ಯುಪಿಎಸ್ಸಿಯಲ್ಲಿ ಫೇಲಾದರೂ ಜೀವನದಲ್ಲಿ ಪಾಸ್ : ಮಕ್ಕಳ ಶಿಕ್ಷಣ, ಮಹಿಳೆಯರ ಜೀವನಕ್ಕೆ ಬೆಳಕಾದ ಶ್ರುತಿ ಶ್ರೀವಾಸ್ತವ್

Success Story : ಹತ್ತನೇ ಕ್ಲಾಸಲ್ಲಿ, ಪಿಯುಸಿಯಲ್ಲಿ ಫೇಲ್ ಆದಾಗ ಅಥವಾ ಕಡಿಮೆ ಮಾರ್ಕ್​ಸ್ ಬಂದಾಗ ಜೀವನವೇ ಮುಗಿಯಿತು ಎಂದು ಗೋಳಾಡುವವರನ್ನು ನಾವು ನೋಡಿದ್ದೇವೆ. ಮನೆ ಬಿಟ್ಟು ಹೋಗುವುದು, ಡಿಪ್ರೆಶನ್ ಎಂದು ಮೂಲೆ ಸೇರುವುದು, ಆತ್ಮಹತ್ಯೆ ದಾರಿ ಹಿಡಿಯುವುದನ್ನೂ ನೋಡಿದ್ದೇವೆ. ಒಂದು ವರ್ಷ ಹಾಳಾಯಿತು ಎಂದು ತಲೆ ಮೇಲೆ ಕೈ ಹೊತ್ತು ಕೂರ್ತಾರೆ. ಇವೆರೆಲ್ಲ ಮಧ್ಯೆ ಶ್ರುತಿ ಶ್ರೀವಾಸ್ತವ ನಿಜಕ್ಕೂ ಭಿನ್ನವಾಗಿ ಕಾಣುತ್ತಾರೆ. ಯುಪಿಎಸ್‌ಸಿಯಲ್ಲಿ ಆರು ವಿಫಲ ಪ್ರಯತ್ನಗಳ ಹೊರತಾಗಿಯೂ ಅವರು ಕುಗ್ಗಲಿಲ್ಲ, ಜಗ್ಗಲಿಲ್ಲ.

Success Story After 6 Failed UPSC Attempt Women Started Her Own Mission at Sashaktikaran Foundation And Siksha Sati

ಅನುಭವವನ್ನೇ ದಾರಿಯಾಗಿಸಿದ ಶ್ರುತಿ ಶ್ರೀವಾಸ್ತವ :

ಯುಪಿಎಸ್‌ಸಿಗಾಗಿ ಅವರು ಸುಮಾರು ಹತ್ತು ವರ್ಷ ಪ್ರಯತ್ನ ಮಾಡಿದ್ದಾರೆ. ಆದರೂ ಸಕ್ಸಸ್ ಮಾತ್ರ ಸಿಗಲಿಲ್ಲ. ಮುಂದೆಯೂ ಯುಪಿಎಸ್‌ಸಿ ಪಾಸಾಗಿ ಆಫೀಸರ್ ಆಗಿ ಮುಂದುವರಿಯಬೇಕು ಎನ್ನುವ ಕನಸು ಕನಸಾಗಿಯೇ ಉಳಿಯುವಂತೆ ಅವರಿಗನ್ನಿಸುತ್ತದೆ. ಆದರೂ, ಒಂದು ಪರೀಕ್ಷೆಯ ಸೋಲು ತನ್ನ ಜೀವನದ ಗುರಿ ತಲುಪುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ತನ್ನನ್ನು ತಾನೇ ಸಮಾಧಾನ ಮಾಡಿಕೊಳ್ಳುತ್ತಾರೆ. ಯುಪಿಎಸ್‌ಸಿ ಪರೀಕ್ಷೆ ಬರೆಯಲು ತಾನು ನಡೆಸಿದ ತಯಾರಿಯ ಅನುಭವವನ್ನು ಸಮಾಜದ ಒಳಿತಿಗೆ ಬಳಸಿಕೊಳ್ಳುವ ಹೊಸ ಮಾರ್ಗವನ್ನು ಹುಡುಕಿಕೊಳ್ಳುತ್ತಾರೆ.

Success Story : ಸಮಾಜ ಸೇವೆ ಕನಸು ಜೀವಂತ

ಇಷ್ಟು ವರ್ಷ ಕಷ್ಟಪಟ್ಟರೂ ಯುಪಿಎಸ್‌ಸಿಯಲ್ಲಿ (upsc) ತನ್ನ ಭವಿಷ್ಯ ರೂಪಿಸುವುದು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಆ ಪ್ರಯತ್ನವನ್ನು ಅಲ್ಲಿಯೇ ಕೈ ಬಿಡುತ್ತಾರೆ. ಆದರೆ, ಸಮಾಜ ಸೇವೆ ಮಾಡುವ ಕನಸ್ಸನ್ನು ಮಾತ್ರ ಜೀವಂತವಾಗಿಯೇ ಉಳಿಸಿಕೊಳ್ಳುತ್ತಾರೆ. ಇದಕ್ಕಾಗಿ ಬೇರೆಯೇ ದಾರಿಯತ್ತ ಹೆಜ್ಜೆ ಹಾಕುತ್ತಾರೆ. ಗ್ರಾಮೀಣ ಮಕ್ಕಳಿಗೆ ಶಿಕ್ಷಣದ ಅವಕಾಶ ಕಲ್ಪಿಸುವುದು ಮತ್ತು ಮಹಿಳೆಯರಿಗೆ ಜೀವನೋಪಾಯದ ದಾರಿ ತೋರಿಸುವುದು ಅವರ ಮುಖ್ಯ ಗುರಿಯಾಗುತ್ತದೆ. ಕೆಂಪು ಗೂಟದ ಕಾರನ್ನು ಏರಿ ಅಧಿಕಾರ ಕೈಯಲ್ಲಿ ಹಿಡಿದುಕೊಂಡು ಮಾಡುವ ಕೆಲಸವನ್ನು ಯಾವ ಅಧಿಕಾರವೂ ಇಲ್ಲದೆ ಮಾಡಲು ಹೊರಡುತ್ತಾರೆ. ಅವರೀಗ ಸಕ್ಸಸನ್ನು ವೈಯಕ್ತಿಕ ಸಾಧನೆಯಾಗಿ ನೋಡುವುದಿಲ್ಲ, ಬದಲಾಗಿ ಇನ್ನೊಬ್ಬರ ಬದುಕಿನಲ್ಲಿ ಬದಲಾವಣೆ ತರಲು ಬಳಸುತ್ತಿರುವ ಪ್ರಯತ್ನವಾಗಿ ನೋಡುತ್ತಾರೆ.

ಪ್ರಾಜೆಕ್ಟ್ ನೀವ್ ಮೂಲಕ ಸೇವೆ :

30 ನೇ ವಯಸ್ಸಿನಲ್ಲಿ, ಸಶಕ್ತಿಕರಣ್ ಫೌಂಡೇಶನ್ನಿನ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ. ಗ್ರಾಮೀಣ ಮಕ್ಕಳ ವಿದ್ಯಾಭ್ಯಾಸವೇ (education) ಅವರ ಪ್ರಮುಖ ಗುರಿ. ಹಾಗಾಗಿ ಅ ಮಕ್ಕಳು ತಮ್ಮದೇ ಆದ ರೀತಿಯಲ್ಲಿ ತಮ್ಮದೇ ಆದ ಸ್ಪೀಡಿನಲ್ಲಿ ಕಲಿಯಲು ಸಹಾಯ ಮಾಡುವ ಪ್ರಾಜೆಕ್ಟ್ ನೀವ್ ಅನ್ನು ಕೈಗೆತ್ತಿಕೊಳ್ಳುತ್ತಾರೆ. ಈ ಮೂಲಕ ಬದಲಾವಣೆಗೆ ಹೊಸ ಮಾರ್ಗವನ್ನು ಹುಡುಕಿಕೊಳ್ಳುತ್ತಾರೆ.

ಶಿಕ್ಷಾ ಸಾಥಿ ಮೂಲಕ ಶಿಕ್ಷಣಕ್ಕೆ ಒತ್ತು :

ಅನೇಕ ಸರ್ಕಾರಿ ಶಾಲೆಗಳಲ್ಲಿ, ಒಬ್ಬರೋ ಇಬ್ಬರೋ ಟೀಚರ್ ಇರ್ತಾರೆ. ಪ್ರೈವೆಟ್ ಶಾಲೆಗಳ ರೀತಿ ಸಬ್ಜೆಕ್ಟಿಗೊಂದು ಟೀಚರ್ ಇಲ್ಲವೇ ಇಲ್ಲ. ಶಾಲೆಯಲ್ಲಿರುವ ಎಲ್ಲಾ ತರಗತಿಯೂ ಇರುವ ಒಂದಿಬ್ಬರು ಟೀಚರಿನ ಜವಾಬ್ದಾರಿ. ಹಾಗಿರುವಾಗ ಪ್ರತೀ ಒಂದು ಮಗುವಿನ ಮೇಲೆ ಗಮನ ಹರಿಸುವುದು ಸಾಧ್ಯವೇ ಇಲ್ಲ. ಮಗುವಿನ ಬೇಕು, ಬೇಡ, ಸಮಸ್ಯೆ, ಗೊಂದಲಕ್ಕೆ ಪರಿಹಾರ ಕಂಡು ಹಿಡಿಯುವುದು ಕನಸಿನ ಮಾತೇ. ಈ ಹೊತ್ತಿನಲ್ಲಿ ಪ್ರಾಜೆಕ್ಟ್ ನೀವ್, ಶಿಕ್ಷಾ ಸಾಥಿಸ್ ಎನ್ನುವ ಟ್ಯಾಬ್ಲೆಟ್‌ ಹೊರತರುತ್ತದೆ. ಇದು ಮಕ್ಕಳ ಓದು, ಬರವಣಿಗೆ ಮತ್ತು ಗಣಿತ ಕೌಶಲ್ಯವನ್ನು ಇಂಪ್ರೂವ್ ಮಾಡಲು ಸಹಾಯ ಮಾಡುತ್ತದೆ. ಪ್ರತಿದಿನ, ಐದು ಮಕ್ಕಳ ಟೀಂ 30 ನಿಮಿಷಗಳವರೆಗೆ ಶಿಕ್ಷಾ ಸಾಥಿ ಮೂಲಕ ಕಲಿಯುತ್ತಾರೆ. ಇಲ್ಲಿ ಪ್ರತೀ ಮಗುವಿಗೂ ಟ್ಯಾಬ್ಲೆಟ್ ಬಳಸುವ ಅವಕಾಶ ಸಿಗುತ್ತದೆ.

ಇವತ್ತಿಗೆ ಮಧ್ಯಪ್ರದೇಶದ ಆರು ಜಿಲ್ಲೆಗಳ ಸುಮಾರು 900 ಮಕ್ಕಳು ಈ ಟ್ಯಾಬ್ಲೆಟ್ ಸಹಾಯ ಪಡೀತಾ ಇದ್ದಾರೆ. 30 ಗ್ರಾಮೀಣ ಮಹಿಳೆಯರಿಗೆ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸಿದೆ. ಇದು ಮಹಿಳೆಯರಿಗೆ, ಆದಾಯದ ಮೂಲ ಎನ್ನುವುದೇನೋ ಸರಿ. ಇದಕ್ಕಿಂತ ಹೆಚ್ಚಾಗಿ ಆತ್ಮವಿಶ್ವಾಸ ಬೆಳೆಸಲು, ಕುಟುಂಬವನ್ನು ಬೆಂಬಲಿಸಲು ಮತ್ತು ಅವರ ಸ್ವಂತ ಹಳ್ಳಿಗಳಲ್ಲಿ ಬದಲಾವಣೆ ತರುವುದಕ್ಕೆ ಸಹಾಯ ಮಾಡತ್ತದೆ.

ಒಟ್ಟಿನಲ್ಲಿ ಗುರಿ ಸಾಧಿಸುವ ಛಲ ಇದ್ದರೆ ಅನುಭವವನ್ನೇ ದಾರಿಯಾಗಿಸಬಹುದು ಎನ್ನುವುದಕ್ಕೆ ಶ್ರುತಿ ಶ್ರೀವಾಸ್ತವ ಸಾಕ್ಷಿ. ಸರ್ಕಾರಿ ಅಧಿಕಾರಿಯಾಗಿ ಮಾಡಬೇಕು ಎಂದುಕೊಂಡಿದ್ದ ಕೆಲಸವನ್ನು ಯಾವ ಅಧಿಕಾರವೂ ಇಲ್ಲದೆ ಮಾಡಿ ಸಾಧಿಸಿ ತೋರಿಸಿದ್ದಾರೆ. ಮಕ್ಕಳ ಭವಿಷ್ಯಕ್ಕೆ, ಮಹಿಳೆಯರ ಜೀವನಕ್ಕೆ ದಾರಿ ದೀಪವಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+