ಕೈಯಿಲ್ಲ ಎಂದು ಕೊರಗಿ ಕೂರಲಿಲ್ಲ : NIT ಮುಗಿಸಿ ಅಮೆಜಾನ್‌ನಲ್ಲಿ SDE-II ಹುದ್ದೆಗೇರಿದ ಸಾಯಿ ಭರತ್

Success Story: ಸಾಧನೆ ಮಾಡುವ ಮನಸ್ಸಿದ್ದರೆ ಯಾವುದೂ ಅಸಾಧ್ಯ ಅಲ್ಲ. ಮನಸ್ಸಿದ್ದರೆ ಮಾರ್ಗ ಎನ್ನುವ ಗಾದೆ ಮಾತಿನಂತೆ ನಾವು ಮನಸ್ಸು ಮಾಡಬೇಕು ಅಷ್ಟೇ. ಜೀವನದಲ್ಲಿ ಮುಂದೆ ಬರಲೇ ಬೇಕು ಏನ್ನನ್ನಾದರೂ ಸಾಧಿಸಲೇ ಬೇಕು ಎನ್ನು ಹಠ ಇದ್ದರೆ ಯಾವ ನ್ಯೂನತೆಯೂ ಅಡ್ಡಿಯಾಗುವುದಿಲ್ಲ. ಇದಕ್ಕೆ ಜೀವಂತ ಸಾಕ್ಷಿ ಸಾಯಿ ಭರತ್.‌

Success Story Man Born Without Left Hand Studied At NIT Warangal Working In Amazon Software Development Engineer

50 ಲಕ್ಷಕ್ಕಿಂತ ಹೆಚ್ಚು ಸಂಪಾದನೆ :

ದೇಹದ ಎಲ್ಲಾ ಅಂಗಗಳು ಸರಿಯಾಗಿದ್ದರೂ ಕೆಲವರಿಗೆ ಕೆಲಸ ಮಾಡುವುದಕ್ಕೆ ಇಷ್ಟವಿರುವುದಿಲ್ಲ. ಕೆಲಸಕ್ಕೆ ಹೋಗಲು ಹೇಳುವಾಗ ಒಂದಲ್ಲ ಒಂದು ಖ್ಯಾತೆ ತೆಗೆಯುತ್ತಾರೆ. ಆರಾಮಾಗಿ ಕುಳಿತು ಅಪ್ಪ ಅಮ್ಮ ಮಾಡಿಟ್ಟ ಆಸ್ತಿಯನ್ನು ಕರಗಿಸುವುದರಲ್ಲೇ ಜೀವನ ಕಳೆಯುತ್ತಾರೆ. ಆದರೆ ಸಾಯಿ ಭರತ್.‌ ಇದಕ್ಕೆ ವ್ಯತಿರಿಕ್ತ. ಹುಟ್ಟುತ್ತಲೇ ಇವರಿಗೆ ಒಂದು ಕೈ ಇಲ್ಲ. ಆದರೂ ಇವತ್ತಿಗೆ 50 ಲಕ್ಷಕ್ಕಿಂತ ಹೆಚ್ಚು ಹಣ ಸಂಪಾದಿಸ್ತಾ ಇದ್ದಾರೆ.

ಅಮೆಜಾನ್‌ನಲ್ಲಿ ಪ್ರಮುಖ ಹುದ್ದೆ :

ಎಡಗೈ ಇಲ್ಲದೆ ಹುಟ್ಟಿದ ಸಾಯಿ ಭರತ್ ಸಾಧನೆಗೆ ದೈಹಿಕ ಅಂಗವೈಕಲ್ಯ ಅಡ್ಡಿಯಾಗಲೇ ಇಲ್ಲ. ತನಗೆ ಕೈ ಇಲ್ಲ ಎನ್ನುವುದನ್ನು ಮರೆತು ಕನಸಿನ ದಾರಿಯಲ್ಲಿ ಮುಂದುವರೆದಿದ್ದಾರೆ. ಹೀಗೆ ಕಷ್ಟಪಟ್ಟು ಮುಂದೆ ಸಾಗಿದ ಭರತ್‌ ಇವತ್ತು ಅಮೆಜಾನ್‌ನಲ್ಲಿ SDE-II ಆಗಿ ಕೆಲಸ ಮಾಡುತ್ತಿದ್ದಾರೆ. ಇವರು ವರ್ಷಕ್ಕೆ 50 ಲಕ್ಷಕ್ಕಿಂತ ಹೆಚ್ಚು ಸಂಬಳ ತಗೋತಾ ಇದ್ದಾರೆ. ಸಾಯಿ ಭರತ್ ಅವರ ಜರ್ನಿ ಸೋಶಿಯಲ್‌ ಮಿಡಿಯಾದಲ್ಲಿ ಶೇರ್‌ ಆದ ಬಳಿಕ ಇದೀಗ ಈ ಬಗ್ಗೆ ಎಲ್ಲಾ ಕಡೆ ಚರ್ಚೆ ನಡೀತಾ ಇದೆ. ವಿಕಾಸ್ ಅಲ್ವಿಸ್ ಎನ್ನುವವರು ತಮ್ಮ ಎಕ್ಸ್‌ ಅಕೌಂಟ್‌ನಲ್ಲಿ ಭರತ್‌ ಬಗ್ಗೆ ಪೋಸ್ಟ್‌ ಮಾಡಿದ್ದಾರೆ.

NIT ವಾರಂಗಲ್‌ನಿಂದ ಶುರುವಾದ Success Story:

ಸಾಯಿ ಭರತ್ 2023ರಲ್ಲಿ ಎನ್‌ಐಟಿ ವಾರಂಗಲ್‌ನಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿ.ಟೆಕ್ ಪದವಿ ಪಡೆದಿದ್ದಾರೆ. ಈ ಮೂಲಕ ಅವರು ಟೆಕ್‌ ಜಗತ್ತಿಗೆ ಕಾಲಿಟ್ಟಿದ್ದಾರೆ. ಕ್ರಮೇಣ ವೃತ್ತಿಜೀವನದಲ್ಲಿ ಪ್ರಗತಿ ಸಾಧಿಸಿದ್ದಾರೆ. ಕೆಲವೇ ವರ್ಷಗಳಲ್ಲಿ, ಅವರು ಅಮೆಜಾನ್‌ನಲ್ಲಿ SDE-II ಹುದ್ದೆಗೆ ಏರಿದ್ದಾರೆ. ಸೋಶಿಯಲ್‌ ಮಿಡಿಯಾ ಪೋಸ್ಟ್‌ ಪ್ರಕಾರ, ಈಗ ಅವರ ವಾರ್ಷಿಕ ವೇತನ 50 ಲಕ್ಷವನ್ನು ಮೀರಿದೆ.

ಅಮೆಜಾನ್ ಪೇ ಟೀಂ ಜೊತೆ ಕೆಲಸ :

ಭರತ್ ಪ್ರಸ್ತುತ ಅಮೆಜಾನ್ ಪೇ ಟೀಂ ಜೊತೆ ಕೆಲಸ ಮಾಡ್ತಾ ಇದ್ದಾರೆ. ಅಮೆಜಾನ್ (amazon) ಪೇಯನ್ನು ಶಾಪಿಂಗ್ ಅಪ್ಲಿಕೇಶನ್‌ನಿಂದ ಬೇರೆ ಮಾಡಿ ಸ್ವತಂತ್ರ ಅಪ್ಲಿಕೇಶನ್ ಆಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಭರತ್ ಈ ಯೋಜನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದರರ್ಥ NIT ವಾರಂಗಲ್‌ನಿಂದ ಪದವಿ ಪಡೆದ ಕೆಲವೇ ವರ್ಷಗಳ ನಂತರ, ಅವರು ಪ್ರಮುಖ ಟೆಕ್‌ ಪ್ಲಾಟ್‌ಫಾರಂನಲ್ಲಿ ಕೆಲಸ ಮಾಡ್ತಾ ಇದ್ದಾರೆ.

ಸವಾಲನ್ನು ಸಮರ್ಥವಾಗಿ ಎದುರಿಸಿದ ಧೀರ :

ತನಗೆ ಒಂದು ಕೈ ಇಲ್ಲ ಎನ್ನುವುದು ಅವರಿಗೆ ಯಾವತ್ತೂ ಸವಾಲು ಅನ್ನಿಸಲೇ ಇಲ್ಲ. ತಾನೂ ಕೂಡಾ ಎಲ್ಲರಂತೆಯೇ ಅಂದುಕೊಂಡೇ ಬದುಕಿದರು. ಓದಿನಲ್ಲಿ ಮುಂದಿದ್ದರು. ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಕನಸು ಕಂಡಿದ್ದರು. ಕಷ್ಟಪಟ್ಟು ಓದಿ ತನ್ನ ಕನಸನ್ನು ಸಾಕಾರ ಮಾಡಿಕೊಂಡಿದ್ದಾರೆ. ಇದೀಗ ಇವರ ಕತೆ ಅದೆಷ್ಟೋ ಮಂದಿಗೆ ಸ್ಫೂರ್ತಿಯಾಗಿದೆ. ಮನಸ್ಸಿದ್ದರೆ ಮಾರ್ಗ ಎನ್ನುವುದನ್ನು ಭರತ್‌ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಕೈ ಇಲ್ಲ ಎಂದು ಕೊರಗುತ್ತಾ ಕೂರುವುದನ್ನು ಬಿಟ್ಟು ಜೀವನದ ಸವಾಲನ್ನು ಸಮರ್ಥವಾಗಿ ಎದುರಿಸಿದ್ದಾರೆ ಅದರಲ್ಲಿ ಜಯಿಸಿದ್ದಾರೆ.

ಹೊಗಳಿಕೆಯ ಮಹಾಪೂರ :

ಭರತ್ ಅವರ ಕಥೆ ಸೋಶಿಯಲ್‌ ಮೀಡಿಯಾ (social media) ಮೂಲಕ ಹೊರ ಬರ್ತಾ ಇದ್ದ ಹಾಗೆಯೇ ಎಲ್ಲಾ ಕಡೆಯಿಂದ ಹೊಗಳಿಕೆ ಕೇಳಿ ಬರ್ತಾ ಇದೆ. ಇವರು ಅತ್ಯಂತ ಹರ್ಷಚಿತ್ತದಿಂದ ಕೂಡಿದ ವ್ಯಕ್ತಿ ಎಂದು ಒಬ್ಬರು ಅಭಿಪ್ರಾಯಪಟ್ಟಿದ್ದಾರೆ. ಇನ್ನೊಬ್ಬರು ಇವರು ಬ್ಯಾಡ್ಮಿಂಟನ್ ಕೂಡ ಆಡುತ್ತಾರೆ ಎನ್ನುವ ಮೂಲಕ ಗಮನ ಸೆಳೆದಿದ್ದಾರೆ. ಬಹಳಷ್ಟು ಮಂದಿ ಇವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇವರ ಮುಂದಿನ ಜೀವನಕ್ಕೆ ಶುಭ ಹಾರೈಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+