Get Updates
Get notified of breaking news, exclusive insights, and must-see stories!

ತೆಹಲ್ಕಾ ಸಂಪಾದಕನ ಲೈಂಗಿಕ ಕಿರುಕುಳ ವೃತ್ತಾಂತ ಇಲ್ಲಿದೆ

Tehelka editor Tarun Tejpal Sexual Harassment to woman journalist -details
ನವದೆಹಲಿ, ನ.22- ದೇಶದ ಮಾಧ್ಯಮ ಲೋಕದಲ್ಲಿ ಕಪ್ಪುಚುಕ್ಕೆಯಾಗಿ ತೀವ್ರ ಸಂಚಲನವನ್ನುಂಟುಮಾಡಿರುವ ತೆಹಲ್ಕಾ ಸಂಪಾದಕ ತರುಣ್ ತೇಜಪಾಲ್, ತನ್ನ ಮಹಿಳಾ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣವು ನಿರ್ಣಾಯಕ ಘಟ್ಟ ಪ್ರವೇಶಿಸಿದೆ.

ಬಾಧಿತ ಪತ್ರಕರ್ತೆ ನೀಡಿರುವ ದೂರು ಮತ್ತು ಸ್ವತಃ ತೇಜಪಾಲ್ ಇಮೇಲ್ ಮೂಲಕ ತಪ್ಪೊಪ್ಪಿಕೊಂಡಿರುವುದನ್ನು ಆಧಾರವಾಗಿಸಿಕೊಂಡು ಜತೆಗೆ ರಾಷ್ಟ್ರೀಯ ಮಹಿಳಾ ಆಯೋಗದ ಆದೇಶದಂತೆ ಗೋವಾ ಪೊಲೀಸರು ತೇಜಪಾಲ್ ಬಂಧನಕ್ಕಾಗಿ ದೆಹಲಿಗೆ ಹೊರಟಿದ್ದಾರೆ.

ತೇಜಪಾಲ್ ಮೂಲತಃ ಶಿಸ್ತುಬದ್ಧ ಕುಟುಂಬಕ್ಕೆ ಸೇರಿದವ. ಅಂದರೆ ಅವರ ಅಪ್ಪ ಸೇನಾಧಿಕಾರಿಯಾಗಿದ್ದವರು. ತೇಜಪಾಲ್ ಪಂಜಾಬ್ ವಿವಿಯಲ್ಲಿ ಪದವಿ ಪಡೆದಿದ್ದು, ಪ್ರಸ್ತುತ ತಮ್ಮ ಹೆಂಡತಿ ಮಕ್ಕಳೊಂದಿಗೆ ದೆಹಲಿಯಲ್ಲಿ ನೆಲೆಸಿದ್ದಾರೆ.

ಈ ಮಧ್ಯೆ, ಲೈಂಗಿಕ ಕಿರುಕುಳ ನಡೆದಿದ್ದಾದರೂ ಯಾವಾಗ, ಎಲ್ಲಿ, ಹೇಗೆ? ಎಂಬುದರ ವೃತ್ತಾಂತವನ್ನು ಇಲ್ಲಿ ಕಟ್ಟಿಕೊಡಲಾಗಿದೆ. ಬಾಧಿತ ಯುವತಿಯ ಮಾತುಗಳಲ್ಲೇ ಹೇಳುವುದಾದರೆ ಮಾನಸಿಕ ಕ್ಷೋಭೆಯನ್ನುಂಟುಮಾಡುವಂತಹ ಈ ಲೈಂಗಿಕ ಕಿರುಕುಳವನ್ನು 50 ವರ್ಷದ Tarun J Tejpal ಎರಡು ಮೂರು ಬಾರಿ ನಡೆಸಿದ್ದಾರೆ.

ತೆಹಲ್ಕಾ ಪತ್ರಿಕೆಯು ಇತ್ತೀಚೆಗೆ ಅದೆಂಥದ್ದೋ 'ಥಿಂಕ್ ಫೆಸ್ಟಿವಲ್' ಎಂಬುದನ್ನು ಗೋವಾದಲ್ಲಿ ಆಚರಿಸಿದೆ. ತನ್ನಿಮಿತ್ತ Panaji Grand Hyatt ಹೋಟೆಲಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಹಾಲಿವುಡ್ ನಟಿ ರಾಬರ್ಟ್ ಡೆ ನೆರೊ ಅವರನ್ನು ಅತಿಥಿ ಭಾಷಣಕಾರರನ್ನಾಗಿ ಆಹ್ವಾನಿಸಲಾಗಿತ್ತು.

ಮೊದಲ ಬಾರಿಗೆ ನವೆಂಬರ್ 7ರಂದು ಏನಾಯಿತೆಂದರೆ
ಅತಿಥಿಗಳಾದ ಹಾಲಿವುಡ್ ನಟ ರಾಬರ್ಟ್ ಡೆ ನೆರೊ ಮತ್ತು ಅವರ ಪುತ್ರಿಯ ಉಸ್ತುವಾರಿ ವಹಿಸಿಕೊಳ್ಳುವಂತೆ ಬಾಧಿತ ಪತ್ರಕರ್ತೆಗೆ ಸೂಚಿಲಾಗಿತ್ತು. ಅದರಂತೆ ಅವರಿಬ್ಬರಿಗೂ ಇಡೀ ದಿನ ಸೈಟ್ ಸೀಯಿಂಗ್ ಮಾಡಿಸಿದ ನಂತರ ರಾತ್ರಿ ವೇಳೆಗೆ ತೇಜಪಾಲ್ ಮತ್ತು ಬಾಧಿತ ಪತ್ರಕರ್ತೆ ಅವರಿಬ್ಬರನ್ನೂ ಹೋಟೆಲಿಗೆ ವಾಪಸ್ಸು ಕರೆತಂದು ಬಿಟ್ಟರು.

ಅತಿಥಿಗಳನ್ನು ಅವರ ಕೋಣೆಯಲ್ಲಿ ಬಿಟ್ಟು ವಾಪಸು ಬರುವಾಗ ತೇಜಪಾಲ್ ತನ್ನ ಕರಾಳಮುಖವನ್ನು ಪ್ರದರ್ಶಿಸಿದ. ಹೋಟೆಲ್ ಲಾಬಿಯಲ್ಲಿ ನನ್ನನ್ನು ತಬ್ಬಿಕೊಂಡ ತೇಜಪಾಲ್ ಮತ್ತೊಮ್ಮೆ ಲಿಫ್ಟಿನಲ್ಲಿಯೂ ತನ್ನ ಕರಾಮತ್ತು ತೋರಿದ. ಹದ್ದುಮೀರಿ ವರ್ತಿಸಿದ ತೇಜಪಾಲನನ್ನು ತಡೆಯಲು ಯತ್ನಿಸಿದೆ.

ನಿನ್ನ ಮಗಳು ಟಿಯಾ ಇದ್ದಾಳಲ್ಲಾ ಅವಳಂತೆಯೇ ನಾನೂ. ಅವಳ ವಯಸ್ಸಿನವೇ ನಾನೂ. ಹೀಗೆಲ್ಲಾ ಕಪಿಚೇಷ್ಟೆ ಮಾಡಬೇಡ ಎಂದು ಎಚ್ಚರಿಸಿದೆ. ಆದರೆ ಆತ ತನ್ನ ಕರಾಳಮುಖ ತೋರಿದ್ದ. ಸದ್ಯ ಅಷ್ಟೊತ್ತಿಗೆ ಲಿಫ್ಟ್ ಗ್ರೌಂಡ್ ಫ್ಲೋರಿಗೆ ಬಂದು ನಿಂತಿತು. ಅದಕ್ಕೇ ಕಾಯುತ್ತಿದ್ದ ನಾನು ಹೊರಕ್ಕೆ ಹಾರಿ ಬಚಾವಾದೆ.

ಆದರೆ ಪಾಪಿ ಅಷ್ಟಕ್ಕೇ ನಿಲ್ಲಲಿಲ್ಲ. ನನ್ನನ್ನು ಹಿಂಬಾಲಿಸಿದವನೇ, ಬೆದರಿಸಿದ. ನಿನ್ನನ್ನು ಕೆಲಸದಿಂದ ತೆಗೆದುಹಾಕುತ್ತೇನೆ ಎಂದು ಗುರಾಯಿಸಿದ. ಆದರೆ ನಾನು ಟ್ಯಾಕ್ಸಿ ಹತ್ತಿ ನಾನು ಇಳಿದುಕೊಂಡಿದ್ದ ಹೋಟೆಲಿಗೆ ವಾಪಸಾದೆ. ಆದರೆ ಮತ್ತೆ ಮಧ್ಯರಾತ್ರಿ ಅವನಿಂದ SMS ಬಂದಿತ್ತು.

ಮಾರನೆ ದಿನ ನವೆಂಬರ್ 8ರಂದು ಏನಾಯಿತೆಂದರೆ
ಮಧ್ಯಾಹ್ನದವರೆಗೂ ನಮ್ಮಿಬ್ಬರ ಮಧ್ಯೆ ಮಾತುಕತೆ ಇರಲಿಲ್ಲ. ಆದರೆ ಊಟಕ್ಕೆಂದು ಗಣ್ಯ ಅತಿಥಿಗಳೊಂದಿಗೆ ರಾಜ್ಯಪಾಲರ ಭವನಕ್ಕೆ (Bharat Vir Wanchoo) ಹೊರಟೆವು. ಮತ್ತೆ ಸ್ವಲ್ಪ ಕಾಲ ಶಾಪಿಂಗ್ ಮುಗಿಸಿಕೊಂಡು ರಾತ್ರಿ ವೇಳೆಗೆ ಹೋಟೆಲಿಗೆ ಮರಳಿದೆವು. ಹೋಟೆಲಿನಲ್ಲಿ ಬಟ್ಟೆ ಬದಲಿಸತೊಡಗಿದೆ. ಆಗ ಮತ್ತೆ ಬಂತು ನೋಡಿ ತೇಜಪಾಲನಿಂದ ಮತ್ತೆ SMS. ಅಷ್ಟೆ ಅಲ್ಲ ಮತ್ತೊಬ್ಬ ಸಹೋದ್ಯೋಗಿಯ ಮೊಬೈಲಿನಿಂದ ನನಗೆ ಕರೆ ಮಾಡಿ ಅತಿಥಿಗಳು (ಹಾಲಿವುಡ್ ನಟ ರಾಬರ್ಟ್ ಡೆ ನೆರೊ) ಉಳಿದಿರುವ ಹೋಟೆಲಿಗೆ ಬರುವಂತೆ ಸೂಚಿಸಿದ.

ಆ ಹೋಟೆಲಿಗೆ ಹೋಗುತ್ತಿದ್ದಂತೆ ಲಿಫ್ಟ್ ಮೂಲಕ ನೆರೊ ಕೊಠಡಿಗೆ ಹೋಗಲು ಹಿಂಜರಿಕೆಯಾಯ್ತು. ಆದರೆ ಅವನು ನನ್ನನ್ನು ಲಿಫ್ಟಿನೊಳಕ್ಕೆ ಎಳೆದುಕೊಂಡ. ಅಲ್ಲಿ ಮತ್ತೆ ನನಗೆ ಲೈಂಗಿಕ ಕಿರುಕುಳ ನೀಡತೊಡಗಿದ. ಇನ್ನು ಸಹಿಸಲಸಾಧ್ಯವೆಂದು ನಡೆದದ್ದನ್ನೆಲ್ಲಾ ಆತನ ಪತ್ನಿ ಮತ್ತು ಪುತ್ರಿ ಬಳಿ ಹೇಳಿಕೊಂಡೆ.

ಅದಾದನಂತರ ತೇಜಪಾಲನಿಂದ ಒಂದೇ ಸಮನೆ SMSಗಳ ಸುರಿಮಳೆಯಾಗತೊಗಿತು. @ just a drunken banter nothing else. @ just banter. .. @ I can't believe u went and mentioned even the smallest thing to her (daughter) ಎಂದೆಲ್ಲಾ ನಿವೇದಿಸಿಕೊಂಡ. ಆಮೇಲೆ ಗೋವಾ ಟ್ರಿಪ್ ಮುಗಿಯುತ್ತಿದ್ದಂತೆ ನ. 10ರಂದು ದೆಹಲಿಗೆ ವಾಪಸಾದೆ.

ಆದರೆ ನವೆಂಬರ್ 16ರ ವೇಳೆಗೆ ತೇಜಪಾಲ ಮತ್ತೆ ವಕ್ಕರಿಸಿದ್ದ. ಅಂದು 7 SMSಗಳನ್ನು ಕಳಿಸಿದ್ದ. # tejpal .. Spoke to daughter, she is okay Girl .. Why wd she be ok. Abt the fact that u sexually assaulted her best friend thats me Tej .. What with saying this awful stuff Girl . Don't send me any messages u r lying and u know that Tej .. I cherished u like one of my best kids always .. Because of one drunken banter u so easily say these awful things.

ಅಂಥೆಲ್ಲಾ ಗೀಚಿದ್ದ. ಅದಕ್ಕೆ ನಾನೂ ಉತ್ತರಿಸಿದೆ: It was twice Tarun. Not once and it was no banter and u did the most horrible things to me. ಇದಕ್ಕೆ ತೇಜಪಾಲನ ಉತ್ತರ ಹೀಗಿತ್ತು: Oh so that why you told .. No wonder she so madly upset. Its ok. Thnx.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+