ಆಂಧ್ರದ ರಾಜ್ಯಪಾಲೆಯಾಗಿ ನೇಮಕ? ಸುಷ್ಮಾ ಸ್ವರಾಜ್ ನೀಡಿದರು ಸ್ಪಷ್ಟನೆ

ನವದೆಹಲಿ, ಜೂನ್ 10: ಆಂಧ್ರ ಪ್ರದೇಶದ ರಾಜ್ಯಪಾಲೆಯಾಗಿ ಸುಷ್ಮಾ ಸ್ವರಾಜ್ ಅವರು ನೇಮಕವಾಗಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿತ್ತು, ಆದರೆ ಈಗ ಅದಕ್ಕೆ ಸ್ವತಃ ಸುಷ್ಮಾ ಸ್ವರಾಜ್ ಸ್ಪಷ್ಟನೆ ನೀಡಿದ್ದಾರೆ.

ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, ಆಂಧ್ರ ಪ್ರದೇಶದ ರಾಜ್ಯಪಾಲೆಯಾಗಿ ನೇಮಕ ಆಗಿದ್ದೇನೆ ಎಂದು ನನ್ನ ಬಗ್ಗೆ ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂದು ಹೇಳಿದ್ದಾರೆ.

Sushma Swaraj gives clarification to news circulating about her

ಆಂಧ್ರ ಪ್ರದೇಶದ ರಾಜ್ಯಪಾಲೆ ಆಗಿ ಸುಷ್ಮಾ ಸ್ವರಾಜ್ ಅವರನ್ನು ನೇಮಿಸಲಾಗುತ್ತಿದೆ ಎಂಬ ಸುದ್ದಿ ಭಾರಿ ಹರಿದಾಡುತ್ತಿತ್ತು. ಕೇಂದ್ರ ಸಚಿವ ಹರ್ಷವರ್ಧನ್ ಅವರು ಸಹ ಈ ಬಗ್ಗೆ ಟ್ವೀಟ್ ಮಾಡಿ ಸುಷ್ಮಾ ಸ್ವರಾಜ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದರು, ಆದರೆ ಆ ನಂತರ ಅವರು ಟ್ವೀಟ್ ಡಿಲೀಟ್ ಮಾಡಿದ್ದಾರೆ.

ಆದರೆ ಈಗ ಎಲ್ಲ ಅನುಮಾನಗಳಿಗೆ ಸುಷ್ಮಾ ಸ್ವರಾಜ್ ಅವರು ತೆರೆ ಎಳೆದಿದ್ದು, ತಾವು ಆಂಧ್ರ ಪ್ರದೇಶದ ರಾಜ್ಯಪಾಲೆ ಆಗಿ ನೇಮಕ ಆಗಿರುವುದು ಸುಳ್ಳು ಸುದ್ದಿಯಷ್ಟೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+