ಅಂಬಾನಿ ಕುಟುಂಬ ಮದುವೆ ಸಮಾರಂಭದಲ್ಲಿ ತೊಡುವ ಆಭರಣಗಳ ಬೆಲೆ ಕೇಳೆದರೆ ಶಾಕ್ ಗ್ಯಾರಂಟಿ!
ವಿಶ್ವದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿರುವ ಮುಖೇಶ್ ಅಂಬಾನಿ ಅವರ ಮಗ ಅನಂತ್ ಅಂಬಾನಿ ಅವರ ಮದುವೆ ಸಮರಾಂಭದ ಕಾರ್ಯ ಭರದಿಂದ ಸಾಗಿದೆ. ಮುಖೇಶ್ ಅವರ ಪುತ್ರನ ಮದುವೆ ಜುಲೈ 12ರಂದು ಮುಂಬೈನ ಜಿಯೋ ವರ್ಲ್ಡ್‌ನಲ್ಲಿ ನಡೆಯಲಿದೆ.
ಜುಲೈ 13 ರಂದು ಪೂಜೆ ಹಾಗೂ 14 ರಂದು ಆರತಕ್ಷತೆ ಕಾರ್ಯ ಭರದಿಂದ ಸಾಗಿದೆ. ಮದುವೆಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಉಳಿದ ಕಾರ್ಯಗಳು ಭರದಿಂದ ಸಾಗಿವೆ. ಈಗ ಅಂಬಾನಿ ಕುಟುಂಬ ತೊಡುವ ಬಟ್ಟೆ ಹಾಗೂ ಆಭರಣದ ಬಗ್ಗೆ ಹಲವು ಚರ್ಚೆಗಳು ಆರಂಭವಾಗಿವೆ. ಆ ಬಗ್ಗೆ ಒಂದು ವರದಿ ಇಲ್ಲಿದೆ.

ದುಬಾರಿ ಮದುವೆ
ಇತ್ತೀಚಿಗೆ ಅಂಬಾನಿ ಕುಟುಂಬ ತಮ್ಮ ಊರು ಜಾಮ್‌ನಗರ ಹಾಗೂ ವಿದೇಶದಲ್ಲಿ ಪ್ರೀ ವೆಡ್ಡಿಂಗ್ ಕಾರ್ಯಕ್ರಮವನ್ನು ಮುಗಿಸಿದ್ದಾರೆ. ಇನ್ನು ಕೆಲವು ದಿನಗಳ ಹಿಂದೆ ತಮ್ಮ ಮನೆಯಲ್ಲಿನ ಶುಭ ಕಾರ್ಯದ ಪ್ರಯುಕ್ತ ಅಂಬಾನಿ ಕುಟುಂಬ 50 ಕ್ಕೂ ಹೆಚ್ಚು ಜೋಡಿಗಳ ಮದುವೆ ಮಾಡಿಸಿದೆ. ಈಗ ಅಂಬಾನಿ ಕುಟುಂಬದಲ್ಲಿ ಮದುವೆ ಸಂಭ್ರಮ ಮೇಳೈಸಿದೆ. ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ಮದುವೆಗೆ ದೇಶ ವಿದೇಶಗಳಿಂದ ಗಣ್ಯರು ಆಗಮಿಸುತ್ತಿದ್ದಾರೆ.
ಮುಖೇಶ್ ಅವರ ಪುತ್ರ ಅನಂತ್ ಅಂಬಾನಿ ಅವರ ಮೊದಲ ಹಾಗೂ ಎರಡನೇ ವಿವಾಹ ಕಾರ್ಯಕ್ರಮಕ್ಕೆ ಭಾರೀ ಹಣವನ್ನು ವ್ಯಯಿಸಿದ್ದಾರೆ ಎಂದು ವರದಿಯಾಗಿದೆ. ಈ ವಿವಾಹವು ವಿಶ್ವದ ಅತ್ಯಂತ ದುಬಾರಿ ಮದುವೆಗಳಲ್ಲಿ ಒಂದಾಗಿದೆ.
ಈಗಾಗಲೇ ಅಂಬಾನಿ ಮನೆಯಲ್ಲಿ ಮದುವೆ ಕಾರ್ಯಕ್ರಮಗಳು ಜೋರಾಗಿವೆ. ರಾಧಿಕಾ ಮರ್ಚೆಂಟ್ ತೊಟ್ಟ ನೇರಳೆ ಬಣ್ಣದ ಲೆಹೆಂಗಾ, ಅನಂತ್ ತೊಟ್ಟಿದ್ದ ಗುಲಾಬಿ ಬಣ್ಣದ ಕುರ್ತಾ ಸಾಮಾಜಿಕ ತಾಣದಲ್ಲಿ ಸಖತ್ ಸದ್ದು ಮಾಡುತ್ತಿವೆ. ಅಂಬಾನಿ ಕುಟುಂಬದ ಮದುವೆ ಅಂದರೆ ಕೇಳಬೇಕೆ ವೈಭವ ಹಾಗೂ ಅದ್ಧೂರಿ ಮನೆ ಮಾಡಿರುತ್ತದೆ.

ಅಂಬಾನಿ ಕುಟುಂಬದ ಹೆಂಗಸರು ಪಚ್ಚೆ ಹಾರ ಹಾಕುವುದನ್ನು ನೀವು ಆಗಾಗ ನೋಡಿರಬೇಕು. ಅದರಲ್ಲೂ ನೀತಾ ಅಂಬಾನಿ ಆಯ್ಕೆ ಯಾವಾಗಲೂ ವಿಭಿನ್ನವಾಗಿರುತ್ತದೆ. ಈ ಬಾರಿಯೂ ಅಂಬಾನಿ ಕುಟುಂಬದ ಮಹಿಳೆಯರು ತಮ್ಮ ತಮ್ಮ ಬಟ್ಟೆಗಳೊಂದಿಗೆ ಹಸಿರು ಪಚ್ಚೆ ಧರಿಸಿ ಕಾಣಿಸಿಕೊಂಡರು.
ನೆಕ್ಲೇಸ್ ಬೆಲೆ ಎಷ್ಟು?
ಅನಂತ್ ಮತ್ತು ರಾಧಿಕಾ ಅವರ ವಿವಾಹ ಪೂರ್ವ ಸಂಭ್ರಮದಲ್ಲಿ ನೀತಾ ಅಂಬಾನಿ ಭಾರವಾದ ವಜ್ರದ ಹಾರವನ್ನು ಧರಿಸಿದ್ದರು. ಅದರಲ್ಲಿ ಎರಡು ದೊಡ್ಡ ಪಚ್ಚೆಗಳನ್ನು ಹೊದಿಸಲಾಗಿತ್ತು. ಈ ನೆಕ್ಲೇಸ್ ಅನ್ನು ವಜ್ರ ಮತ್ತು ದೊಡ್ಡ ಪಚ್ಚೆ ಕಲ್ಲುಗಳಿಂದ ಮಾಡಲಾಗಿತ್ತು. ವರದಿಗಳ ಪ್ರಕಾರ, ಈ ನೆಕ್ಲೇಸ್‌ನ ಬೆಲೆ ಸುಮಾರು 400 ರಿಂದ 500 ಕೋಟಿ ರೂ.
ಹೆಚ್ಚುವರಿಯಾಗಿ, ನೀತಾ ಅಂಬಾನಿ ತಮ್ಮ ಬೆರಳಿಗೆ ಹೊಂದಿಕೆಯಾಗುವ ವಜ್ರದ ಕಿವಿಯೋಲೆಗಳು ಮತ್ತು ಸಾಲಿಟೇರ್ ಅನ್ನು ಧರಿಸಿದ್ದರು.

ಏತನ್ಮಧ್ಯೆ, ಪುತ್ರಿ ಇಶಾ ಅಂಬಾನಿ ಸಹ ಸಹೋದರ ಅನಂತ್ ಮತ್ತು ರಾಧಿಕಾ ಅವರ ವಿವಾಹಪೂರ್ವ ಆಚರಣೆಗಳಿಗಾಗಿ ತನ್ನ ತಾಯಿಯ ಲೇಯರ್ಡ್ ನೆಕ್ಲೇಸ್ ಅನ್ನು ತನ್ನ ಲೆಹೆಂಗಾದೊಂದಿಗೆ ಸ್ಟೈಲಿಶ್ ಆಗಿ ಕಂಡು ಬಂದರು. ಅವಳು ತನ್ನ ನೆಕ್‌ಲೇಸ್‌ಗೆ ಹೊಂದಿಕೆಯಾಗುವ ಕಿವಿಯೋಲೆಗಳನ್ನು ಧರಿಸಿದ್ದರು.
ಇಶಾ ಅಂಬಾನಿ ಮದುವೆ
ಇನ್ನು ಮುಖೇಶ್ ಅಂಬಾನಿ ಅವರ ಮಗಳು ಇಶಾ ಅಂಬಾನಿ ಅವರ ಮದುವೆಯ ಕಾರ್ಯ ಈ ಹಿಂದೆ ಭಾರೀ ಸುದ್ದಿ ಮಾಡಿತ್ತು. ಈ ಕಾರ್ಯಕ್ರಮಕ್ಕೆ ಮುಖೇಶ್ ಅಂಬಾನಿ ನೀರಿನಂತೆ ಹಣವನ್ನು ಖರ್ಚು ಮಾಡಿದ್ದರು. ಈಗ ತಮ್ಮ ಮಗನ ಮದುವೆಯ ಸಮಾರಂಭಕ್ಕೂ ಅಂಬಾನಿ ಕುಟುಂಬ ಹಣದ ಹೊಳೆ ಹರಿಸುತ್ತಿದೆ.
ಮಾಹಿತಿಯ ಪ್ರಕಾರ ಮದುವೆಯ ದಿನ ರಾಧಿಕಾ ತೊಡುವ ಆಭರಣಗಳ ಬೆಲೆ ಬಹು ಕೋಟಿ ರೂಪಾಯಿಗಾಳಿಗಿವೆ. ಅಲ್ಲದೆ ಮದುವೆ ಸಮಾರಂಭದಲ್ಲಿ ತೊಡುವ ಬಟ್ಟೆಗಳ ಬೆಲೆ ಕೇಳಿದ್ರೂ ಬೆಚ್ಚಿ ಬೀಳುವುದು ಗ್ಯಾರಂಟಿ. ಕಳೆದ ಬಾರಿ ಇಶಾ ಮದುವೆಯಲ್ಲಿ ಅಂಬಾನಿ ಕುಟುಂಬ ಬರೀ ಬಟ್ಟೆ ಖರೀದಿಗೆ ಸುಮಾರು 90 ಕೋಟಿ ಹಣವನ್ನು ಖರ್ಚು ಮಾಡಿತ್ತು. ಈ ಸಂಖ್ಯೆ ಈ ಬಾರಿ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ.












Click it and Unblock the Notifications