Punch EV: ಭಾರತದಲ್ಲಿ ಟಾಟಾ ಪಂಚ್-ಇವಿ ಬಿಡುಗಡೆ: 10 ಲಕ್ಷಕ್ಕಿಂತ ಕಡಿಮೆ ಬೆಲೆ, 468 ಕಿ.ಮೀ ರೇಂಜ್
ಟಾಟಾ ಮೋಟರ್ಸ್ (Tata Motors) ಭಾರತದಲ್ಲಿ ತನ್ನ ಜನಪ್ರಿಯ ಎಲೆಕ್ಟ್ರಿಕ್ ಎಸ್‌ಯುವಿ ಮಾದರಿ ಟಾಟಾ ಪಂಚ್ ಇವಿ (Tata Punch EV) ಫೇಸ್‌ಲಿಫ್ಟ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಹೊಸ ವಿನ್ಯಾಸ, ಹೆಚ್ಚುವರಿ ಫೀಚರ್‌ಗಳು ಮತ್ತು ಎರಡು ಬ್ಯಾಟರಿ ಆಯ್ಕೆಗಳೊಂದಿಗೆ ಈ ಕಾರು ಮಾರುಕಟ್ಟೆಗೆ ಬಂದಿದೆ. ಈ ಅಪ್ಡೇಟೆಡ್ ಮಾದರಿಯು ಕಂಪನಿಯ ಇವಿ ವಿಭಾಗವನ್ನು ಮತ್ತಷ್ಟು ಬಲಪಡಿಸುವ ಉದ್ದೇಶ ಹೊಂದಿದೆ.
ಬೆಲೆ ಮತ್ತು ವೇರಿಯಂಟ್‌ಗಳು
ಪಂಚ್ EV ಫೇಸ್‌ಲಿಫ್ಟ್ ಒಟ್ಟು ಐದು ವೇರಿಯಂಟ್‌ಗಳಲ್ಲಿ ಲಭ್ಯವಿದ್ದು, ಎಕ್ಸ್‌ಶೋ ರೂಂ ಬೆಲೆ ₹9.69 ಲಕ್ಷದಿಂದ ಆರಂಭವಾಗಿ ಟಾಪ್ ಮಾದರಿಗೆ ₹12.59 ಲಕ್ಷವರೆಗೆ ಇದೆ. ಇದಲ್ಲದೆ 'ಬ್ಯಾಟರಿ ಆಸ್ ಎ ಸರ್ವೀಸ್ʼ (BaaS) ಮಾದರಿಯಲ್ಲೂ ಖರೀದಿಸಲು ಅವಕಾಶವಿದ್ದು, ಈ ಆಯ್ಕೆಯಲ್ಲಿ ವಾಹನದ ಪ್ರಾರಂಭಿಕ ಬೆಲೆ ₹6.49 ಲಕ್ಷ (ಎಕ್ಸ್‌ಶೋ ರೂಂ) ಆಗಿದ್ದು, ಪ್ರತಿ ಕಿಲೋಮೀಟರ್‌ಗೆ ₹2.6 ಬ್ಯಾಟರಿ ಬಳಕೆ ಶುಲ್ಕ ವಿಧಿಸಲಾಗುತ್ತದೆ.

ಮುಖ್ಯ ಫೀಚರ್‌ಗಳು
* ಐದು ವೇರಿಯಂಟ್‌ಗಳು, ಏಳು ಬಣ್ಣಗಳ ಆಯ್ಕೆ
* 195 ಮಿಮೀ ಗ್ರೌಂಡ್ ಕ್ಲಿಯರೆನ್ಸ್
* 450 ಮಿಮೀ ವಾಟರ್ ವೇಡಿಂಗ್ ಸಾಮರ್ಥ್ಯ
ಹೊರ ವಿನ್ಯಾಸ
ಹೊಸ ಪಂಚ್ EV ತೀಕ್ಷ್ಣವಾದ ಮುಂಭಾಗ ವಿನ್ಯಾಸ ಹೊಂದಿದ್ದು, ಸ್ಲಿಮ್ ಎಲ್‌ಇಡಿ ಡೇ ಟೈಮ್ ರನ್ನಿಂಗ್ ಲೈಟ್‌ಗಳು ಮತ್ತು ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳನ್ನು ಒಳಗೊಂಡಿದೆ. ಬಂಪರ್‌ಗೆ ಹೊಸ ವಿನ್ಯಾಸ ನೀಡಲಾಗಿದೆ. 16 ಇಂಚಿನ ಅಲಾಯ್ ವೀಲ್ಸ್‌ಗಳೊಂದಿಗೆ ಸೈಡ್ ಪ್ರೊಫೈಲ್ ಬಹುತೇಕ ಹಳೆಯದಂತೆಯೇ ಉಳಿದಿದೆ. ಹಿಂಭಾಗದಲ್ಲಿ ಕನೆಕ್ಟೆಡ್ ಎಲ್‌ಇಡಿ ಟೇಲ್‌ಲ್ಯಾಂಪ್‌ಗಳನ್ನು ನೀಡಲಾಗಿದೆ.
ಒಳಾಂಗಣ ಮತ್ತು ಫೀಚರ್‌ಗಳು
ಇಂಟೀರಿಯರ್‌ನಲ್ಲಿ 10 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಟು-ಸ್ಪೋಕ್ ಸ್ಟೀರಿಂಗ್ ವೀಲ್ ನೀಡಲಾಗಿದೆ. ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್ ಮತ್ತು ಲೆದರೆಟ್ ಅಪ್‌ಹೋಲ್ಸ್ಟ್ರಿ ಪ್ರೀಮಿಯಂ ಲುಕ್ ನೀಡುತ್ತದೆ. ಫೀಚರ್‌ಗಳ ಪಟ್ಟಿಯಲ್ಲಿ ಸನ್‌ರೂಫ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಡ್ರೈವ್ ಮೋಡ್‌ಗಳು, ರಿಜೆನೆರೇಟಿವ್ ಬ್ರೇಕಿಂಗ್ ಮೋಡ್‌ಗಳು, ಆಟೋ ಹೆಡ್‌ಲ್ಯಾಂಪ್ ಮತ್ತು ವೈಪರ್‌ಗಳು ಸೇರಿವೆ. ಸುರಕ್ಷತಾ ಅಂಶಗಳಲ್ಲಿ ಆರು ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆಗೆ ಇಬಿಡಿ, ಟ್ರ್ಯಾಕ್ಷನ್ ಕಂಟ್ರೋಲ್, ಟಿಪಿಎಂಎಸ್ ಮತ್ತು 360 ಡಿಗ್ರಿ ಕ್ಯಾಮೆರಾ ಸೇರಿವೆ.
Tata Punch EV Facelift launched with 30 kWh and 40 kWh battery packs
— Sunderdeep - Volklub (@volklub) February 20, 2026
✅ ₹9.69 lakh – ₹12.59 lakh
✅ ₹6.49 lakh with BaaS (Battery as a Service)
✅ 30 kWh – Real-world range ~270 km
✅ 40 kWh – Real-world range ~350 km
✅ 0–100 km/h in 9 seconds
✅ Lifetime, unlimited km… pic.twitter.com/tdPMIljUTp
ಬ್ಯಾಟರಿ ಮತ್ತು ರೇಂಜ್
ಪಂಚ್ EV ಫೇಸ್‌ಲಿಫ್ಟ್ 30kWh ಮತ್ತು 40kWh ಬ್ಯಾಟರಿ ಪ್ಯಾಕ್ ಆಯ್ಕೆಗಳಲ್ಲಿ ಲಭ್ಯವಿದೆ. 40kWh ದೊಡ್ಡ ಬ್ಯಾಟರಿ ಪ್ಯಾಕ್ ಒಂದೇ ಚಾರ್ಜ್‌ನಲ್ಲಿ 468 ಕಿಲೋಮೀಟರ್‌ಗಳವರೆಗೆ (ಎಆರ್‌ಎಐ ಪ್ರಮಾಣೀಕರಣ ಪ್ರಕಾರ) ಪ್ರಯಾಣಿಸಬಹುದು ಎಂದು ಕಂಪನಿ ಹೇಳಿದೆ. ಹೊಸ ವಿನ್ಯಾಸ, ಹೆಚ್ಚುವರಿ ಸೌಲಭ್ಯಗಳು ಮತ್ತು ವಿಭಿನ್ನ ಬೆಲೆ ಆಯ್ಕೆಗಳೊಂದಿಗೆ Punch EV ಫೇಸ್‌ಲಿಫ್ಟ್ ನಗರ ಪ್ರದೇಶದ ಗ್ರಾಹಕರಿಗೆ ಸೂಕ್ತವಾದ ಕಾಂಪ್ಯಾಕ್ಟ್ ಎಲೆಕ್ಟ್ರಿಕ್ ಎಸ್‌ಯುವಿಯಾಗಿ ಕಾಣಿಸಿಕೊಂಡಿದೆ. ಪ್ರಾಯೋಗಿಕ ರೇಂಜ್ ಹಾಗೂ ಆಧುನಿಕ ಫೀಚರ್‌ಗಳನ್ನು ಹುಡುಕುತ್ತಿರುವ ಗ್ರಾಹಕರನ್ನು ಗುರಿಯಾಗಿಸಿಕೊಂಡು ಈ ಮಾದರಿಯನ್ನು ಪರಿಚಯಿಸಿದೆ. ಆಧುನಿಕ ಫೀಚರ್‌ಗಳು ಮತ್ತು ವಿವಿಧ ಬೆಲೆ ಆಯ್ಕೆಗಳ ಮೂಲಕ ನಗರ ಪ್ರದೇಶದ ಗ್ರಾಹಕರನ್ನು ಸೆಳೆಯುವ ಉದ್ದೇಶವನ್ನು ಟಾಟಾ ಮೋಟಾರ್ಸ್ ಹೊಂದಿದೆ.












Click it and Unblock the Notifications