Tamil Nadu Politics: ವಿಜಯ್ ದಳಪತಿಯ ನಂತರ ಮತ್ತೊಬ್ಬ ಸೂಪರ್ ಸ್ಟಾರ್ ತಮಿಳುನಾಡು ರಾಜಕೀಯಕ್ಕೆ ಎಂಟ್ರಿ!, ಟಿವಿಕೆಗೆ ಹೊಸ ಸಂಕಷ್ಟ

Tamil Nadu Politics: ತಮಿಳುನಾಡು ರಾಜಕೀಯದಲ್ಲಿ ಮತ್ತೊಂದು ಸಂಚಲ ಶುರುವಾಗಿದೆ. ಈಚೆಗೆ ತಮಿಳುನಾಡಿನಲ್ಲಿ ನಟ ವಿಜಯ್ ದಳಪತಿ ಅವರು ತಮಿಳಗ ವೆಟ್ರಿ ಕಳಗಂ ಪಕ್ಷವನ್ನು ಪ್ರಾರಂಭಿಸಿ ಕೇವಲ ಎರಡು ವರ್ಷದ ಅವಧಿಯಲ್ಲೇ ಯಶಸ್ಸು ಸಾಧಿಸಿದ್ದಾರೆ. ತಮಿಳಗ ವೆಟ್ರಿ ಕಳಗಂ ಪಕ್ಷವನ್ನು ಎರಡೂವರೆ ವರ್ಷಗಳ ಹಿಂದಷ್ಟೇ ವಿಜಯ್ ದಳಪತಿ ಅವರು ಪ್ರಾರಂಭಿಸಿದ್ದರು. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡದೆ ತಮಿಳುನಾಡು ವಿಧಾನಸಭೆ ಚುನಾವಣೆ 2026ರಲ್ಲಿ ಸ್ಪರ್ಧೆ ಮಾಡಿ ಅಮೋಘ ಯಶಸ್ಸನ್ನೂ ಸಹ ಸಾಧಿಸಿದ್ದಾರೆ. ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (Tvk) ಪಕ್ಷವು ಅಮೋಘ ಯಶಸ್ಸು ಸಾಧಿಸಿದ ಬೆನ್ನಲ್ಲೇ ಮತ್ತೊಬ್ಬ ಪ್ರಮುಖ ತಮಿಳು ನಟ ರಾಜಕೀಯಕ್ಕೆ ಧುಮುಕುವುದಕ್ಕೆ ಸಿದ್ಧರಾಗಿದ್ದಾರೆ. ಇದರ ಸಂಪೂರ್ಣ ವಿವರ ಈ ಲೇಖನದಲ್ಲಿದೆ.

ನೆರೆಯ ತಮಿಳುನಾಡಿನಲ್ಲಿ ತಮಿಳಗ ವೆಟ್ರಿ ಕಳಗಂ ಪಕ್ಷವು ಯಶಸ್ಸು ಸಾಧಿಸಿದೆ. ಇದೀಗ ತಮಿಳುನಾಡಿನಲ್ಲಿ ಮತ್ತೊಬ್ಬ ಪ್ರಮುಖ ನಟ ಧನುಷ್ ಅವರು ರಾಜಕೀಯ ಪಕ್ಷ ಪ್ರಾರಂಭಿಸುವುದಕ್ಕೆ ಮುಂದಾಗಿದ್ದಾರೆ. ಶೀಘ್ರದಲ್ಲೇ ರಾಜಕೀಯ ಪಕ್ಷವನ್ನು ಪ್ರಾರಂಭಿಸಲಿದ್ದಾರೆ ಎನ್ನುವ ಲೆಕ್ಕಾಚಾರ ತಮಿಳುನಾಡಿನಲ್ಲಿ ತುಂಬಾ ಜೋರಾಗಿದೆ. ತಮಿಳುನಾಡಿನ ಕೊಯಮತ್ತೂರಿನಲ್ಲಿ ಕ್ಷೇತ್ರವಾರು ಸದಸ್ಯತ್ವ ಅಭಿಯಾನ ಆರಂಭಿಸಿದ್ದಾರೆ ಎಂದು ಹೇಳಲಾಗಿದೆ.

Tamil Nadu Politics

ನಟ ಧನುಷ್ ಅವರು ತಮ್ಮ ಅಭಿಮಾನಿ ಕಲ್ಯಾಣ ಸಂಘಟನೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತಿದ್ದಾರೆ. ಇದೀಗ ತಮಿಳುನಾಡಿನ ಕೊಯಮತ್ತೂರಿನಲ್ಲಿ ಕ್ಷೇತ್ರವಾರು ಸದಸ್ಯತ್ವ ಅಭಿಯಾನವನ್ನು ಪ್ರಾರಂಭಿಸಲಾಗುತ್ತಿದೆ ಎಂದು ವರದಿಯಾಗಿದೆ. ಈ ಬೆಳವಣಿಗೆಯು ನಟ ಧನುಷ್ ಅವರು ರಾಜಕೀಯ ಪ್ರವೇಶಿಸುವುದಕ್ಕೆ ಮಾಡಿಕೊಂಡಿರುವ ತಯಾರಿ ಎನ್ನುವ ಅನುಮಾನಕ್ಕೆ ಕಾರಣವಾಗಿದೆ.

ಇನ್ನು ಈಚೆಗೆ ನಡೆದ ಕಾರ್ಯಕ್ರಮದಲ್ಲಿ ನಟ ಧನುಷ್ ತಮ್ಮ ಸಂಘಟನೆಗೆ ಧ್ವಜವೊಂದನ್ನು ಪರಿಚಯಿಸಿದ್ದಾರೆ. ತಮ್ಮ ಹುಟ್ಟುಹಬ್ಬದ ಸಮಾರಂಭದಲ್ಲಿ ದೊಡ್ಡ ಪ್ರಮಾಣದಲ್ಲಿ ಕಲ್ಯಾಣ ಕಾರ್ಯಕ್ರಮವನ್ನು ಸಹ ಆಯೋಜಿಸಿದ್ದರು, ಈ ಕಾರ್ಯಕ್ರಮದಲ್ಲಿ ಏಕತೆ ಕಾಪಾಡುವ ಮತ್ತು ಬಡವರ ಬಗ್ಗೆ ಧನುಷ್ ಅವರು ಮಾತನಾಡಿದ್ದರು. ನಟ ಧನುಷ್ ಅವರ ಈ ಭಾಷಣದ ನಂತರ ಅವರು ಮುಂದಿನ ದಿನಗಳಲ್ಲಿ ಅಥವಾ ಭವಿಷ್ಯದಲ್ಲಿ ರಾಜಕೀಯ ಪ್ರವೇಶ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Tamil Nadu Politics: ನಟ ಧನುಷ್ ರಾಜಕೀಯ ಸಿದ್ಧತೆ ಪ್ರಾರಂಭಿಸಿದ್ದಾರೆ ?

ಇನ್ನು ನಟ ಧನುಷ್ ಅವರು ರಾಜಕೀಯ ಪಕ್ಷವನ್ನು ಪ್ರಾರಂಭಿಸಲಿದ್ದಾರೆಯೇ ಎನ್ನುವ ಚರ್ಚೆಯು ಜೋರಾಗಿದೆ. ಕಲ್ಯಾಣ ಕಾರ್ಯಕ್ರಮದಲ್ಲಿ ಮಾತನಾಡಿದ ಧನುಷ್ ಅವರು, ನಮ್ಮ ಒಗ್ಗಟ್ಟಿನಲ್ಲಿ ದೊಡ್ಡ ಶಕ್ತಿಯಿದೆ ಮತ್ತು ಅದಕ್ಕೆ ಒಂದು ಉದ್ದೇಶವಿದೆ. ನಾವು ಒಟ್ಟಿಗೆ ಸೇರಬಾರದು, ಛಾಯಾಚಿತ್ರಗಳನ್ನು ತೆಗೆದುಕೊಂಡು ಹೊರಡಬಾರದು. ನಿಮ್ಮ ಸುತ್ತಮುತ್ತಲಿನ ಜನರು ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಅವರಿಗೆ ಸಹಾಯ ಮಾಡಿ. ಅವರಿಗೆ ನೆರವು ನೀಡಿ. ಈ ಪ್ರಯತ್ನದಲ್ಲಿ ಎಲ್ಲರೂ ಕೈಜೋಡಿಸಬೇಕು" ಎಂದು ಧನುಷ್ ಅವರು ಹೇಳಿದ್ದರು.

ಕೊಯಮತ್ತೂರಿನ ಐದು ಕ್ಷೇತ್ರಗಳಲ್ಲಿ ಸದಸ್ಯತ್ವ ಅಭಿಯಾನ

ಇನ್ನು ತಮಿಳುನಾಡಿನ ಕೊಯಮತ್ತೂರಿನ ಐದು ಕ್ಷೇತ್ರಗಳಲ್ಲಿ ಧನುಷ್ ಅವರ ಹೊಸ ರಾಜಕೀಯ ಪಕ್ಷದಿಂದ ಸದಸ್ಯತ್ವವನ್ನು ಸಹ ಪ್ರಾರಂಭಿಸಲಾಗಿದೆ ಎಂದು ಹೇಳಲಾಗಿದೆ. ಧನುಷ್ ತಮ್ಮ ಸಂಸ್ಥೆಗೆ ಅಥವಾ ಪಕ್ಷಕ್ಕೆ ಕ್ಷೇತ್ರವಾರು ಸದಸ್ಯರನ್ನು ನೋಂದಾಯಿಸಲು ಪ್ರಾರಂಭಿಸಲು ಸೂಚನೆ ನೀಡಿದ್ದಾರೆ. ಕೊಯಮತ್ತೂರು ಜಿಲ್ಲೆಯ ಐದು ಕ್ಷೇತ್ರಗಳಿಗೆ ಸದಸ್ಯತ್ವ ಮತ್ತು ಧನುಷ್ ಕಲ್ಯಾಣ ಸಂಘಟನೆಗಳನ್ನು ಪ್ರಾರಂಭಿಸಿದ್ದಾರೆ ಎಂದು ಹೇಳಲಾಗಿದೆ.

ಈ ಐದು ಕ್ಷೇತ್ರಗಳಲ್ಲಿ ಸದಸ್ಯತ್ವ ನೋಂದಣಿ ಪ್ರಾರಂಭ

* ಕೊಯಮತ್ತೂರು ಉತ್ತರ
* ಕಾವುಂಡಂಪಾಲಯಂ
* ಸಿಂಗನಲ್ಲೂರು
* ಸುಲೂರು
* ಮೆಟ್ಟುಪಾಳಯಂ

ಎಲ್ಲಾ ಐದು ಕ್ಷೇತ್ರಗಳಲ್ಲಿ ಗೆದ್ದಿರುವ ಟಿವಿಕೆ ಪಕ್ಷ

ಇನ್ನು ಇದೀಗ ನಟ ಧನುಷ್ ಅವರು ತಮಿಳುನಾಡಿನ ಕೊಯಮತ್ತೂರಿನ ಐದು ಕ್ಷೇತ್ರಗಳಲ್ಲಿ ಸದಸ್ಯತ್ವವನ್ನು ಪ್ರಾರಂಭಿಸಿದ್ದಾರೆ. ಆದರೆ ಈ ಎಲ್ಲಾ ಐದು ಕ್ಷೇತ್ರಗಳಲ್ಲಿಯೂ ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಈಚೆಗೆ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದೆ. ಕೊಯಮತ್ತೂರು ಜಿಲ್ಲೆಯಲ್ಲಿ 10 ವಿಧಾನಸಭಾ ಕ್ಷೇತ್ರಗಳಿವೆ. ಡಿಎಂಕೆ ಗೆದ್ದ ಕೊಯಮತ್ತೂರು ದಕ್ಷಿಣ ಕ್ಷೇತ್ರವನ್ನು ಇತ್ತೀಚಿನ ಸದಸ್ಯತ್ವ ಅಭಿಯಾನದಲ್ಲಿ ಸೇರಿಸಲಾಗಿಲ್ಲ. ಸದಸ್ಯತ್ವ ನೋಂದಣಿಗಾಗಿ ಗುರುತಿಸಲಾದ ಮೊದಲ ಕ್ಷೇತ್ರಗಳು ಟಿವಿಕೆ ಹಿಡಿತದಲ್ಲಿರುವ ಸ್ಥಾನಗಳಾಗಿವೆ ಎಂಬುದು ರಾಜಕೀಯ ವಲಯಗಳಲ್ಲಿ ಚರ್ಚೆಯ ವಿಷಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+