GST: ಸಕ್ಕರೆ, ಟೀ, ಕಾಫಿ ಬೆಲೆ ಜುಲೈ 1ರಿಂದ ಇಳಿಕೆ
ಜೂನ್ 1 ರಿಂದ ಸಕ್ಕರೆ, ಟೀ, ಕಾಫಿ ಮತ್ತು ಹಾಲಿನ ಪುಡಿ ಬೆಲೆ ಕಡಿಮೆಯಾಗಲಿದೆ. ಇದೀಗ ಸಕ್ಕರೆ ಮೇಲೆ ಒಟ್ಟಾರೆ ಶೇಕಡಾ 8 ತೆರಿಗೆ ಇದೆ. ಜಿಎಸ್ಟಿ ಜಾರಿಗೆ ಬರುತ್ತಿದ್ದಂತೆ ಇದು ಇಳಿಕೆಯಾಗಲಿದೆ.
ನವದೆಹಲಿ, ಮೇ 25: ಜೂನ್ 1 ರಿಂದ ಸಕ್ಕರೆ, ಟೀ, ಕಾಫಿ ಮತ್ತು ಹಾಲಿನ ಪುಡಿ ಬೆಲೆ ಕಡಿಮೆಯಾಗಲಿದೆ. ಸದ್ಯ ಸಕ್ಕರೆಗೆ ಕ್ವಿಂಟಾಲಿಗೆ 71 ರೂಪಾಯಿ ಅಬಕಾರಿ ಸುಂಕ ಹಾಗೂ 124 ರೂಪಾಯಿ ಸೆಸ್ ವಿಧಿಸಲಾಗುತ್ತಿದೆ.
ಇದೀಗ ಸಕ್ಕರೆ ಮೇಲೆ ಒಟ್ಟಾರೆ ಶೇಕಡಾ 8 ತೆರಿಗೆ ಇದೆ. ಜಿಎಸ್ಟಿ ಜಾರಿಗೆ ಬರುತ್ತಿದ್ದಂತೆ ಇದು ಇಳಿಕೆಯಾಗಲಿದೆ.

"ಜಿಎಸ್ಟಿಯಲ್ಲಿ ಸಕ್ಕರೆಗೆ ಕೇವಲ ಶೇಕಡಾ 5 ತೆರಿಗೆ ಶಿಫಾರಸ್ಸು ಮಾಡಲಾಗಿದೆ. ಸದ್ಯದ ತೆರಿಗೆಗಿಂತ ಇದು ಶೇಕಡಾ 3ರಷ್ಟು ಕಡಿಮೆಯಾಗಿದೆ," ಎಂದು ಹಣಕಾಸು ಇಲಾಖೆ ಹೇಳಿದೆ.
ಇದೇ ರೀತಿಯಲ್ಲಿ ಕಾಫಿ ಮತ್ತು ಚಹಾ ಬೆಲೆಯೂ ಇಳಿಕೆಯಾಗಲಿದೆ. ಸದ್ಯ ಇವುಗಳ ಮೇಲೆ ಶೇಕಡಾ 7 ತೆರಿಗೆ ಇದ್ದು ಇದು ಶೇಕಡಾ 5ಕ್ಕೆ ಇಳಿಕೆಯಾಗಲಿದೆ.
ಇನ್ನು ಸದ್ಯ ಹಾಲಿನ ಪೌಡರ್ ಮೇಲೆ ಶೇಕಡಾ 7 ತೆರಿಗೆ ಇದೆ. ಮುಂದೆ ಇದು ಶೇಕಡಾ 5ಕ್ಕೆ ಇಳಿಕೆಯಾಗಲಿದೆ.
ಇನ್ನು ಎಲ್ಲಾ ಉತ್ಪನ್ನಗಳ ಮೇಲೆ ಪರೋಕ್ಷ ತೆರಿಗೆಯೂ ಇರದೇ ಇರುವುದರಿಂದ ಇನ್ನೂ ಒಂದಷ್ಟು ಬೆಲೆ ಇಳಿಕೆಯಾಗಲಿದೆ.












Click it and Unblock the Notifications