ಕೊರೊನಾ ರಣಕೇಕೆ: ಭಾರತದಲ್ಲಿ ಮತ್ತೆ 5,609 ಮಂದಿಗೆ ಸೋಂಕು, 132 ಸಾವು
ನವದೆಹಲಿ, ಮೇ 21: ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾವೈರಸ್ ಅಟ್ಟಹಾಸ ಹೆಚ್ಚಾಗುತ್ತಿದೆ. ಇದೀಗ ಲಾಕ್‌ಡೌನ್ ಸಡಿಲಗೊಂಡಿದೆ, ಬಸ್‌ಗಳ ಸಂಚಾರವೂ ಆರಂಭಗೊಂಡಿದೆ. ಸೋಂಕು ಹೆಚ್ಚಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ.
ದೇಶದಲ್ಲಿ ಕೊರೊನಾವೈರಸ್ ಹಾವಳಿ ಮತ್ತಷ್ಟು ಹೆಚ್ಚಳವಾಗಿದ್ದು, ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 5,609 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಅಲ್ಲದೆ, ಮಹಾಮಾರಿ ವೈರಸ್ ಗೆ 132 ಮಂದಿ ಬಲಿಯಾಗಿದ್ದಾರೆಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಅಮೆರಿಕದಲ್ಲಿ 10,58,000ರಷ್ಟು ಮಂದಿ ಸೋಂಕಿತರಿದ್ದಾರೆ , ಇಲ್ಲಿಯವರೆಗೆ 93,806 ಮಂದಿ ಸಾವನ್ನಪ್ಪಿದ್ದಾರೆ.

ಭಾರತದಲ್ಲಿ 3435 ಮಂದಿ ಬಲಿ
ಈ ಮೂಲಕ ದೇಶದಲ್ಲಿ ಬಲಿಯಾದವರ ಸಂಖ್ಯೆ 3435ಕ್ಕೆ ಏರಿಕೆಯಾಗಿದ್ದು, ಸೋಂಕಿತರ ಸಂಖ್ಯೆ 1,12,359ಕ್ಕೆ ತಲುಪಿದೆ.

48,735 ಮಂದಿ ಗುಣಮುಖರಾಗಿದ್ದಾರೆ
ಇದೇ ವೇಳೆ 1,12,359 ಮಂದಿ ಸೋಂಕಿತರ ಪೈಕಿ 48,735 ಮಂದಿ ಸೋಂಕಿನಿಂದ ಗುಣಮುಖರಾಗಿ, ಆಸ್ಪತ್ರೆಯಗಳಿಂದ ಬಿಡುಗಡೆಗೊಂಡಿದ್ದು, ಇನ್ನೂ ದೇಶದಲ್ಲಿ 63624 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ.

ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಪ್ರಕರಣಗಳು
ಇನ್ನು ದೇಶದಲ್ಲಿ ಅತೀ ಹೆಚ್ಚು ಸೋಂಕು ಕಂಡು ಬಂದಿರುವ ಮಹಾರಾಷ್ಟ್ರದಲ್ಲಿ ಸತತ 4ನೇ ದಿನವೂ 2000ಕ್ಕಿಂತ ಹೆಚ್ಚಿನ ಕೇಸು ಬೆಳಕಿಗೆ ಬಂದಿದೆ. ಬುಧವಾರ ರಾಜ್ಯದಲ್ಲಿ 2250 ಹೊಸ ಪ್ರಕರಣದೊಂದಿಗೆ ಒಟ್ಟಾರೆ ಸೋಂಕಿತರ ಸಂಖ್ಯೆ 39297ಕ್ಕೆ ತಲುಪಿದೆ.

ಒಂದೇ ದಿನ 65 ಮಂದಿ ಸಾವು
65 ಮಂದಿ ಒಂದೇ ದಿನ ಸಾವನ್ನಪ್ಪಿದ್ದು, ಒಟ್ಟಾರೆ ಸಾವಿನಸಂಖ್ಯೆ 1390ಕ್ಕೆ ಮುಂಟ್ಟಿದೆ. ಉಳಿದಂತೆ ತಮಿಳುನಾಡಿನಲ್ಲಿ 743 ಕೇಸು, 3 ಸಾವು, ಮಧ್ಯಪ್ರದೇಶದಲ್ಲಿ 270 ಸೋಂಕು, 9 ಮಂದಿ,ದೆಹಲಿಯಲ್ಲಿ 534 ಕೇಸು, 10 ಸಾವು, ಗುಜರಾತ್ ರಾಜ್ಯದಲ್ಲಿ 398 ಕೇಸು, 30 ಸಾವು ದಾಖಲಾಗಿದೆ.












Click it and Unblock the Notifications