Get Updates
Get notified of breaking news, exclusive insights, and must-see stories!

ಈ ರಾಜ್ಯದಲ್ಲಿ ಪ್ರವಾಸಿಗರು, ಅತಿಥಿಗಳಿಗೆ ಮದ್ಯ ಪೂರೈಸಲು ವಿಶೇಷ ಪರವಾನಗಿ ಕಡ್ಡಾಯ: ಪಾವತಿಸಬೇಕಾದ ಮೊತ್ತ ಎಷ್ಟು?

ಚೆನ್ನೈ, ಏಪ್ರಿಲ್‌, 24: ಮದುವೆ, ಹುಟ್ಟುಹಬ್ಬ ಸೇರಿದಂತೆ ಇನ್ನಿತರ ದೊಡ್ಡ ದೊಡ್ಡ ಕಾರ್ಯಕ್ರಮಗಳಲ್ಲಿ ಮದ್ಯಪಾನದ ಪಾರ್ಟಿಯನ್ನು ಆಯೋಜನೆ ಮಾಡುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಆದರೆ ಬಂತಂದತಹ ಅತಿಥಿಗಳು ಮತ್ತು ಪ್ರವಾಸಿಗರಿಗೆ ಮದ್ಯವನ್ನು ಪೂರೈಸಲು ಈ ರಾಜ್ಯದಲ್ಲಿ ವಿಶೇಷ ಪಾರವಾನಗಿ ಪಡೆಯಬೇಕಾಗುತ್ತದೆ. ಹಾಗಾದರೆ ಈ ಹೊಸ ನಿಯಮ ಜಾರಿ ಮಾಡಿದ ಆ ರಾಜ್ಯ ಯಾವುದು? ಮತ್ತು ಪರವಾನಗಿ ಮೊತ್ತ ಎಷ್ಟು ಅನ್ನುವ ವಿವರವನ್ನು ಇಲ್ಲಿ ತಿಳಿಯಿರಿ.

ಮದುವೆ, ಸಮಾರಂಭ, ಸಮಾವೇಶ ಕೇಂದ್ರಗಳು, ಮನೆಯ ಕಾರ್ಯಕ್ರಮಗಳು, ಹಬ್ಬಗಳು, ಆಚರಣೆಗಳು ಮತ್ತು ಹಲವು ರೀತಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರಿಗೆ ಮದ್ಯವನ್ನು ಪೂರೈಸಲು ಈಗ ವಿಶೇಷ ಪರವಾನಗಿಯ ಅಗತ್ಯವಿದೆ.

Special Licence for liquor will be distribute required in this state for weddings, celebrations

ವಿಶೇಷ ಪರವಾನಗಿಗೆ ಪಾವತಿಸಬೇಕಾದ ವೆಚ್ಚ

ಹೊಸದಾಗಿ ಪ್ರಕಟವಾದ ತಮಿಳುನಾಡು ರಾಜ್ಯ ಸರ್ಕಾರದ ಆದೇಶದ ಪ್ರಕಾರ, ಕನ್ವೆನ್ಷನ್ ಸೆಂಟರ್‌ಗಳು, ಮದುವೆ ಸ್ಥಳಗಳು, ಸ್ಟೇಡಿಯಂಗಳು ಮುಂತಾದ ವಾಣಿಜ್ಯ ಸ್ಥಳಗಳಲ್ಲಿ ಮದ್ಯದ ವಿತರಣೆಗೆ ವಾರ್ಷಿಕ ಶುಲ್ಕ 1,000,000 ರೂಪಾಯಿ, ಪುರಸಭೆ ವ್ಯಾಪ್ತಿಯಲ್ಲಿನ ಪ್ರದೇಶಗಳಲ್ಲಿ 75,000 ರೂಪಾಯಿ ಮತ್ತು ಇತರ ಸ್ಥಳಗಳಲ್ಲಿ 50,000 ರೂಪಾಯಿ ಪಾವತಿಸಿ ಮಾಡಬೇಕಾಗುತ್ತದೆ.

ಹಾಗೆಯೆ ಮುನ್ಸಿಪಲ್ ಕಾರ್ಪೊರೇಶನ್‌ಗಳ ವ್ಯಾಪ್ತಿಯ ಪ್ರದೇಶಗಳಲ್ಲಿ ದಿನಕ್ಕೆ 11,000 ರೂಪಾಯಿ, ಪುರಸಭೆಗಳಲ್ಲಿ 7,500 ರೂಪಾಯಿ, ಮತ್ತು ಇತರ ಸ್ಥಳಗಳಲ್ಲಿ ದಿನಕ್ಕೆ 5,000 ಪರವಾನಗಿಗಳನ್ನು ಪ್ರತಿದಿನ ಪಡೆಯಬಹುದು. ಅದರಲ್ಲೂ ಮನೆ ಪಾರ್ಟಿಗಳು ಮತ್ತು ಇತರ ಸಾಮಾಜಿಕ ಕೂಟಗಳಂತಹ ವ್ಯವಹಾರಗಳನ್ನು ಹೊರತುಪಡಿಸಿ ಇತರ ಸ್ಥಳಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವವರಿಗೆ ಮದ್ಯವನ್ನು ಮಾರಾಟ ಮಾಡಲು ಈ ಪರವಾನಗಿಗಳು ಅಗತ್ಯವಾಗಿವೆ.

Special Licence for liquor will be distribute required in this state for weddings, celebrations

ಮುನ್ಸಿಪಲ್ ಕಾರ್ಪೊರೇಷನ್ ವ್ಯಾಪ್ತಿಯ ನಿವಾಸಿಗಳು 11,000 ರೂಪಾಯಿ ಪಾವತಿಸಬೇಕಾಗುತ್ತದೆ. ಒಮ್ಮೆ ಮದ್ಯವನ್ನು ಪೂರೈಸಲು ಪುರಸಭೆಯ ಪ್ರದೇಶಗಳಲ್ಲಿ ನಡೆಯುವ ಕಾರ್ಯಕ್ರಮಗಳಿಗೆ 7,500 ರೂಪಾಯಿ ಪಾವತಿಸಬೇಕಾಗುತ್ತದೆ. ಮತ್ತು ಇತರ ಸ್ಥಳಗಳಲ್ಲಿ ಪರವಾನಗಿ ಪಡೆಯಲು 5,000 ರೂಪಾಯಿ ಪಾವತಿಸಬೇಕಾಗುತ್ತದೆ.

ವಿಶೇಷ ಪರವಾನಗಿ ಪಡೆಯಲು ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಕಾರ್ಪೊರೇಷನ್‌ಗಳ ಪೊಲೀಸ್ ಆಯುಕ್ತರಿಂದ ನಿರಾಕ್ಷೇಪಣಾ ಪ್ರಮಾಣಪತ್ರದ ಅಗತ್ಯವಿದೆ ಎಂದು ಸರ್ಕಾರದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಪರವಾನಗಿದಾರನು ತನ್ನ ಯಾವುದೇ ಮದ್ಯದ ಸರಬರಾಜುಗಳನ್ನು ಘಟನಾ ಸ್ಥಳಕ್ಕೆ ಸಮೀಪವಿರುವ ತಮಿಳುನಾಡು ಸ್ಟೇಟ್ ಮಾರ್ಕೆಟಿಂಗ್ ಕಾರ್ಪೊರೇಶನ್ ಲಿಮಿಟೆಡ್ ಸಗಟು ಡಿಪೋದಿಂದ ಅನುಮತಿ ಪಡೆಯಬೇಕಾಗುತ್ತದೆ. ಅಥವಾ ಅಬಕಾರಿ ಇಲಾಖೆಯವರಿಂದ ಅನುಮೋದನೆ ಪಡೆಯಬೇಕಾಗುತ್ತದೆ. ನಂತರ ಸಹಾಯಕ ಆಯುಕ್ತರು ಅನುಮೋದಿಸಿದ ಸರಬರಾಜುಗಳ ಪ್ರಮಾಣಕ್ಕೆ ಅನುಗುಣವಾಗಿ ಷರತ್ತು ವಿಧಿಸಿ ಪರವಾನಗಿಯನ್ನು ನೀಡಲಾಗುತ್ತದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಕಾರ್ಯಕ್ರಮದ ಒಂದು ವಾರದ ಮೊದಲು ವಿಶೇಷ ಪರವಾನಗಿ ಅರ್ಜಿಯನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬೇಕು. ನಂತರ ಪೆಗ್‌ಗಳು ಅಥವಾ ಬಾಟಲಿಗಳಲ್ಲಿ ಮದ್ಯವನ್ನು ಪೂರೈಸಲು ಅನುಮತಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+