ಚೀನಾ ವಿರುದ್ಧ ತೈವಾನ್ ಕೆಂಡ, ಸಿಟ್ಟು ವರ್ಕೌಟ್ ಆಗುತ್ತಾ?

ತೈಪೆ: ತೈವಾನ್ & ಚೀನಾ ಮಧ್ಯೆ ತಿಕ್ಕಾಟ ಯುದ್ಧದ ಸ್ವರೂಪ ಪಡೆಯುತ್ತಿದೆ. ಹೀಗಾಗಿ ಎರಡೂ ರಾಷ್ಟ್ರದ ನಡುವೆ ಪದೇ ಪದೆ ಜಗಳ ನಡೆಯುತ್ತಿದೆ. ಆದರೆ ಎಲ್ಲಿ ಚೀನಾ ಮತ್ತು ತೈವಾನ್ ಅಸ್ತ್ರಗಳನ್ನ ಕೈಗೆತ್ತಿಕೊಂಡು ಅಖಾಡಕ್ಕೆ ಇಳಿಯುತ್ತವೋ? ಎಂಬ ಅನುಮಾನ ದಟ್ಟವಾಗಿದೆ. ಇದೇ ಹೊತ್ತಲ್ಲಿ ಚೀನಾ ವಿರುದ್ಧ ತೈವಾನ್ ಗಂಭೀರ ಆರೋಪ ಮಾಡಿದ್ದು ಸಂಚಲನ ಸೃಷ್ಟಿಯಾಗಿದೆ.

ತೈವಾನ್ & ಅಮೆರಿಕ ದಿನದಿಂದ ದಿನಕ್ಕೆ ಹತ್ತಿರವಾಗುತ್ತಿವೆ. ಅದರಲ್ಲೂ ಅಮೆರಿಕ ನಾಯಕರು ತೈವಾನ್‌ಗೆ ಸಹಾಯ ಮಾಡುವ ನೆಪದಲ್ಲಿ ಚೀನಾಗೆ ಕಂಟಕ ತಂದೊಡ್ಡುತ್ತಿದ್ದಾರೆ ಎಂದು ಆರೋಪಿಸಿ ಚೀನಾ ರೊಚ್ಚಿಗೆದ್ದಿದೆ. ಹೀಗಿದ್ದಾಗಲೇ ತೈವಾನ್ ಆರೋಪ ಒಂದನ್ನ ಮಾಡಿದ್ದು, ಚೀನಾ ತಮಗೆ ಸೇರಿದ ಜಾಗದಲ್ಲಿ ಹೇಳದೆ ಕೇಳದೆ ಎಂಟ್ರಿ ಕೊಟ್ಟಿದೆ ಎಂದು ಆರೋಪಿಸಿದೆ. ಈ ಮೂಲಕ ಕಾಲು ಕೆರೆದುಕೊಂಡು ಚೀನಾ ಜೊತೆಗೆ ಜಗಳಕ್ಕೆ ಈ ಪುಟಾಣಿ ದೇಶ ಧೈರ್ಯವಾಗಿ ಮುನ್ನುಗ್ಗುತ್ತಿದೆ (Taiwan China War). ಹಾಗಾದರೆ ಇದರ ಪರಿಣಾಮ ಏನಾಗಬಹುದು?

Taiwan warns about China

ಯುದ್ಧನೌಕೆ ನುಗ್ಗಿಸಿದ ಚೀನಾ ಸೇನೆ

ಚೀನಾದ ಯುದ್ಧ ನೌಕೆ ಶಾನ್‌ಡಾಂಗ್ ತನ್ನ ಮತ್ತೆರಡು ಹಡಗುಗಳ ಜೊತೆಗೆ ತೈವಾನ್ ಜಲಸಂಧಿಯ ಮೂಲಕ ಪ್ರಯಾಣಿಸಿದೆ ಎಂದು ತೈವಾನ್ ರಕ್ಷಣಾ ಸಚಿವಾಲಯ ಆರೋಪ ಮಾಡಿದೆ. 2019ರಲ್ಲಿ ಚೀನಾ ನೌಕಾ ಸೇನೆಯ ಸೇವೆಗೆ ಎಂಟ್ರಿ ಕೊಟ್ಟಿತ್ತು ಶಾನ್‌ಡಾಂಗ್, ಚೀನಾ ಸೇನೆಯ ಅತ್ಯುನ್ನತ ನೌಕೆಗಳ ಪೈಕಿ ಇದು ಕೂಡ ಒಂದು. ಹೀಗಾಗಿ ಸಹಜವಾಗಿಯೇ ತೈವಾನ್ ಸೇನೆ ಚೀನಾದ ಈ ಯುದ್ಧ ನೌಕೆ ನೋಡಿ ಭಯಪಟ್ಟಿದೆ. ಹಾಗೇ ಇದೇ ರೀತಿ ಪರಿಸ್ಥಿತಿ ಮುಂದುವರಿದೆ ಮುಂದೆ ಹೇಗಪ್ಪಾ ಅನ್ನೋ ಚಿಂತೆ ಕೂಡ ತೈವಾನ್‌ಗೆ ಶುರುವಾಗಿದೆ.

ಯುದ್ಧ ಭೀತಿಯಲ್ಲಿ ತೈವಾನ್ ನರಳಾಟ!

ಅತ್ತ ಅಮೆರಿಕ ಸೇನೆ ತೈವಾನ್ ಪರ ನಿಂತಿದೆ. ಇತ್ತ ಚೀನಾ ಅದೇ ವಿಚಾರ ಹಿಡಿದು ತೈವಾನ್ ನಾಯಕರಿಗೆ ಎಚ್ಚರಿಕೆ ನೀಡುತ್ತಿದೆ. ಬೀಜಿಂಗ್ (Beijing) ಪದೇ ಪದೆ ತೈವಾನ್‌ಗೆ ಎಚ್ಚರಿಕೆ ನೀಡುತ್ತಲೇ ಬಂದಿದೆ. ಇದೇ ಸಂದರ್ಭದಲ್ಲಿ ತೈವಾನ್‌ಗೆ ಅಮೆರಿಕ 4 ಸಾವಿರ ಕೋಟಿ ರೂಪಾಯಿ ಮೌಲ್ಯದ ಶಸ್ತ್ರಾಸ್ತ್ರ ಪೂರೈಕೆಗೆ ಮುಂದಾಗಿದೆ ಎಂಬ ಮಾತು ಓಡಾಡ್ತಿದೆ. ಆದರೆ 3-4 ದಿನದ ಹಿಂದಷ್ಟೇ ತೈವಾನ್ ಅಧ್ಯಕ್ಷೆ ನಮಗೆ ಯುದ್ಧ ಬೇಡ ಶಾಂತಿ ಸಾಕು ಎಂದಿದ್ದರು. ಈ ನಡುವೆ ತನ್ನ ಮತ್ತೊಂದು ಯುದ್ಧ ನೌಕೆ ರವಾನಿಸಿ ತೈವಾನ್‌ಗೆ ಪರೋಕ್ಷ ಎಚ್ಚರಿಕೆ ನೀಡಿದೆ ಚೀನಾ.

Taiwan warns about China

ಸಮಸ್ಯೆಯ ಮೂಲಕ ಅಮೆರಿಕ?

ತೈವಾನ್ ವಿರುದ್ಧ ಚೀನಾ ಯುದ್ಧ ಸಾರುವ ಸ್ಥಿತಿ ನಿರ್ಮಿಸಿದ್ದ ಅಮೆರಿಕ ಈಗಲೂ ಕಿತಾಪತಿ ಮಾಡುತ್ತಿದೆ. ಚೀನಾ ಕೆರಳಿಸುವ ಕೆಲಸ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಕೆಲ ದಿನಗಳ ಹಿಂದಷ್ಟೇ ತೈವಾನ್ ಜಲಸಂಧಿ ಮೂಲಕ ಸೇನಾ ಹಡಗನ್ನ ಪ್ರಯಾಣಿಸಿಕೊಂಡು ಹೋಗಿತ್ತು ಅಮೆರಿಕ. ಬಳಿಕ ಚೀನಾ ತನ್ನ ಶಕ್ತಿ ಏನು ಅಂತಾ ಶತ್ರು ರಾಷ್ಟ್ರ ತೈವಾನ್‌ಗೆ ತೋರಿಸುತ್ತಲೇ ಇದೆ. ತೈವಾನ್ ವಿರುದ್ಧ ನೇರವಾಗಿ ತೊಡೆತಟ್ಟಿ, ರಣವೀಳ್ಯ ನೀಡಿದೆ ಚೀನಾ. ಹೀಗಾಗಿ ತೈವಾನ್ ಮತ್ತು ಚೀನಾ ಗಡಿಯಲ್ಲಿ ಯಾರೂ ಊಹಿಸದ ಸ್ಥಿತಿ ನಿರ್ಮಾಣವಾಗಿದೆ.

ಅಮೆರಿಕದ ಸಹವಾಸದಿಂದ ಕಂಟಕ?

ಅಷ್ಟಕ್ಕೂ ತೈವಾನ್ ನಾಯಕರು ಅಮೆರಿಕದ ಸಹವಾಸ ಮಾಡಿ ಪರದಾಡುತ್ತಿದ್ದಾರೆ. ಯಾಕಂದ್ರೆ ಅಮೆರಿಕ ಬೃಹತ್ ಮೊತ್ತದ ಸಹಾಯ ಮಾಡಲು ಮುಂದೆ ಬಂದಿದ್ದು ತೈವಾನ್ ಸೇನೆಗೆ ಚೀನಾ ವಿರುದ್ಧ ಹೋರಾಡಲು ಶಸ್ತ್ರಾಸ್ತ್ರವನ್ನ ಪೂರೈಕೆ ಮಾಡುತ್ತಿದೆ. ಇದು ಚೀನಾ ಸೇನೆ ಕೆರಳಿಸಿದ್ದು, ತೈವಾನ್ ಸರ್ಕಾರವನ್ನ ಹೊಸಕಿ ಹಾಕುವ ಎಚ್ಚರಿಕೆ ನೀಡಿತ್ತು. ಈ ರೀತಿ ಚೀನಾ ಉಗ್ರವಾದ ಹೇಳಿಕೆ ನೀಡಿ ಕೆಲವೇ ದಿನದಲ್ಲಿ ತೈವಾನ್ ಶಾಂತಿ ಮಂತ್ರ ಜಪಿಸುವ ಮೂಲಕ ಇಡೀ ಜಗತ್ತಿನ ಗಮನ ಸೆಳೆದಿದೆ.

Taiwan warns about China

3ನೇ ಮಹಾಯುದ್ಧದ ಆತಂಕ ಏಕೆ?

ಚೀನಾ ರೊಚ್ಚಿಗೆದ್ದಿದೆ ಅಮೆರಿಕ ವಿರುದ್ಧದ ಸಿಟ್ಟಲ್ಲಿ ಏನೇನೋ ಮಾಡಲು ಹೋಗುತ್ತಿದೆ. ಭೀಕರ ಸಮರಕ್ಕೆ ಚೀನಾ ಸೇನೆ ಸಿದ್ಧತೆ ನಡೆಸಿದೆ. ಇದರ ಮೊದಲ ಭಾಗವಾಗಿ ತೈವಾನ್ (Taiwan) ಗಡಿ ಆಕ್ರಮಿಸಿಕೊಳ್ತಿದೆ. ದ್ವೀಪರಾಷ್ಟ್ರದ ಸುತ್ತಲೂ ನೌಕಾಪಡೆಯ ಯುದ್ಧನೌಕೆ ಹಾಗೂ ಯುದ್ಧ ವಿಮಾನಗಳನ್ನ ರವಾನಿಸಿರುವ ಚೀನಾ, ಮತ್ತಷ್ಟು ಭೀಕರ ಅಸ್ತ್ರಗಳನ್ನ ತೈವಾನ್ ಗಡಿಗೆ ಸಾಗಿಸುತ್ತಿದೆ. ಇದೇ ಹೊತ್ತಲ್ಲಿ ತೈವಾನ್‌ಗೆ ಅಮೆರಿಕ ಬೆಂಬಲ ನೀಡಿ, ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಿದೆ. ಇದು 3ನೇ ಮಹಾಯುದ್ಧದ ಆತಂಕ ಮೂಡುವಂತೆ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+