ಡಿ.22ಕ್ಕೆ ರಾಯಚೂರು ಮಾರ್ಗವಾಗಿ ನಾಂದೇಡ್-ಕೊಲ್ಲಮ್ ವಿಶೇಷ ರೈಲು ಸಂಚಾರ, ವಿವರ ತಿಳಿಯಿರಿ

ರಾಯಚೂರು, ಡಿಸೆಂಬರ್ 21: ಪ್ರಯಾಣಿಕರ ಬೇಡಿಕೆ ಹಿನ್ನೆಲೆಯಲ್ಲಿ ರಾಯಚೂರು ಮಾರ್ಗವಾಗಿ ನಾಂದೇಡ್ ಮತ್ತು ಕೊಲ್ಲಮ್ ನಡುವೆ ಇದೇ ಡಿಸೆಂಬರ್ 22ರಂದು ವಿಶೇಷ ರೈಲು ಕಾರ್ಯಾಚರಣೆ ನಡೆಸಲಿದೆ.

ಹೌದು ಪ್ರಯಾಣಿಕರ ಆಗ್ರಹದ ಮೇರೆಗೆ ಮುಂದಿನ ಆದೇಶದವರೆಗೆ ವಿಶೇಷ ರೈಲು ನಾಂದೇಡ್‌ನಿಂದ ಕೊಲ್ಲಮ್ ವರೆಗೆ ಸಂಚರಿಸಲಿದೆ. ಇದು ಶಬರಿಮಲೈ ಯಾತ್ರಾರ್ಥಿಗಳಿಗೆ ಸಹಾಯವಾಗಲಿದೆ ಎಂದು ರೈಲ್ವೆ ಬೋಡ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ನಾಳೆ ಡಿಸೆಂಬರ್ 22ರ ಗುರುವಾರದಿಂದ ಈ ವಿಶೇಷ ರೈಲು ಸಂಚಾರ ಓಡಾಡಲಿದೆ. ನಾಂದೇಡ್ ಮತ್ತು ಕೊಲ್ಲಮ್ ನಡುವೆ ಸಂಚರಿಸುವ 07135 ಸಂಖ್ಯೆಯ ವಿಶೇಷ ರೈಲು ರಾತ್ರಿ 11.45ಕ್ಕೆ ನಾಂದೇಡ್ ನಿಂದ ಪ್ರಯಾಣ ಆರಂಭಿಸಲಿದೆ. ಮರುದಿನ ಬೆಳಗ್ಗೆ 11.20ರ ವೇಳೆಗೆ ಅದು ರಾಯಚೂರು ಜಿಲ್ಲೆಗೆ ಬಂದು ತಲುಪಲಿದೆ. ಈ ಮಧ್ಯ ರೈಲು ಯಾದಗಿರಿ, ಸೇಲಂ ಮೂಲಕ ಹಾದು ಬರಲಿದೆ ಎಂದು ಅಧಿಕಾರಿ ಹೇಳಿದರು.

Special Train Run start from Nanded to Kollam via Raichur on December 22nd

ಅಷ್ಟೇ ಅಲ್ಲದೇ ಕೊಲ್ಲಮ್ ಮತ್ತು ರಾಯಚೂರು 07136 ಸಂಖ್ಯೆಯ ರೈಲು ಡಿಸೆಂಬರ್ 24ರಂದು ಹಾಗೂ ಮುಂದಿನ ವರ್ಷ ಜನವರಿ 7ರಂದು ಸಂಚರಿಸಲಿದೆ. ಈ ರೈಲು ಅಂದು ಮಧ್ಯಾಹ್ನ ಮಧ್ಯಾಹ್ನ 3 ಗಂಟೆಗೆ ಕೊಲ್ಲಮ್‌ನಿಂದ ಹೊರಡುತ್ತದೆ. ರಾಯಚೂರು ನಿಲ್ದಾಣಕ್ಕೆ ಸಂಜೆ 4.45ಕ್ಕೆ ಬಂದು ತಲುಪಲಿದೆ. ರಾಯಚೂರು ಜಿಲ್ಲೆ ಹಾಗೂ ಸುತ್ತಮುತ್ತಲಿನ ಭಾಗದ ಅಯ್ಯಪ್ಪ ಸ್ವಾಮಿ ಭಕ್ತರಿಗೆ ಇದು ಸಹಾಯವಾಗಲಿದೆ. ಜೊತೆಗೆ ಪ್ರಯಾಣಿಕರು ಈ ರೈಲು ಸೇವೆ ಪಡೆಯಬಹುದಾಗಿದೆ ಎಂದು ಬೋರ್ಡ್ ಅಧಿಕಾರಿಗಳು ತಿಳಿಸಿದ್ದಾರೆ.

Special Train Run start from Nanded to Kollam via Raichur on December 22nd

ರೈಲ್ವೆ ಇಲಾಖೆಯು ಈಗಾಗಲೇ ಹಲವೆಡೆ ರೈಲ್ವೆ ಸಂಚಾರವನ್ನು ವಿಸ್ತರಣೆ ಮಾಡಿದೆ. ಈ ಪೈಕಿ ನೈರುತ್ಯ ರೈಲ್ವೆ ಇಲಾಖೆ ಬೆಂಗಳೂರಿನ ಯಶವಂತಪುರದಿಂದ ವಿಜಯಪುರಕ್ಕೆ, ಶಿವಮೊಗ್ಗ ಟೌನ್‌ನಿಂದ ಎಂಜಿಆರ್‌ ಚೆನ್ನೈಗೆ, ಹುಬ್ಬಳ್ಳಿಯಿಂದ ರಾಮೇಶ್ವರಕ್ಕೆ ಪ್ರಯಾಣಿಕರ ಮನವಿ ಮೇರೆಗೆ ರೈಲುಗಳನ್ನು ವಿಸ್ತರಿಸಿ ಆದೇಶಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+