ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುವಕರಿಗಾಗಿ ಸೂರ್ಯಮಿತ್ರ ಕೌಶಲ್ಯ ಅಭಿವೃದ್ಧಿ ಯೋಜನೆ

|
Google Oneindia Kannada News

ನವದೆಹಲಿ, ಜುಲೈ. 27: ಇಂಧನ ಸಚಿವಾಲಯವು ಯುವಕರಿಗೆ 2015-16ರ ಹಣಕಾಸು ವರ್ಷದಿಂದ ಗುರುಗ್ರಾಮದ ರಾಷ್ಟ್ರೀಯ ಸೌರಶಕ್ತಿ ಸಂಸ್ಥೆ ಮೂಲಕ ಸೂರ್ಯಮಿತ್ರ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮವನ್ನು ಈಗಾಗಲೇ ಜಾರಿಗೊಳಿಸಿದೆ.

ಇದು 18 ವರ್ಷಕ್ಕಿಂತ ಮೇಲ್ಪಟ್ಟ ಯುವಕರಿಗೆ ಹೊಸ ಮತ್ತು ನವೀಕರಿಸಬಹುದಾದ ಸೌರಶಕ್ತಿಯ ಸ್ಥಾಪನೆ, ಅದರ ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ಸೌರ ಪಿವಿ ತಂತ್ರಜ್ಞರಾಗಿ ತರಬೇತಿ ನೀಡಲಾಗುತ್ತಿದೆ. ರಾಜ್ಯಸಭೆಯಲ್ಲಿ ಇಂಧನ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರು ಈ ಮಾಹಿತಿಯನ್ನು ದೃಢಪಡಿಸಿದ್ದಾರೆ.

ಅರಣ್ಯ ಇಲಾಖೆ ಸೇರಿದ ಸೌರಶಕ್ತಿ ಬೈಕ್, ವಿಶೇಷತೆಗಳು ಅರಣ್ಯ ಇಲಾಖೆ ಸೇರಿದ ಸೌರಶಕ್ತಿ ಬೈಕ್, ವಿಶೇಷತೆಗಳು

ಜೂನ್ 2022 ರವರೆಗೆ ಒಟ್ಟು 51,331 ಅಭ್ಯರ್ಥಿಗಳು ಸೂರ್ಯಮಿತ್ರ ಕಾರ್ಯಕ್ರಮದ ಅಡಿಯಲ್ಲಿ ನೀಡಲಾದ ಕೌಶಲ್ಯ ಅಭಿವೃದ್ಧಿ ತರಬೇತಿಯಿಂದ ಪ್ರಯೋಜನ ಪಡೆದಿದ್ದಾರೆ. ಅದರಲ್ಲಿ 26,967 ಅಭ್ಯರ್ಥಿಗಳು ಈಗಾಗಲೇ ಉದ್ಯೋಗವನ್ನೂ ಪಡೆದಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಮೇ 2021ರಲ್ಲಿ ಸಲ್ಲಿಸಲಾದ ಮಾನವ ಸಂಪನ್ಮೂಲ ಅಭಿವೃದ್ಧಿ ಕಾರ್ಯಕ್ರಮದ ಮೌಲ್ಯಮಾಪನ ವರದಿಯು ಸೂರ್ಯಮಿತ್ರ ಕಾರ್ಯಕ್ರಮಕ್ಕೆ ರೇಟಿಂಗ್‌ ನೀಡಿದೆ. ಸ್ಕೇಲ್, ಸ್ಪ್ರೆಡ್ ಆಫ್ ಆಪರೇಷನ್ ಪ್ರಕಾರ ಯುವಕರಲ್ಲಿ ಕೌಶಲ್ಯ ಹೆಚ್ಚಿಸುವುದು, ಪ್ರಶಿಕ್ಷಣಾರ್ಥಿಗಳ ಕೆಲಸದ ಸಿದ್ಧತೆ ಮತ್ತು ಉದ್ಯೋಗದ ಶೇಕಡಾವಾರು ಹೆಚ್ಚಳ ಮುಂತಾದ ವಿಷಯದಲ್ಲಿ ಉನ್ನತ ಮಟ್ಟದ ಬೆಳವಣಿಗೆಯನ್ನು ಹೊಂದಿದೆ ಎಂದು ಹೇಳಿದೆ.

ಇದಲ್ಲದೆ, ಡಿಸೆಂಬರ್ 2020ರಲ್ಲಿ ಸ್ಕಿಲ್ ಕೌನ್ಸಿಲ್ ಆಫ್ ಗ್ರೀನ್ ಜಾಬ್ಸ್ ಸಿದ್ಧಪಡಿಸಿದ ಸೂರ್ಯಮಿತ್ರ ತರಬೇತಿ ಕಾರ್ಯಕ್ರಮದ ಪರಿಣಾಮ ಮೌಲ್ಯಮಾಪನ ವರದಿಯು 90 ಪ್ರತಿಶತಕ್ಕೂ ಹೆಚ್ಚು ತರಬೇತಿದಾರರು ತಾಂತ್ರಿಕ ಜ್ಞಾನದಲ್ಲಿ ಸುಧಾರಣೆಯನ್ನು ಕಂಡುಕೊಂಡಿದ್ದಾರೆ. ಉದ್ಯೋಗ ವಲಯದಲ್ಲಿನ 88 ಪ್ರತಿಶತ ತರಬೇತಿದಾರರು ಸುಧಾರಿತ ಕಾರ್ಯಕ್ಷಮತೆ ಮತ್ತು ಉದ್ಯೋಗಾವಕಾಶಗಳ ಹೆಚ್ಚಳ ಇಲ್ಲಿ ಕಂಡು ಬಂದಿದೆ ಎಂದು ಹೇಳಿದ್ದಾರೆ.

 ರಾಷ್ಟ್ರೀಯ ಕೇಂದ್ರವಾಗಿ ಕಾರ್ಯ

ರಾಷ್ಟ್ರೀಯ ಕೇಂದ್ರವಾಗಿ ಕಾರ್ಯ

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸೋಲಾರ್ ಎನರ್ಜಿ (ಎನ್‌ಐಎಸ್‌ಇ) ಇಂಧನ ಸಚಿವಾಲಯದ ಸ್ವಾಯತ್ತ ಸಂಸ್ಥೆಯಾಗಿದೆ. ಭಾರತ ಸರ್ಕಾರವು ಇತ್ತೀಚೆಗೆ ತನ್ನ ಹಿಂದಿನ ಸೌರಶಕ್ತಿ ಕೇಂದ್ರವನ್ನು ಗುರುಗಾಂವ್‌ನಲ್ಲಿರುವ ದೇಶದ ಸೌರ ಶಕ್ತಿ ತಂತ್ರಜ್ಞಾನಗಳ ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ತಂತ್ರಜ್ಞಾನ ಅಭಿವೃದ್ಧಿ ಸಂಬಂಧಿತ ಚಟುವಟಿಕೆಗಳಿಗಾಗಿ ಅಪೆಕ್ಸ್ ರಾಷ್ಟ್ರೀಯ ಕೇಂದ್ರವಾಗಿ ಕಾರ್ಯನಿರ್ವಹಿಸಲು ಪರಿವರ್ತಿಸಲಾಗಿದೆ.

 ಸೌರಶಕ್ತಿ ವಿದ್ಯುತ್ ಯೋಜನೆಗಳ ಸ್ಥಾಪನೆ

ಸೌರಶಕ್ತಿ ವಿದ್ಯುತ್ ಯೋಜನೆಗಳ ಸ್ಥಾಪನೆ

ಎಂಎನ್‌ಆರ್‌ಇಯ ಕೌಶಲ್ಯ ಅಭಿವೃದ್ಧಿ ಉಪಕ್ರಮಗಳ ಅಡಿಯಲ್ಲಿ, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸೋಲಾರ್ ಎನರ್ಜಿ ಅನ್ನು ಸೂರ್ಯಮಿತ್ರ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮದ (ಎಸ್‌ಎಸ್‌ಡಿಪಿ) ಅನುಷ್ಠಾನಕ್ಕೆ ನೋಡಲ್ ಏಜೆನ್ಸಿಯಾಗಿ ನಿಗದಿಗೊಳಿಸಲಾಗಿದೆ. ಭಾರತ ಮತ್ತು ವಿದೇಶಗಳಲ್ಲಿ ಬೆಳೆಯುತ್ತಿರುವ ಸೌರಶಕ್ತಿ ವಿದ್ಯುತ್ ಯೋಜನೆಗಳ ಸ್ಥಾಪನೆ, ಕಾರ್ಯಾಚರಣೆ ನಿರ್ವಹಣೆಯಲ್ಲಿ ಉದ್ಯೋಗಾವಕಾಶಗಳನ್ನು ಪರಿಗಣಿಸಿ ಯುವಕರ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಎಸ್‌ಎಸ್‌ಡಿಪಿ ಹೊಂದಿದೆ. ಸೋಲಾರ್ ಎನರ್ಜಿ ವಲಯದಲ್ಲಿ ಹೊಸ ಉದ್ಯಮಿಗಳಾಗಲು ಅಭ್ಯರ್ಥಿಗಳನ್ನು ಸಿದ್ಧಪಡಿಸಲು ಎಸ್‌ಎಸ್‌ಡಿಪಿ ಅನ್ನು ವಿನ್ಯಾಸಗೊಳಿಸಲಾಗಿದೆ.

 ಗ್ರಾಮೀಣ ಹಿನ್ನೆಲೆಯ ವ್ಯಕ್ತಿಗಳಿಗೆ ಆದ್ಯತೆ

ಗ್ರಾಮೀಣ ಹಿನ್ನೆಲೆಯ ವ್ಯಕ್ತಿಗಳಿಗೆ ಆದ್ಯತೆ

ಈ ಯೋಜನೆಯಲ್ಲಿ ಭಾಗವಹಿಸುವವರ ವಿದ್ಯಾರ್ಹತೆ ಐಟಿಐ, ಡಿಪ್ಲೊಮಾ (ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಸಿವಿಲ್, ಮೆಕ್ಯಾನಿಕಲ್, ಫಿಟ್ಟರ್, ಇನ್‌ಸ್ಟ್ರುಮೆಂಟೇಶನ್, ವೆಲ್ಡರ್) ಆಗಿರುತ್ತದೆ. ಗ್ರಾಮೀಣ ಹಿನ್ನೆಲೆಯಿಂದ ಬರುವ ವ್ಯಕ್ತಿಗಳು, ನಿರುದ್ಯೋಗಿ ಯುವಕರು, ಮಹಿಳೆಯರು, ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ವಿಶೇಷ ಒತ್ತು ನೀಡಲು ಇಲ್ಲಿ ಮುಂದಾಗಲಾಗಿದೆ.

 ಸ್ಕಿಲ್ ಕೌನ್ಸಿಲ್ ಆಫ್ ಗ್ರೀನ್ ಜಾಬ್ಸ್‌ನಿಂದ ಪ್ರಮಾಣಪತ್ರ

ಸ್ಕಿಲ್ ಕೌನ್ಸಿಲ್ ಆಫ್ ಗ್ರೀನ್ ಜಾಬ್ಸ್‌ನಿಂದ ಪ್ರಮಾಣಪತ್ರ

ಇಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿ ಕೇಂದ್ರದಲ್ಲಿ ವಸತಿ ಸೌಲಭ್ಯಗಳನ್ನು ಒದಗಿಸಲಾಗುವುದು. ಕೋರ್ಸ್‌ನ ಕೊನೆಯಲ್ಲಿ ಸರಿಯಾದ ಮೌಲ್ಯಮಾಪನವನ್ನು ಮಾಡಲಾಗುತ್ತದೆ. ಅಲ್ಲದೆ ಸ್ಕಿಲ್ ಕೌನ್ಸಿಲ್ ಆಫ್ ಗ್ರೀನ್ ಜಾಬ್ಸ್‌ನಿಂದ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ. ಇದಕ್ಕೆ ಯಾವುದೇ ವಿಭಾಗದಲ್ಲಿ ಪದವಿ ಅಥವಾ ಅದಕ್ಕಿಂತ ಹೆಚ್ಚಿನ ವಿದ್ಯಾರ್ಹತೆ ಹೊಂದಿರುವ ವ್ಯಕ್ತಿಗಳನ್ನು ಈ ಯೋಜನಾ ವ್ಯಾಪ್ತಿಯಿಂದ ಹೊರಗಿಡಲಾಗಿದೆ.

English summary
The Ministry of Energy has already implemented the Suryamitra Skill Development Program through the National Solar Energy Institute, Gurugram from the financial year 2015-16.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X