Michaung Cyclone: 118 ರೈಲು ಸೇವೆ ರದ್ದು ಮಾಡಿದ ದಕ್ಷಿಣ ರೈಲ್ವೆ

ಚೆನೈ, ಡಿಸೆಂಬರ್‌ 03: ಮಿಥಿಲಿ ಚಂಡಮಾರುತ ಬಳಿಕ ಬಂಗಾಳಕೊಲ್ಲಿಯಲ್ಲಿ ಮತ್ತೊಂದು ಚಂಡಮಾರುತ ಸೃಷ್ಟಿಯಾಗಿದೆ. ಈ ಚಂಡಮಾರುತಕ್ಕೆ ಮಿಚುವಾಂಗ್ ಎಂದು ಹೆಸರಿಡಲಾಗಿದ್ದು, ಮಾರುತದ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಿಚುವಾಂಗ್ ಚಂಡಮಾರುತ ಪರಿಣಾಮ ತಮಿಳು ನಾಡು ಸೇರಿದಂತೆ ಅನೇಕ ಕಡೆಗಳಲ್ಲಿ ಭಾರೀ ಮಳೆಯಾಗುತ್ತಿದೆ.

ಬಂಗಾಳಕೊಲ್ಲಿಯಲ್ಲಿ ಮಿಚುವಾಂಗ್ ಚಂಡಮಾರುತದ ಹಿನ್ನೆಲೆಯಲ್ಲಿ ದಕ್ಷಿಣ ಮಧ್ಯ ರೈಲ್ವೆಯು ತಮಿಳುನಾಡಿನ ಮೂಲಕ ಹಾದುಹೋಗುವ ರೈಲುಗಳು ಸೇರಿದಂತೆ ದೇಶದ ಹಲವಾರು ಭಾಗಗಳಿಗೆ 118 ದೂರದ ರೈಲುಗಳನ್ನು ರದ್ದುಗೊಳಿಸಿದೆ.

South Central Railway Cancels 118 Long-Distance Trains Due To Cyclone Michaung

ದಕ್ಷಿಣ ರೈಲ್ವೆ ಡಿಸೆಂಬರ್ 3 ರಿಂದ 6ರ ವರೆಗೆ 118 ರೈಲು ಸೇವೆಗಳನ್ನು ರದ್ದುಗೊಳಿಸಿದೆ. ಬೆಂಗಳೂರು-ಹೌರಾ, ತಿರುವನಂತಪುರಂ-ನವದೆಹಲಿ ಕೇರಳ ಎಕ್ಸ್‌ಪ್ರೆಸ್, ಪಾಟ್ನಾ-ಎರ್ನಾಕುಲಂ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್, ತಿರುವನಂತಪುರ ಸಿಕಂದರಾಬಾದ್ ಶಬರಿ ಎಕ್ಸ್‌ಪ್ರೆಸ್, ವಿಜಯವಾಡ ಜನಶತಾಬ್ದಿ, ಬರೌನಿ-ಕೊಯಮತ್ತೂರು ವಿಶೇಷ ರೈಲು, ಗಯಾ ಚೆನ್ನೈ ಎಕ್ಸ್‌ಪ್ರೆಸ್, ಗೋರಖ್‌ಪುರ್ ರಪ್ತಿಸಾಗರ್ ಎಕ್ಸ್‌ಪ್ರೆಸ್, ಕೊಚುವೇಲಿ, ನಿಜಾಮುದ್ದೀನ್ ಚೆನ್ನೈ ಡುರಂಟೊ ಎಕ್ಸ್‌ಪ್ರೆಸ್ ಸೇರಿ ರದ್ದಾಗಿರುವ ಪ್ರಮುಖ ರೈಲುಗಳಾಗಿವೆ.

ರದ್ದಾದ ರೈಲುಗಳು ದಕ್ಷಿಣ ರೈಲ್ವೆ, ನೈಋತ್ಯ ರೈಲ್ವೆ, ಮಧ್ಯ ರೈಲ್ವೆ, ಉತ್ತರ ರೈಲ್ವೆ ಮತ್ತು ಈಶಾನ್ಯ ರೈಲ್ವೆ ಸೇರಿದಂತೆ 12 ವಲಯ ರೈಲ್ವೆಗಳ ಮಾರ್ಗಗಳನ್ನು ಒಳಗೊಂಡಿವೆ ಎಂದು ರೈಲ್ವೆ ಇಲಾಖೆ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಮಿಚುವಾಂಗ್ ಚಂಡಮಾರುತ ತೀವ್ರತೆ

ಮುಂದಿನ 24 ಗಂಟೆಗಳಲ್ಲಿ ಮಿಚುವಾಂಗ್ ಚಂಡಮಾರುತ ತೀವ್ರಗೊಳ್ಳುವ ಸಾಧ್ಯತೆ ಹೆಚ್ಚಿದ್ದು, ಪುದುಚೇರಿಯ ಪೂರ್ವ-ಆಗ್ನೇಯಕ್ಕೆ ಸುಮಾರು 440 ಕಿಲೋ ಮೀಟರ್ ಮತ್ತು ಚೆನ್ನೈನ ಆಗ್ನೇಯಕ್ಕೆ 420 ಕಿಲೋ ಮೀಟರ್, ಆಂಧ್ರ ಪ್ರದೇಶದ ನೆಲ್ಲೂರಿನ ಆಗ್ನೇಯಕ್ಕೆ 740 ಕಿಲೋ ಮೀಟರ್ ದೂರದಲ್ಲಿ ಚಂಡಮಾರುತ ರೂಪಗೊಂಡಿದೆ. ಚಂಡಮಾರುತದ ಗಾಳಿಯು ಗಂಟೆಗೆ 80 ರಿಂದ 90 ಕಿಲೋ ಮೀಟರ್ ವೇಗದಲ್ಲಿ ಬೀಸುತ್ತಿದ್ದು, ಈ ವೇಗ ಗಂಟೆಗೆ 100 ಕಿಲೋ ಮೀಟರ್‌ಗೆ ಹೆಚ್ಚುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಇನ್ನು ಚಂಡಮಾರುತ ಪರಿಣಾಮ ಎದುರಿಸಲು ತಮಿಳುನಾಡು ಸರ್ಕಾರ ಸಿದ್ಧವಾಗಿದ್ದು, ರಾಜ್ಯ ಮತ್ತು ಜಿಲ್ಲಾ ಮಟ್ಟದ ತುರ್ತು ಕಾರ್ಯಾಚರಣೆ ಕೇಂದ್ರಗಳನ್ನು ತೆರೆದಿದೆ. ಸಹಾಯಕ್ಕಾಗಿ 1070 (ರಾಜ್ಯ), 1077 (ಜಿಲ್ಲೆ) ಮತ್ತು 94458 69848 (WhatsApp) ನಲ್ಲಿ ಸಂಪರ್ಕಿಸಬಹುದು ಎಂದು ತಮಿಳುನಾಡು ಸರ್ಕಾರ ತಿಳಿಸಿದ್ದು, ಈ ಹೆಲ್ಪ್‌ಲೈನ್‌ಗಳು ದಿನದ ಇಪ್ಪತ್ನಾಲ್ಕು ಗಂಟೆಗಳು ಕಾರ್ಯನಿರ್ವಹಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+