ಕೇಂದ್ರದಿಂದ ರಾಜ್ಯಗಳಿಗೆ ₹73,000 ಕೋಟಿ ಬಿಡುಗಡೆ; ಕರ್ನಾಟಕಕ್ಕೆ ಎಷ್ಟು!?

ದೆಹಲಿ, ನವೆಂಬರ್‌ 08: ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರವು ರಾಜ್ಯಗಳಿಗೆ ತೆರಿಗೆ ಪಾಲನ್ನು ಮಂಗಳವಾರ (ನವೆಂಬರ್07) ಬಿಡುಗಡೆ ಮಾಡಿದೆ.‌ ತೆರಿಗೆ ಹಣವನ್ನ ಹೆಚ್ಚು ಹಾಗೂ ತ್ವರಿತವಾಗಿ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದ ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸರ್ಕಾರ 2,660 ಕೋಟಿ ರೂ. ವಿತರಿಸಲಾಗಿದೆ.

ಕೇಂದ್ರ ಸರ್ಕಾರವೂ 72,961 ಕೋಟಿ ರೂ.ಗಳ ತೆರಿಗೆಯನ್ನು ರಾಜ್ಯಗಳಿಗೆ ಹಂಚಿಕೆ ಮಾಡಿದೆ. ಅತಿ ಹೆಚ್ಚು ತೆರಿಗೆ ಪಾಲು ಪಡೆದ ರಾಜ್ಯಗಳಲ್ಲಿ ಉತ್ತರ ಪ್ರದೇಶ, ಬಿಹಾರ ಮತ್ತು ಮಧ್ಯ ಪ್ರದೇಶ ಮೊದಲ ಮೂರು ಸ್ಥಾನಗಳನ್ನು ಗಳಿಸಿವೆ. ಅತಿ ಕಡಿಮೆ ಪಾಲು ಪಡೆದ ರಾಜ್ಯಗಳಲ್ಲಿ ಗೋವಾ ಮೊದಲ ಸ್ಥಾನದಲ್ಲಿದೆ. ಸಿಕ್ಕಿಂ, ಮಿಜೋರಾಂ ನಂತರ ಸ್ಥಾನದಲ್ಲಿವೆ. ಅಲ್ಲದೇ ನವೆಂಬರ್‌ 10ರಂದು ತೆರಿಗೆ ಪಾಲಿನ ಹಣವನ್ನು ರಾಜ್ಯಗಳಿಗೆ ವರ್ಗಾಯಿಸುವ ರೂಢಿ ಇತ್ತು. ಆದರೆ, ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಅವಧಿಗಿಂತ ಮೂರು ದಿನಗಳಿಗೆ ಮುಂಚಿತವಾಗಿಯೇ ತೆರಿಗೆಯ ಪಾಲನ್ನು ಕೇಂದ್ರ ಸರಕಾರ ರಾಜ್ಯ ಸರ್ಕಾರಗಳಿಗೆ ನೀಡಿದೆ.

State gets Rs 2,660 crore from Centre as tax devolution


ಕೇಂದ್ರ ಸರಕಾರದಿಂದ ಅತಿ ಹೆಚ್ಚು ತೆರಿಗೆ ಪಾಲು ಪಡೆದ ರಾಜ್ಯಗಳು

1. ಉತ್ತರ ಪ್ರದೇಶ : 13,088.51 ಕೋಟಿ ರೂ.

2. ಬಿಹಾರ : 7,338.44 ಕೋಟಿ ರೂ.

3. ಮಧ್ಯ ಪ್ರದೇಶ : 5,727.4 ಕೋಟಿ ರೂ.

4. ಪಶ್ಚಿಮ ಬಂಗಾಳ : 5,488.88 ಕೋಟಿ ರೂ.

5. ಮಹಾರಾಷ್ಟ್ರ : 4,608.96 ಕೋಟಿ ರೂ.

6. ಗೋವಾ : 281.63 ಕೋಟಿ ರೂ.

7. ಸಿಕ್ಕಿಂ : 283.1 ಕೋಟಿ ರೂ.

8. ಮಿಜೋರಾಂ : 364.8 ಕೋಟಿ ರೂ.

9. ನಾಗಾಲ್ಯಾಂಡ್‌ : 415.15 ಕೋಟಿ ರೂ.

10. ಮಣಿಪುರ : 522,41 ಕೋಟಿ ರೂ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+