ತಬ್ಲಿಘಿಗಳದ್ದು ದೊಡ್ಡ ಕುತಂತ್ರ, ಅವರಿಗೆಲ್ಲಾ ನಾಚಿಕೆಯಾಗಬೇಕು: ಕೇಂದ್ರ ಸಚಿವ ನಖ್ವಿ
ನವದೆಹಲಿ, ಏಪ್ರಿಲ್ 28: ಸುಮಾರು ಇನ್ನೂರಕ್ಕೂ ಹೆಚ್ಚು ತಬ್ಲಿಘಿ ಸದಸ್ಯರು ಪ್ಲಾಸ್ಮಾ ದಾನ ಮಾಡುವ ವಿಚಾರದಲ್ಲಿ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ, ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
Recommended Video
"ತಮ್ಮ ಕ್ರಿಮಿನಲ್ ನಡೆಗಳಿಂದ ದೇಶಾದ್ಯಂತ ಕೊರೊನಾ ಹರಡಲು ಕಾರಣರಾದ ಆ ತಬ್ಲಿಘಿಗಳು ಈಗ ತಮ್ಮನ್ನು ತಾವು ಕೊರೊನಾ ವಾರಿಯರ್ಸ್ ಎಂದು ಹೇಳಿಕೊಳ್ಳುತ್ತಿದ್ದಾರೆ".
"ತಮ್ಮ ದುಷ್ಕೃತ್ಯಗಳಿಂದ ನಾಚಿಕೆ ಪಡಬೇಕಾದ ಅವರು, ಲಕ್ಷಾಂತರ ಕೊರೊನಾ ವಾರಿಯರ್ಸ್ ಗಳಿಗೆ ಅವಮಾನ ಮಾಡುತ್ತಿದ್ದಾರೆ"ಎಂದು ಕೇಂದ್ರ ಸಚಿವ ನಖ್ವಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

"ದೇಶದ ಬಗ್ಗೆ ಅಭಿಮಾನ ಹೊಂದಿರುವಂತಹ ಕೆಲವು ಮುಸ್ಲಿಮರು ಪ್ಲಾಸ್ಮಾ ದಾನ ಮಾಡಿದ್ದಾರೆ. ಅವರನ್ನೆಲ್ಲಾ ತಬ್ಲಿಘಿಗಳು ಎಂದು ಕರೆಯುವುದು ತಪ್ಪು"ಎಂದು ಮುಖ್ತಾರ್ ಅಬ್ಬಾಸ್ ನಖ್ವಿ ಇನ್ನೊಂದು ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.
ಮುಸ್ಲಿಮರ ಪವಿತ್ರ ರಂಜಾನ್ ಮಾಸ ಆರಂಭವಾಗಿರುವ ಹಿನ್ನಲೆಯಲ್ಲಿ ದೆಹಲಿಯ ಸುಲ್ತಾನ್ ಪುರಿ ಕ್ವಾರಂಟೈನ್ ವಲಯದಲ್ಲಿ ನಾಲ್ವರು ತಬ್ಲಿಘಿ ಸಂಘಟನೆಯ ಸದಸ್ಯರು ಈಗಾಗಲೇ ಪ್ಲಾಸ್ಮಾ ದಾನ ಮಾಡಿದ್ದರು.
"ಒಬ್ಬ ಹಿಂದೂ ರೋಗಿ ಗಂಭೀರ ಪರಿಸ್ಥಿತಿಯಲ್ಲಿದ್ದು, ಮುಸ್ಲಿಂ ವ್ಯಕ್ತಿಯ ದೇಹದಿಂದ ತೆಗೆದ ಪ್ಲಾಸ್ಮಾದಿಂದ ಬದುಕಿ ಉಳಿದರೆ, ಅದೇ ರೀತಿ, ಹಿಂದೂ ವ್ಯಕ್ತಿಯ ರಕ್ತದಿಂದ ತೆಗೆದ ಪ್ಲಾಸ್ಮಾ ಮುಸ್ಲಿಂ ವ್ಯಕ್ತಿಯ ಜೀವವನ್ನು ಉಳಿಸಿದರೆ, ಅದರಲ್ಲಿ ತಪ್ಪೇನಿದೆ" ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದರು.












Click it and Unblock the Notifications