ಸ್ಪೈಸ್ ಜೆಟ್ ವಿಮಾನದಲ್ಲಿ 737 ರುಪಾಯಿ ಆಫರ್

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 21: ಒಂದ್ಸಲ ವಿಮಾನದಲ್ಲಿ ಹೋಗಿ ಬರಬೇಕು. ಯಾವಾಗಲಾದರೂ ಒಳ್ಳೆ ಆಫರ್ ಬಂದಾಗ ಹೇಳ್ರಿ ಅಂತ ನೀವು ಯಾರಿಗಾದರೂ ಹೇಳಿದ್ದೀರಾ. ನಾವು ನಿಮಗೆ ತಿಳಿಸ್ತಿದೀವಿ ಸ್ಪೈಸ್ ಜೆಟ್ ನವರು ಅಂಥ ಒಳ್ಳೆ ಯೋಜನೆ ಪರಿಚಯಿಸಿದ್ದಾರೆ. ದೇಶದೊಳಗೆ ಹಾರಾಟ ನಡೆಸುವ ಆಯ್ದ ವಿಮಾನ ಯಾನಕ್ಕೆ 737 ರುಪಾಯಿ ಪ್ರಯಾಣ ದರ ನಿಗದಿಪಡಿಸಲಾಗಿದೆ.

ಈ ದರದಲ್ಲಿ ಟಿಕೆಟ್ ಬುಕ್ ಮಾಡಿದರೆ 2017ರ ಜನವರಿಯಿಂದ ಅಕ್ಟೋಬರ್ 28ರ ಮಧ್ಯೆ ಪ್ರಯಾಣ ಮಾಡಬಹುದು. ನಾಲ್ಕು ದಿನಗಳ ಈ ವಾರ್ಷಿಕ ಮಾರಾಟ ನವೆಂಬರ್ 24ರಿಂದ ಆರಂಭವಾಗುತ್ತದೆ. 500 ಕಿಲೋಮೀಟರ್ ಒಳಗಿನ ಪ್ರಯಾಣಕ್ಕೆ ಇದು ಅನ್ವಯಿಸುತ್ತದೆ. ಚೆನ್ನೈ-ಕೊಯಮತ್ತೂರು-ಚೆನ್ನೈ, ಜಮ್ಮು-ಶ್ರೀನಗರ-ಜಮ್ಮು, ಚಂಡಿಗಢ-ಶ್ರೀನಗರ-ಚಂಡಿಗಢ ಮತ್ತು ಅಗರ್ತಲ-ಗುವಾಹತಿ ಮಧ್ಯದ ಪ್ರಯಾಣ ಇದರಲ್ಲಿ ಒಳಗೊಂಡಿದೆ.[ಐದು ಅತ್ಯುತ್ತಮ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆ]

SpiceJet announces airfares starting at Rs 737

ಈ ಮಾರಾಟ ಕೊಡುಗೆಯ ಟಿಕೆಟ್ ಗಳನ್ನು www.spicejet.com, ಆನ್ ಲೈನ್ ಟ್ರಾವೆಲ್ ಪೋರ್ಟಲ್ ಗಳು, ಸ್ಪೈಸ್ ಜೆಟ್ ಮೊಬೈಲ್ ಅಪ್ಲಿಕೇಷನ್, ವಿಮಾನ ನಿಲ್ದಾಣ ಕಚೇರಿಗಳು ಹಾಗೂ ಟ್ರಾವೆಲ್ ಏಜೆಂಟ್ ಮೂಲಕ ಬುಕ್ ಮಾಡಬಹುದು. ಸ್ಪೈಸ್ ಜೆಟ್ ಅದರ ವಿಮಾನ ನಿಲ್ದಾಣ ಕೌಂಟರ್ ಗಳಲ್ಲಿ ನವೆಂಬರ್ 24ರವರೆಗೆ 500, 1000 ನೋಟುಗಳನ್ನು ಸ್ವೀಕರಿಸುತ್ತದೆ.[ಏರ್ ಇಂಡಿಯಾದಲ್ಲೂ ನಿಮಗೆ ಬೇಕಾದ ಊಟ ಆರ್ಡರ್ ಮಾಡಿ]

ಅದರೆ, ಸರಕಾರಿ ನಿಯಮದ ಪ್ರಕಾರ ಅಂಥ ಬುಕಿಂಗ್ ಗಳನ್ನು ಬದಲಾಯಿಸಿಕೊಳ್ಳುವುದಕ್ಕೂ ಆಗಲ್ಲ, ಕ್ಯಾನ್ಸಲ್ ಮಾಡುವುದಕ್ಕೂ ಆಗಲ್ಲ. ಅಂದಹಾಗೆ 737 ರುಪಾಯಿ ಒಂದು ಕಡೆಯ ಪ್ರಯಾಣಕ್ಕೆ ಎಲ್ಲವನ್ನೂ ಒಳಗೊಂಡ ಪ್ರಯಾಣ ದರ. ಈ ಕೊಡುಗೆ ನವೆಂಬರ್ 24ರವರೆಗೆ ಇರುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
SpiceJet has launched all-inclusive one-way fares as low as Rs 737 for domestic travel to select destinations from January 9 to October 28, 2017. The four day Spicy Annual Sale will be open till November 24 and is applicable on sector covering up to 500km.
Please Wait while comments are loading...