Special Trains: ಮುಂಬೈ–ಬೆಂಗಳೂರು ನಡುವೆ 7 ವಿಶೇಷ ರೈಲು: ದೀಪಾವಳಿ, ಛತ್ ಹಬ್ಬಕ್ಕೆ ಪ್ರಯಾಣಿಕರಿಗೆ ಗುಡ್‌ನ್ಯೂಸ್!

ರೈಲ್ವೆ ಇಲಾಖೆಯಿಂದ ಮುಂಬೈ ಹಾಗೂ ಬೆಂಗಳೂರಿನ ನಡುವೆ ಸಂಚರಿಸುವ ರೈಲು ಪ್ರಯಾಣಿಕರಿಗೆ ಗುಡ್‌ನ್ಯೂಸ್ ಕೊಡಲಾಗಿದೆ. ದೀಪಾವಳಿ, ಛತ್ ಸೇರಿದಂತೆ ಹಬ್ಬಗಳ ಸಂದರ್ಭದಲ್ಲಿ ಹೆಚ್ಚಾಗುವ ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿರಿಸಿಕೊಂಡು ಮುಂಬೈ ಹಾಗೂ ಬೆಂಗಳೂರು ನಡುವೆ ವಿಶೇಷ ರೈಲುಗಳನ್ನು ಓಡಿಸಲು ರೈಲ್ವೆ ಇಲಾಖೆಯು ನಿರ್ಧರಿಸಿದೆ. ಅಕ್ಟೋಬರ್ 10ರಿಂದ ನವೆಂಬರ್ 22ರವರೆಗೆ ಈ ವಿಶೇಷ ರೈಲುಗಳು ಸಂಚರಿಸಲಿವೆ. ಪ್ರತಿ ದಿಕ್ಕಿನಲ್ಲಿ 7 ಟ್ರಿಪ್‌ಗಳು ಇರಲಿವೆ ಎಂದು ಹೇಳಲಾಗಿದೆ. ಈ ವಿಶೇಷ ರೈಲುಗಳ ಸಂಪೂರ್ಣ ವಿವರ ಇಲ್ಲಿದೆ.

Special Trains: ಮುಂಬೈ ಮತ್ತು ಬೆಂಗಳೂರು ನಡುವೆ ವಿಶೇಷ ರೈಲು

ಪೂಜಾ, ದೀಪಾವಳಿ ಮತ್ತು ಛತ್ ಹಬ್ಬಗಳ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಭಾಯಿಸಲು, ಮಧ್ಯ ರೈಲ್ವೆಯು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (ಸಿಎಸ್ಎಂಟಿ) ಮತ್ತು ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (ಎಸ್ಎಂವಿಟಿ) ನಡುವೆ ಸಾಪ್ತಾಹಿಕ ವಿಶೇಷ ರೈಲುಗಳನ್ನು ಓಡಿಸಲಿದೆ.

Special Trains 7 Trains Between Mumbai-Bengaluru for Diwali Chhath Festival Rush Good News for Passengers

ರೈಲು ಸಂಖ್ಯೆ 01013 ಸಿಎಸ್ಎಂಟಿ ಮುಂಬೈ-ಎಸ್ಎಂವಿಟಿ ಬೆಂಗಳೂರು ವಿಶೇಷ ರೈಲು, 10.10.2026 ರಿಂದ 21.11.2026 ರವರೆಗೆ ಪ್ರತಿ ಶನಿವಾರ ಸಿಎಸ್ಎಂಟಿ ಮುಂಬೈನಿಂದ 00:35 ಗಂಟೆಗೆ ಹೊರಟು, ಅದೇ ದಿನ 23:55 ಗಂಟೆಗೆ ಎಸ್ಎಂವಿಟಿ ಬೆಂಗಳೂರನ್ನು ತಲುಪಲಿದೆ.

ಮರುಪ್ರಯಾಣದಲ್ಲಿ, ರೈಲು ಸಂಖ್ಯೆ 01014 ಎಸ್ಎಂವಿಟಿ ಬೆಂಗಳೂರು-ಸಿಎಸ್ಎಂಟಿ ಮುಂಬೈ ವಿಶೇಷ ರೈಲು, 11.10.2026 ರಿಂದ 22.11.2026 ರವರೆಗೆ ಪ್ರತಿ ಭಾನುವಾರ ಎಸ್ಎಂವಿಟಿ ಬೆಂಗಳೂರಿನಿಂದ 04:30 ಗಂಟೆಗೆ ಹೊರಟು, ಮರುದಿನ 04:05 ಗಂಟೆಗೆ ಸಿಎಸ್ಎಂಟಿ ಮುಂಬೈ ತಲುಪಲಿದೆ.

ಮುಂದುವರಿದು ಮಾರ್ಗಮಧ್ಯದಲ್ಲಿ, ಈ ವಿಶೇಷ ರೈಲು ಎರಡೂ ಮಾರ್ಗಗಳಲ್ಲಿ ದಾದರ್, ಥಾಣೆ, ಕಲ್ಯಾಣ್, ಲೋನಾವಾಲಾ, ಪುಣೆ, ಲೋನಂದ್, ಸತಾರಾ, ಕರಾಡ್, ಸಾಂಗ್ಲಿ, ಮಿರಜ್, ಕುಡಚಿ, ರಾಯಬಾಗ್, ಘಟಪ್ರಭಾ, ಬೆಳಗಾವಿ, ಲೊಂಡಾ, ಧಾರವಾಡ, ಎಸ್ಎಸ್ಎಸ್ ಹುಬ್ಬಳ್ಳಿ, ಹಾವೇರಿ, ರಾಣಿಬೆನ್ನೂರು, ಹರಿಹರ, ದಾವಣಗೆರೆ, ಬೀರೂರು, ಅರಸೀಕೆರೆ ಮತ್ತು ತುಮಕೂರು ನಿಲ್ದಾಣಗಳಲ್ಲಿ ನಿಲ್ಲಲಿವೆ. ಈ ರೈಲುಗಳು (01013/01014) ಪ್ರತಿ ದಿಕ್ಕಿನಲ್ಲಿಯೂ 7 ಟ್ರಿಪ್ ಸಂಚರಿಸಲಿವೆ. ಈ ರೈಲು 2 ಎಸಿ 2-ಟೈರ್ ಬೋಗಿಗಳು, 18 ಎಸಿ 3-ಟೈರ್ ಬೋಗಿಗಳು ಮತ್ತು 2 ಲಗೇಜ್-ಕಮ್-ಗಾರ್ಡ್-ಕಮ್-ಜನರೇಟರ್ ವ್ಯಾನ್'ಗಳು ಸೇರಿದಂತೆ ಒಟ್ಟು 22 ಬೋಗಿಗಳನ್ನು ಹೊಂದಿರುತ್ತದೆ.

ಜಾವಗಲ್‌ನಲ್ಲಿ ನಡೆಯುವ ವಾರ್ಷಿಕ ಉರುಸ್ ಆಚರಣೆಯಲ್ಲಿ ಭಾಗವಹಿಸುವ ಪ್ರಯಾಣಿಕರು/ಭಕ್ತರ ಸಂಚಾರಕ್ಕೆ ಅನುಕೂಲವಾಗುವಂತೆ ಬಾಣಾವರ (ಬಿವಿಆರ್) ನಲ್ಲಿ ಒದಗಿಸಲಾದ ತಾತ್ಕಾಲಿಕ ನಿಲುಗಡೆ ಇಂದಿನವರೆಗೆ, 25.09.2026 ರವರೆಗೆ ಮಾತ್ರ ಅನ್ವಯಿಸುತ್ತದೆ ಮತ್ತು 27.09.2026 ರವರೆಗೆ ಮುಂದುವರಿಯುವುದಿಲ್ಲ ಎಂಬುದನ್ನು ಪ್ರಯಾಣಿಕರು ಮತ್ತು ಭಕ್ತರು ಗಮನಿಸಲು ವಿನಂತಿಸಲಾಗಿದೆ. ದಿನಾಂಕ 23.09.2026 ರ ಪತ್ರಿಕಾ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+