾ ಸದಸ್ಯ ಕೋಮತಿರೆಡ್ಡಿ ವೆಂಕಟ್ ರೆಡ್ಡಿ ಹೇಳಿಕೊಂಡಿದ್ದಾರೆ. ಈ ಕುರಿತು ವಿಡಿಯೋ ಹರಿದಾಡಿದ್ದರ ಬಗ್ಗೆ ವರದಿ ಆಗಿದೆ.
ಇವರು ನಲ್ಗೊಂಡ ಕ್ಷೇತ್ರದ ಸಂಸದರಾಗಿದ್ದು, ಕೋಮಟಿರೆಡ್ಡಿ ವೆಂಕಟ್ ರೆಡ್ಡಿ ಅವರು ತಮ್ಮ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಮತಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ್ದಾರೆ. ಅವರ ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಶೇರ್ ಆಗಿದೆ.

ಈವಿಡಿಯೋ ಕಾಂಗ್ರೆಸ್ ನಾಯಕರೊಬ್ಬರು ಮುಖ್ಯಮಂತ್ರಿ ಸ್ಥಾನದ ತಮ್ಮ ಹಕ್ಕನ್ನು ವಿಶ್ವಾಸದಿಂದ ಪ್ರತಿಪಾದಿಸುತ್ತಿರುವುದನ್ನು ತೋರಿಸುತ್ತದೆ. ಕೇವಲ ಐದು ಸೆಕೆಂಡ್ ಇರುವ ಈ ವಿಡಿಯೋ ಕ್ಲಿಪ್‌ನಲ್ಲಿ "ಪಕ್ಷ ಅಧಿಕಾರಕ್ಕೆ ಬಂದರೆ ಸೋನಿಯಾ ಗಾಂಧಿ ನನಗೆ ಸಿಎಂ ಸ್ಥಾನ ನೀಡಲಿದ್ದಾರೆ'' ಎಂದು ಹೇಳಿದ್ದು ಸೆರೆಯಾಗಿದೆ. ಇವರ ಹೇಳಿಕೆ ಇದೀಗ ಕಾಂಗ್ರೆಸ್ ಪಾಳಯದಲ್ಲಿ ಹಲವರ ನಿದ್ದೆಗೆಡಿಸಿದೆ.
ತೆಲಂಗಾಣದಲ್ಲಿ ನವೆಂಬರ್ 30ರಂದು 119 ಕ್ಷೇತ್ರಗಳಿಗೆ ಏಕಕಾಲಕ್ಕೆ ಮತದಾನ ನಡೆಯಲಿದೆ. ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷಗಳು ಅಬ್ಬರದ ಪ್ರಚಾರ ನಡೆಸುತ್ತಿವೆ. ಈ ಮಧ್ಯೆ ಪ್ರಚಾರದಲ್ಲಿ ಸಿಎಂ ಸ್ಥಾನದ ಹಕ್ಕು ಪ್ರತಿಪಾದಿಸಿದ ವಿಡಿಯೋ ವೈರಲ್ ಆಗಿದೆ.
ಮುಖ್ಯಮಂತ್ರಿ ಅಭ್ಯರ್ಥಿ ಫೈನಲ್
ಕಾಂಗ್ರೆಸ್‌ನಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಲು ಸೋನಿಯಾ ಗಾಂಧಿ ಅವರು ಪ್ರಮುಖ ಪಾತ್ರ ವಹಿಸುತ್ತಾರೆ. ಎದುರಾಗಿರುವ ತೆಲಂಗಾಣ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಯಾರೆಂದು ಈವರೆಗೆ ತೀರ್ಮಾನಿಸಿಲ್ಲ.

ಒಂದು ವೇಳೆ ಅಂದುಕೊಂಡಂತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಮುಖ್ಯಮಂತ್ರಿ ರೇಸಿನಲ್ಲಿ ಅನೇಕ ನಾಯಕರಿದ್ದಾರೆ. ತೆಲಂಗಾಣ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ರೇವಂತ್ ರೆಡ್ಡಿ, ರಾಜ್ಯ ಮಾಜಿ ಮುಖ್ಯಸ್ಥ ಉತ್ತಮ್ ರೆಡ್ಡಿ, ನಾಯಕ ಮಧು ಯಕ್ಷಿ ಗೌಡ್ ಅವರು ಪ್ರಮುಖ ಪ್ರಭಾವಿಗಳಾಗಿದ್ದಾರೆ.
ತೆಲಂಗಾಣದಲ್ಲಿ ತ್ರಿಕೋನ ಸ್ಪರ್ಧೆ
2019 ರಿಂದ ಭುವನಗಿರಿ ಸಂಸತ್ ಕ್ಷೇತ್ರದ ಸಂಸತ್ ಸದಸ್ಯರಾಗಿರುವ ಕೋಮಟಿರೆಡ್ಡಿ ವೆಂಕಟ್ ರೆಡ್ಡಿ 2022 ರಿಂದ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಯ ಸ್ಟಾರ್ ಪ್ರಚಾರಕರಾದರು. ತೆಲಂಗಾಣದಲ್ಲಿ ನವೆಂಬರ್ 30 ರಂದು ಚುನಾವಣೆ ನಡೆದರೆ, ನಾಲ್ಕು ರಾಜ್ಯಗಳ ಮತಗಳ ಎಣಿಕೆ ಡಿಸೆಂಬರ್ 3 ರಂದು ನಡೆಯಲಿದೆ. ಸದ್ಯ ತೆಲಂಗಾಣದಲ್ಲಿ ಬಿಜೆಪಿ, ಬಿಆರ್‌ಎಸ್ ಮತ್ತು ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡಲಿದೆ.
ಕಳೆದ 2018ರ ಚುನಾವಣೆಯಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ (TRS) ಎಂದು ಕರೆಯಲ್ಪಡುವ ಭಾರತ್ ರಾಷ್ಟ್ರ ಸಮಿತಿ (BRS) 119 ಸ್ಥಾನಗಳಲ್ಲಿ 88 ಸ್ಥಾನಗಳಲ್ಲಿ ಗೆದ್ದ ಬೀಗಿತ್ತು. ಒಟ್ಟು ಮತಗಳ ಪೈಕಿ ಅರ್ಧದಷ್ಟು ಶೇಕಡಾ 47.4 ರಷ್ಟು ಮತಗಳನ್ನು ಈ ಒಂದೇ ಪಕ್ಷ ಪಡೆದುಕೊಂಡಿತ್ತು. ಕಾಂಗ್ರೆಸ್ ಕೇವಲ 19 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿತು. ಇಲ್ಲಿ ಬಿಜೆಪಿ ಮಕಾಡೆ ಮಲಗಿತ್ತು. ಈ ಭಾರಿ ಮೂರು ಪಕ್ಷಗಳ ಮೈತ್ರಿ ಪ್ರಬಲ ಸ್ಪರ್ಧೆ ಕಂಡು ಬಂದಿದೆ.












Click it and Unblock the Notifications