ದೇಶದ ಅಗ್ಗದ ಕಾರು ನ್ಯಾನೊ ಗೆ 'ಟಾಟಾ'
ಅಹಮದಾಬಾದ್, ನವೆಂಬರ್ 27 : ಬಿಡುಗಡೆ ಆದಾಗ ದೇಶದೆಲ್ಲೆಡೆ ಸಂಚಲನ ಮೂಡಿಸಿದ್ದ, ಕೆಳ ಮಧ್ಯಮವರ್ಗದ ಜನರ ಕಾರು ಹೊಂದುವ ಕನಸನ್ನು ನನಸು ಮಾಡಿದ್ದ ಟಾಟಾ ಸಂಸ್ಥೆಯ 'ನ್ಯಾನೊ' ಕಾರು ಮಾರುಕಟ್ಟೆಯಿಂದ ಹಿಂದೆ ಸರಿಯುತ್ತಿದೆ...!
ಕಾರಿನ ಮಾರಾಟದಲ್ಲಿ ಆದ ಕುಸಿತ, ಗ್ರಾಹಕರಿಂದ ಬೇಡಿಕೆ ಕೊರತೆ ಕಾರಣದಿಂದ ಟಾಟಾ ಸಂಸ್ಥೆಯು 'ನ್ಯಾನೊ' ಕಾರಿಗೆ 'ಟಾಟಾ' ಹೇಳಲು ಸಜ್ಜಾಗಿದೆ. ಬೇಡಿಕೆ ಕುಂಠಿತವಾಗಿರುವ ಕಾರಣ ನ್ಯಾನೊ ಕಾರು ಉತ್ಪಾದನೆಯನ್ನು ಕಂಪೆನಿ ಸ್ಥಗಿತಗೊಳಿಸಲು ಚಿಂತನೆ ನಡೆಸಿದೆ.
ತಿಂಗಳೊಂದರಲ್ಲಿ ಅತ್ಯಂತ ಕಡಿಮೆ ಉತ್ಪಾದನೆಯಾಗುವ ಕಾರುಗಳ ಪೈಕಿ ನ್ಯಾನೊ ಒಂದಾಗಿದ್ದು, ಗುಜರಾತ್ ನ ಸನದ್ ಘಟಕದಲ್ಲಿ ದಿನಕ್ಕೆ ಕೇವಲ ಎರಡು ನ್ಯಾನೊ ಕಾರುಗಳಷ್ಟೆ ತಯಾರಾಗುತ್ತಿವೆ.

ಟಾಟಾದ ಷೋ ರೂಂ ಗಳಲ್ಲಿ ಕೂಡ ನ್ಯಾನೊ ಪ್ರದರ್ಶನವನ್ನು ನಿಲ್ಲಿಸುತ್ತಿರುವ ಸಂಸ್ಥೆ ತನ್ನ ಇತರ ಕಾರುಗಳಾದ 'ಟಿಯಾಗೊ' ಮತ್ತಿತರ ಕಾರುಗಳನ್ನಷ್ಟೆ ಪ್ರದರ್ಶನ ಮಾಡುತ್ತಿದೆ.
ನ್ಯಾನೊ ಮಾರಾಟದಲ್ಲಿ ತೀರ್ವ ಕುಸಿತ ಬಂದಿದ್ದು, ಆಗಸ್ಟ್ ತಿಂಗಳಲ್ಲಿ ದೇಶಾದ್ಯಂತ ಕೇವಲ 180 ಕಾರುಗಳಷ್ಟೆ ಮಾರಾಟಕ್ಕಾಗಿ ಪೂರೈಸಲಾಗಿತ್ತು. ಸೆಪ್ಟೆಂಬರ್ ತಿಂಗಳಲ್ಲಿ 124 ಕಡೆಗಳಲ್ಲಿ ನ್ಯಾನೊ ಕಾರಿನ ಬೆಲೆ ಇಳಿಸಲಾಗಿತ್ತು. ಸೆಪ್ಟೆಂಬರ್ ತಿಂಗಳಲ್ಲಿ ಕೇವಲ 58 ಕಾರುಗಳನ್ನಷ್ಟೆ ಸಂಸ್ಥೆಯು ಉತ್ಪಾದನೆ ಮಾಡಿದೆ.
ಈ ಮಧ್ಯೆ, ಟಾಟಾ ಮೋಟರ್ಸ್ ಕಂಪೆನಿ ಕೊಯಮತ್ತೂರು ಮೂಲದ ಜಯೇಮ್ ಅಟೊಮೋಟಿವ್ಸ್ ಸಹಭಾಗಿತ್ವದಲ್ಲಿ ವಿದ್ಯುತ್ ಚಾಲಿತ ಕಾರಿನ ಉತ್ಪಾದನೆಯಲ್ಲಿ ತೊಡಗಿಕೊಂಡಿದೆ. ಶೀಘ್ರದಲ್ಲೇ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಗೆ ಬರಲಿದೆ. ಇದು ನ್ಯಾನೊ ಉತ್ಪಾದನೆಗೆ ಇನ್ನಷ್ಟು ಹೊಡೆತ ನೀಡಲಿದೆ ಎನ್ನಲಾಗಿದೆ.
-
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications