ಛತ್ತೀಸ್ ಗಢ ಸ್ಟೀಲ್ ಕಾರ್ಖಾನೆಯಲ್ಲಿ ಸ್ಫೋಟ: 9 ಮಂದಿ ದುರ್ಮರಣ
ಭಿಹಾಲಿ, ಅಕ್ಟೋಬರ್ 09: ಛತ್ತೀಸ್ ಗಢದ ಭಿಹಾಲಿ ಎಂಬಲ್ಲಿ ಸ್ಟೀಲ್ ಕಾರ್ಖಾನೆಯೊಂದರ ಪೈಪ್ ಲೈನ್ ಸ್ಫೋಟಿಸಿದ ಪರಿಣಾಮ 9 ಜನ ಮೃತರಾಗಿದ್ದಾರೆ.
ಕೋಕ್ ಓವನ್ ವಿಭಾಗದಲ್ಲಿ ಪೈಪ್ ಲೈನ್ ಸ್ಫೋಟಿಸಿದ್ದು, ಈ ಘಟನೆಯಲ್ಲಿ 14 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಸ್ಟೀಲ್ ಅಥಾರಿಟಿ ಆಫ್ ಇಂಡಿಯಾಕ್ಕೆ ಸೇರಿದ ಕಾರ್ಖಾನೆ ಇದಾಗಿದ್ದು, ಕಳೆದ ಜೂನ್ ನಲ್ಲಷ್ಟೇ ಪ್ರಧಾನಿ ನರೇಂದ್ರ ಮೋದಿಯವರು ಈ ಕಾರ್ಖಾನೆಯ ಆಧನಿಕ ಘಟಕವನ್ನು ಉದ್ಘಾಟಿಸಿದ್ದರು.

2014 ರಲ್ಲೂ ಇಂಥದೇ ಘಟನೆ ನಡೆದಿದ್ದು, ಘಟನೆಯಲ್ಲಿ ಆರು ಕಾರ್ಮಿಕರು ಮೃತರಾಗಿದ್ದರು.
ಭಾರತೀಯ ರೈಲ್ವೆಗೆ ರೈಲು ಉತ್ಪಾದಿಸುವ ಕಾರ್ಯವನ್ನು ಮಾಡುತ್ತಿರುವ ಏಕೈಕ ಕಾರ್ಖಾನೆಯೂ ಇದಾಗಿದೆ.
ಆದರೆ ಇಂದು ನಡೆದ ಅಚಾತುರ್ಯಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಒಂಬತ್ತಕ್ಕೂ ಹೆಚ್ಚು ಜನ ಮೃತರಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಘಟನೆ ಕುರಿತಂತೆ ಪೊಲೀಸರು ತನಿಖೆ ನಡೆಸಲಿದ್ದಾರೆ.












Click it and Unblock the Notifications