ಸ್ಥಾಪನೆಗೂ ಮುನ್ನವೆ ಜಿಯೋ ವಿದ್ಯಾಸಂಸ್ಥೆಗೆ ಸರ್ಕಾರದ ಗೌರವ

ನವದೆಹಲಿ, ಜುಲೈ 10: ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ, ಇಂಟರ್ನೆಟ್ ವೇಗಕ್ಕೆ ಹೆಸರುವಾಸಿಯಾಗಿರುವ ಜಿಯೋ ಸಂಸ್ಥೆಯನ್ನು ಮೀರಿಸುವಂಥ ಕಾರ್ಯ ಸರ್ಕಾರದ ಕಡೆಯಿಂದ ಆಗಿದೆ.

ಇನ್ನೂ ಸ್ಥಾಪನೆಯಾಗಬೇಕಿರುವ ಜಿಯೋ ಇನ್‌ಸ್ಟಿಟ್ಯೂಟ್ ಗೆ ಶ್ರೇಷ್ಠ ಶಿಕ್ಷಣ ಸಂಸ್ಥೆ (IoE) ಎಂಬ ಬಿರುದು ನೀಡಲಾಗಿದೆ. ಹೀಗೆ ಆಯ್ಕೆಯಾದ ಶಿಕ್ಷಣ ಸಂಸ್ಥೆಗೆ ಸರ್ಕಾರಿ ಯೋಜನೆಯಿಂದ ರಿಯಾಯಿತಿ ಸಿಗಲಿದೆ.

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಸಚಿವ ಪ್ರಕಾಶ್ ಜಾವ್ಡೇಕರ್ ಅವರು ಸೋಮವಾರದಂದು 6 ಶ್ರೇಷ್ಠ ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ವಿವರ ನೀಡಿದರು.

Still on Paper, Jio Institute given tag of Institute of Eminence

ಆದರೆ, ಜಿಯೋ ವಿದ್ಯಾಸಂಸ್ಥೆ ಸ್ಥಾಪನೆಗೂ ಮುನ್ನ ಆಯ್ಕೆ ಪ್ರಕ್ರಿಯೆಗೆ ಪರಿಗಣಿಸಿದ್ದು ಹೇಗೆ ಎಂಬುದು ಇನ್ನೂ ವಿವಾದ, ಚರ್ಚೆಯ ವಿಷಯವಾಗಿದೆ.

ಯುಜಿಸಿ ಸಮರ್ಥನೆ: ಆಯ್ಕೆ ಪ್ರಕ್ರಿಯೆ ಹಾಗೂ ಉದ್ದೇಶವನ್ನೂ ಕೆಲವರು ಪ್ರಶ್ನಿಸಿದ್ದಾರೆ ಆದರೆ, ಯು.ಜಿ.ಸಿ. ರೂಪಿಸಿದ್ದ ಸಮಿತಿಯೊಂದು ಈ ಆಯ್ಕೆಯನ್ನು ನಡೆಸಿದೆ. ಹೊಸ ಇಲ್ಲವೇ ಪ್ರಸ್ತಾಪಿತ ಸಂಸ್ಥೆಗಳ ವಿಭಾಗದಲ್ಲಿ ಜಿಯೋ ಆಯ್ಕೆ ಮಾಡಲಾಗಿದೆ. ಗ್ರೀನ್ ಫೀಲ್ಡ್ ಸಂಸ್ಥೆಗಳ ವಿಭಾಗದಲ್ಲಿ ನಿಯಮಗಳ ಅನ್ವಯ ಆಯ್ಕೆ ನಡೆದಿದೆ ಎಂದು ಯು.ಜಿ.ಸಿ. ತಿಳಿಸಿದೆ.

9,500 ಕೋಟಿ ಮೌಲ್ಯದಲ್ಲಿ ಪುಣೆಯಲ್ಲಿ ಸ್ಥಾಪನೆಗೊಳ್ಳಲಿರುವ ಜಿಯೋ ವಿದ್ಯಾಸಂಸ್ಥೆ ಈಗ ಸರ್ಕಾರದ ಶ್ರೇಷ್ಠ ಶಿಕ್ಷಣ ಸಂಸ್ಥೆ ಎಂದು ಆಯ್ಕೆಯಾಗಿದ್ದು, ಸ್ಥಾಪನೆಯಾದ ಬಳಿಕ ಐದು ವರ್ಷಗಳಿಗೆ 1,000 ಕೋಟಿ ರು ಅನುದಾನವನ್ನು ಸರ್ಕಾರದಿಂದ ಪಡೆದುಕೊಳ್ಳಲು ಅರ್ಹವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+