ಪಟಾಕಿ ಮುಕ್ತ ದೀಪಾವಳಿ ಜಾಗೃತಿಗೆ ವಿರಾಟ್ ಕೊಹ್ಲಿ ನೆರವು ಪಡೆಯಿರಿ: ಸುಪ್ರೀಂ ಕೋರ್ಟ್ ಮಹತ್ವದ ಸಲಹೆ

Deepavali Festival: ಬೆಳಕಿನ ಹಬ್ಬ ದೀಪಾವಳಿ ಸಮೀಪಿಸುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್‌ ಮಹತ್ವದ ಸಲಹೆ ನೀಡಿದೆ. ಅದರಲ್ಲೂ ವಿರಾಟ್‌ ಕೊಹ್ಲಿ ಹೆಸರು ಹೇಳಿರುವುದು ಇದೀಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ದೀಪಾವಳಿ ಎಂದರೆ ಮನೆಮನಗಳಲ್ಲಿ ಬೆಳಕು, ಸಿಹಿತಿಂಡಿ ಹಾಗೂ ಸಡಗರ. ಆದರೆ ಇತ್ತೀಚಿನ ವರ್ಷಗಳಲ್ಲಿ ಪಟಾಕಿಗಳ ಹೊಗೆ ಮತ್ತು ಶಬ್ದದಿಂದಾಗಿ ದೇಶದ ಪ್ರಮುಖ ನಗರಗಳಲ್ಲಿ, ವಿಶೇಷವಾಗಿ ನವದೆಹಲಿಯಲ್ಲಿ ವಾಯುಮಾಲಿನ್ಯದ ಸಮಸ್ಯೆ ತೀವ್ರಗೊಳ್ಳುತ್ತಿದ್ದು, ಜನರು ಉಸಿರಾಡಲೂ ಕಷ್ಟಪಡುವ ವಾತಾವರಣ ನಿರ್ಮಾಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜನರಲ್ಲಿ ಮಾಲಿನ್ಯರಹಿತ ದೀಪಾವಳಿ ಕುರಿತು ಅರಿವು ಮೂಡಿಸಲು ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ ಅವರಂತಹ ಜನಪ್ರಿಯ ವ್ಯಕ್ತಿಗಳ ನೆರವು ಪಡೆಯುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಿದೆ.

Supreme Court Suggests Virat Kohli s Help to Promote Pollution-Free Deepavali Know complete details

ವಿರಾಟ್‌ ಕೊಹ್ಲಿಯಂತಹ ಕ್ರೀಡಾಪಟುಗಳಿಂದ ಜಾಗೃತಿ ಸಂದೇಶ

ಕ್ರಿಕೆಟ್ ಮೈದಾನದಲ್ಲಿ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ವಿರಾಟ್ ಕೊಹ್ಲಿ ಅವರ ಸಾಧನೆ ಮತ್ತು ಜೀವನಶೈಲಿ ಯುವಜನತೆಗೆ ಪ್ರೇರಣೆಯಾಗಿದೆ. ಇಂತಹ ಜನಪ್ರಿಯ ಕ್ರೀಡಾಪಟು ಪಟಾಕಿ ಮುಕ್ತ ಆಚರಣೆಯ ಸಂದೇಶ ನೀಡಿದರೆ, ಅದು ಜನರ ಮನಸ್ಸಿನ ಮೇಲೆ ಹೆಚ್ಚಿನ ಪ್ರಭಾವ ಬೀರಲಿದೆ ಎಂಬುದು ನ್ಯಾಯಾಲಯದ ಆಶಯವಾಗಿದೆ.

ವಿಚಾರಣೆ ವೇಳೆ ನ್ಯಾಯಮೂರ್ತಿ ಎಂ.ಎಂ.ಸುಂದರೇಶ್ ಅವರು, 'ವಿರಾಟ್ ಕೊಹ್ಲಿಯಂತಹ ಪ್ರಸಿದ್ಧ ಕ್ರಿಕೆಟಿಗರನ್ನು ಸಂಪರ್ಕಿಸಿ, ಈ ದೀಪಾವಳಿಯನ್ನು ಸಂತೋಷ ಹಾಗೂ ಸುರಕ್ಷತೆಯಿಂದ ಆಚರಣೆ ಮಾಡುವಂತೆ ಜನರಿಗೆ ಸಂದೇಶ ನೀಡಲು ಕೋರಬಹುದು. ಇದರಿಂದ ಬೆಳಕಿನ ಹಬ್ಬದ ನಿಜವಾದ ಸಂಭ್ರಮವನ್ನು ಅನುಭವಿಸುವ ಅರಿವು ಜನರಲ್ಲಿ ಮೂಡುತ್ತದೆ,' ಎಂದು ಅಭಿಪ್ರಾಯಪಟ್ಟಿದ್ದಾರೆ.

ಆರೋಗ್ಯದ ಮೇಲಾಗುವ ಗಂಭೀರ ಪರಿಣಾಮಗಳ ವಿವರ

ಪಟಾಕಿ ಸಿಡಿಸುವುದು ಅನೇಕರಿಗೆ ಸಂಪ್ರದಾಯ ಮತ್ತು ಸಂತೋಷದ ಭಾಗವಾಗಿದೆ. ಆದರೂ ಅವುಗಳಿಂದ ಹೊರಬರುವ ವಿಷಕಾರಿ ಅನಿಲಗಳು ಮತ್ತು PM2.5 ಸೂಕ್ಷ್ಮ ಕಣಗಳು ಉಸಿರಾಟದ ಮೂಲಕ ರಕ್ತಪ್ರವಾಹವನ್ನು ಪ್ರವೇಶಿಸಿ ಪ್ರಮುಖ ಅಂಗಾಂಗಗಳಿಗೆ ಹಾನಿ ಉಂಟುಮಾಡುತ್ತವೆ. ವಿಶೇಷವಾಗಿ ಮಕ್ಕಳು, ವೃದ್ಧರು ಹಾಗೂ ಉಸಿರಾಟದ ತೊಂದರೆ ಇರುವವರು ಇದರಿಂದ ಗಂಭೀರ ಅಪಾಯ ಎದುರಿಸುತ್ತಾರೆ ಎಂದು ಕೋರ್ಟ್‌ಗೆ ತಿಳಿಸಲಾಯಿತು.

ಅಷ್ಟೇ ಅಲ್ಲದೆ, ಹಸಿರು ಪಟಾಕಿಗಳ ಹೆಸರಿನಲ್ಲಿ ಮಾರಾಟವಾಗುವ ಉತ್ಪನ್ನಗಳು ಸಾಮಾನ್ಯ ಪಟಾಕಿಗಳಿಗಿಂತ ಶೇಕಡ 30ರಷ್ಟು ಕಡಿಮೆ ಮಾಲಿನ್ಯ ಉಂಟುಮಾಡಬಹುದು. ಆದರೂ ಅವು ಸಂಪೂರ್ಣ ಮಾಲಿನ್ಯರಹಿತವಲ್ಲ ಎಂಬುದನ್ನೂ ನ್ಯಾಯಾಲಯದ ಗಮನಕ್ಕೆ ತರಲಾಯಿತು.

ದೀಪಾವಳಿಯ ಮೂಲ ಸಂಪ್ರದಾಯದ ಕುರಿತು ಮಹತ್ವದ ಮಾಹಿತಿ

ಹಬ್ಬದ ಮೂಲ ಸ್ವರೂಪದ ಕುರಿತು ಮಾತನಾಡಿದ ನ್ಯಾಯಮೂರ್ತಿ ಸುಂದರೇಶ್, 'ಆರಂಭಿಕ ದಿನಗಳಲ್ಲಿ ದೀಪಾವಳಿಯಲ್ಲಿ ಪಟಾಕಿ ಸಿಡಿಸುವ ಸಂಪ್ರದಾಯ ಇರಲಿಲ್ಲ. ಗನ್‌ಪೌಡರ್ ಬಳಕೆ ಆರಂಭವಾದ ನಂತರವೇ ಪಟಾಕಿಗಳು ಹಬ್ಬದ ಭಾಗವಾಗಿರಬಹುದು. ದೀಪಾವಳಿಯ ನಿಜವಾದ ಸಂಭ್ರಮ ದೀಪಗಳ ಬೆಳಕು, ಕುಟುಂಬದ ಒಗ್ಗಟ್ಟು ಮತ್ತು ಸಂತೋಷದಲ್ಲಿದೆ,' ಎಂದು ತಿಳಿಸಿದರು.

ಸುಪ್ರೀಂ ಕೋರ್ಟ್ ಹೇಳಿದ್ದೇನು?

ಪಟಾಕಿಗಳ ತಯಾರಿಕೆ ಮತ್ತು ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಅರ್ಜಿದಾರರು ಒತ್ತಾಯಿಸಿದರೆ, ಪಟಾಕಿ ತಯಾರಕರ ಪರ ವಕೀಲರು ಸಂಪೂರ್ಣ ನಿಷೇಧದಿಂದ ಅಕ್ರಮ ಮಾರಾಟ ಹೆಚ್ಚಾಗಬಹುದು ಎಂದು ವಾದಿಸಿದರು. ಪಟಾಕಿಗಳಲ್ಲಿ 'ಬೇರಿಯಂ' ಬಳಕೆಯ ಪ್ರಮಾಣ ಸೇರಿದಂತೆ ಇತರ ನಿಯಂತ್ರಣ ಕ್ರಮಗಳನ್ನು ದೀಪಾವಳಿ ಹಬ್ಬದ ನಂತರ ಪರಿಶೀಲಿಸುವುದಾಗಿ ತಿಳಿಸಿರುವ ಸುಪ್ರೀಂ ಕೋರ್ಟ್, ಜನಪ್ರಿಯ ಕ್ರಿಕೆಟಿಗರ ಮೂಲಕ ಜಾಗೃತಿ ಮೂಡಿಸುವ ಆಲೋಚನೆಗೆ ಒತ್ತು ನೀಡಿದೆ. ಒಟ್ಟಿನಲ್ಲಿ ಪಟಾಕಿ ಹೊಡೆಯದಂತೆ ದೀಪಾವಳಿ ಆಚರಿಸುವಂತೆ ಸಂದೇಶ ನೀಡಿ ಎಂದು ಹೇಳುವ ಮೂಲಕ ಗಮನ ಸೆಳೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+