• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರಿಂದ ಪೊಲೀಸ್‌ ಅಧಿಕಾರಿ ಅಪಹರಣ

By Nayana
|

ಶ್ರೀನಗರ, ಜು.28: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ವಿಶೇಷ ಪೊಲೀಸ್‌ ಅಧಿಕಾರಿಯನ್ನು ಉಗ್ರರು ಅಪಹರಿಸಿದ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.

ಹಿರಿಯ ಪೊಲೀಸ್‌ ಅಧಿಕಾರಿಗಳ ಮಾಹಿತಿ ಪ್ರಕಾರ ಕೆಲವು ದಿನಗಳ ಹಿಂದೆ ಪೊಲೀಸ್‌ ಪೇದೆಯನ್ನು ಅಪಹರಿಸಿ ಕುಲ್ಗಾಮ್‌ನಲ್ಲಿ ಕೊಲೆ ಮಾಡಿರುವ ಘಟನೆಯೂ ನಡೆದಿತ್ತು.ಅಪಹರಣಕ್ಕೊಳಗಾದ ಅಧಿಕಾರಿಯನ್ನು ಶಕೀಲ್‌ ಅಹ್ಮದ್‌ ಲೋನ್‌ ಎಂದು ಗುರುತಿಸಲಾಗಿದ್ದು, ಜಮ್ಮು ಕಾಶ್ಮೀರದ ವಿಶೇಷ ಅಧಿಕಾರಿಯಾಗಿದ್ದ ಅವರು ಅಡುಗೆಯವರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಇಬ್ಬರು ಪಾಕ್‌ ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆ

ಪುಲ್ವಾಮ ಜಿಲ್ಲೆಯ ಚಾನ್‌ ಕಿತಾರ್‌ ಟ್ರಾಲ್‌ನಲ್ಲಿ ರಾತ್ರಿ ವೇಳೆ ಅಪಹರಿಸಿದ್ದಾರೆಂದು ನಂಬಲಾಗಿದ್ದು, ಈ ಕುರಿತು ಲೊಕೇಷನ್‌ ಪತ್ತೆ ಹಚ್ಚಲು ಮತ್ತು ಅಧಿಕಾರಿಯ ಹುಡುಕಾಟಕ್ಕೆ ವಿಶೇಷ ತಂಡಗಳನ್ನು ರಚಿಸಲಾಗಿದೆ.

ಇನ್ನು ಕಳೆದ ವಾರವಷ್ಟೇ ಪೊಲೀಸ್‌ ಪೇದೆಯೊಬ್ಬರನ್ನು ಅಪಹರಿಸಿದ್ದ ಹಿಜ್ಹುಲ್‌ ಮುಜಾಹಿದ್ದೀನ್‌ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಉಗ್ರರ ತಂಡ ಅವರನ್ನು ಹತ್ಯೆ ಮಾಡಿದ್ದರು.

ಪೇದೆ ಸಲೀಮ್‌ ಶಾ ಎಂಬಾತ ರಜೆಯ ಮೇಲೆ ಊರಿಗೆ ತೆರಳಿದ್ದಾಗ ಕುಲ್ಗಾಮ್‌ ಜಿಲ್ಲೆಯಿಂದ ಅವರನ್ನು ಅಪಹರಣ ಮಾಡಿದ್ದರು.

ಎಸ್‌ಪಿ ವಾಯಿದ್‌ ಮಾತನಾಡಿ, ಅಧಿಕಾರಿ ಅಪಹರಣವಾಗಿರುವ ಬಗ್ಗೆ ಆತನ ಕುಟುಂಬದಿಂದ ಮಾಹಿತಿ ಪಡೆಯಲಾಗಿದ್ದು, ತನ್ನ ಸಂಬಂಧಿಯೊಬ್ಬರ ಮನೆಗೆ ತೆರಳಿದ್ದ ವೇಳೆ ಉಗ್ರರು ಅಪಹರಿಸಿದ್ದಾರೆ ಎಂದು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು jammu and kashmir ಸುದ್ದಿಗಳುView All

English summary
A police staffer has been kidnapped by terrorists in Jammu and Kashmir's Pulwama district, the police said today. State police chief SP Vaid said they are verifying reports of the kidnapping, which happened a few days after a police constable was kidnapped and killed in Kulgam.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more