Stag Beetle: ಇದೇ ನೋಡಿ ವಿಶ್ವದ ದುಬಾರಿ ಕೀಟ; ಇದರ ಬೆಲೆಗೆ ಐಷಾರಾಮಿ ಖರೀದಿ ಮಾಡಬಹುದು!
ಪ್ರಕೃತಿ ತನ್ನೊಳಗೆ ಅಗಾಧ ಅಚ್ಚರಿಗಳನ್ನು ಬಚ್ಚಿಟ್ಟುಕೊಂಡಿದೆ. ಬೆಲೆ ಕಟ್ಟಲು ಆಗದ ಸಂಪತ್ತೆಲ್ಲಾ ಪ್ರಕೃತಿಯ ಕೊಡುಗೆಯೇ ಆಗಿದೆ. ಪ್ರಕೃತಿಗೆ ತನ್ನಲ್ಲಿರುವ ಎಲ್ಲವೂ ಸಹಜವೇ ಆದರೂ, ಮನುಷ್ಯನಿಗೆ ಮಾತ್ರ ಅದೆಲ್ಲಾ ವಿಶೇಷ. ಹಲವು ನಂಬಿಕೆಗಳು, ಮೂಡನಂಭಿಕೆಗಳು ಕೂಡ ಕೆಲವು ವಸ್ತು, ಪ್ರಾಣಿ, ಪಕ್ಷಿಗಳಿಗೆ ಹೆಚ್ಚಿನ ಬೆಲೆ ಸಿಗುವಂತೆ ಮಾಡಿವೆ. ಇಲ್ಲೊಂದು ಕೀಟ ಕೂಡ ಇದೇ ಕಾರಣದಿಂದ ಲಕ್ಷ ಲಕ್ಷ ಬೆಲೆ ಬಾಳುತ್ತದೆ.
ಸ್ಟಾಗ್ ಬೀಟಲ್ ಅಥವಾ ಸಾರಂಗ ಜೀರುಂಡೆ ಎಂದು ಕರೆಯಲಾಗುವ ಈ ಕೀಟದ ಬೆಲೆ ಕೇಳಿದರೆ ನಿಮಗೆ ತಲೆ ತಿರುಗೋದು ಪಕ್ಕಾ! ಹೌದು, ಈ ಕೀಟ ನಿಮ್ಮ ಬಳಿ ಇದ್ದರೆ ಲಕ್ಷ ಲಕ್ಷ ರೂಪಾಯಿ ಹಣ ಪಡೆಯಬಹುದು.

ಸ್ಟಾಗ್ ಬೀಟಲ್, ವಿಶ್ವದ ಅತ್ಯಂತ ದುಬಾರಿ ಕೀಟ, ಒಂದು ಕೀಟದ ಬೆಲೆ ₹ 75 ಲಕ್ಷ ಎಂದು ಹೇಳಲಾಗುತ್ತದೆ. ವಿಶ್ವದ ಅತ್ಯಂತ ದುಬಾರಿ ಕೀಟಗಳಲ್ಲಿ 'ಸ್ಟಾಗ್ ಬೀಟಲ್' ಕೂಡ ಒಂದಾಗಿದೆ.
ಏನಿದರ ವಿಶೇಷತೆ?
ಸಾರಂಗ ಜೀರುಂಡೆ ಇಷ್ಟು ದುಬಾರಿ ಯಾಕೆ ಎನ್ನುವ ಪ್ರಶ್ನೆ ಮೂಡಬಹುದು. ಏಕೆಂದರೆ ಇದು ಸಾಕಷ್ಟು ಅಪರೂಪ ಕೀಟ ಮತ್ತು ಇದನ್ನು ಅದೃಷ್ಟದ ಸಂಕೇತ ಎಂದು ನಂಬಲಾಗಿದೆ. ಸಾರಂಗ ಜೀರುಂಡೆಯನ್ನು ಇಟ್ಟುಕೊಳ್ಳುವುದರಿಂದ ರಾತ್ರೋರಾತ್ರಿ ಶ್ರೀಮಂತರಾಗಬಹುದು ಎಂದು ಕೆಲವರು ಬಲವಾಗಿ ನಂಬುತ್ತಾರೆ.
ಸಾರಂಗ ಜೀರುಂಡೆ ಅರಣ್ಯ ಪರಿಸರ ವ್ಯವಸ್ಥೆಗಳಲ್ಲಿ ಗಮನಾರ್ಹವಾದ ಸ್ಯಾಪ್ರೊಕ್ಸಿಲಿಕ್ ಸಂಯೋಜನೆಯನ್ನು ಪ್ರತಿನಿಧಿಸುವ ಕೀಟವಾಗಿದೆ. ಅವುಗಳ ದೊಡ್ಡ ದವಡೆಗಳು ಮತ್ತು ಧೈರ್ಯಕ್ಕೆ ಹೆಸರಾಗಿವೆ ಎಂದು ಸೈಂಟಿಫಿಕ್ ಡೇಟಾ ಜರ್ನಲ್‌ನಲ್ಲಿ ಹೇಳಲಾಗಿದೆ.
ಕೀಟಗಳ ಬಗ್ಗೆ ಹೆಚ್ಚಿನ ಮಾಹಿತಿ
ಲಂಡನ್ ಮೂಲದ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಪ್ರಕಾರ, ಈ ಕೀಟಗಳು 2-6 ಗ್ರಾಂ ತೂಕವಿರುತ್ತವೆ ಮತ್ತು ಸರಾಸರಿ 3-7 ವರ್ಷಗಳ ಕಾಲ ಬದುಕುತ್ತವೆ. ಗಂಡು 35-75 ಮಿಮೀ ಉದ್ದವಿದ್ದರೆ, ಹೆಣ್ಣು 30-50 ಮಿಮೀ ಉದ್ದವಿರುತ್ತದೆ. ಈ ಕೀಟಗಳನ್ನು ಔಷಧೀಯ ಉದ್ದೇಶಗಳಿಗಾಗಿಯೂ ಬಳಕೆ ಮಾಡಲಾಗುತ್ತದೆ.
ಈ ಜೀರುಂಡೆಯ ದವಡೆ ಸಾರಂಗದ ರೀತಿ ಕೊಂಬುಗಳನ್ನು ಹೋಲುವುದರಿಂದ ಇದಕ್ಕೆ ಸಾರಂಗ ಜೀರುಂಡೆ ಎನ್ನುವ ಹೆಸರು ಬಮದಿದೆ. ಗಂಡು ಸಾರಂಗ ಜೀರುಂಡೆಗಳು ತಮ್ಮ ವಿಶಿಷ್ಟವಾದ, ಕೊಂಬಿನಂತಿರುವ ದವಡೆಗಳನ್ನು ಸಂತಾನವೃದ್ಧಿ ಕಾಲದಲ್ಲಿ ಹೆಣ್ಣುಗಳೊಂದಿಗೆ ಸಂಯೋಗ ಮಾಡುವ ಅವಕಾಶಕ್ಕಾಗಿ ಪರಸ್ಪರ ಕಾದಾಡಲು ಬಳಸುತ್ತವೆ.
ಈ ಕೀಟಗಳು ಎಲ್ಲಿ ಕಂಡುಬರುತ್ತವೆ?
ಸಾರಂಗ ಜೀರುಂಡೆಗಳು ಬೆಚ್ಚಗಿನ, ಉಷ್ಣವಲಯದ ಪರಿಸರದಲ್ಲಿ ಬೆಳೆಯುತ್ತವೆ ಮತ್ತು ಶೀತ ತಾಪಮಾನಕ್ಕೆ ಸೂಕ್ಷ್ಮವಾಗಿರುತ್ತವೆ. ನೈಸರ್ಗಿಕವಾಗಿ ಕಾಡುಪ್ರದೇಶಗಳಲ್ಲಿ ವಾಸಿಸುತ್ತವೆ, ಮುಳ್ಳುಗಿಡಗಳು, ಸಾಂಪ್ರದಾಯಿಕ ತೋಟಗಳು ಮತ್ತು ಉದ್ಯಾನವನಗಳು ಮತ್ತು ಉದ್ಯಾನಗಳಂತಹ ನಗರ ಪ್ರದೇಶಗಳಲ್ಲಿಯೂ ಸಹ ಕಂಡುಬರುತ್ತವೆ.












Click it and Unblock the Notifications