ರೈಲ್ವೆ ನಿಲ್ದಾಣದಲ್ಲಿ ಲೀಟರ್ ಶುದ್ಧ ನೀರಿಗೆ 5 ರುಪಾಯಿ

ನವದೆಹಲಿ, ಜು. 09: ರೈಲ್ವೆ ಪ್ರಯಾಣಿಕರಿಗೆ ಸಿಹಿಸುದ್ದಿಯೊಂದಿದೆ. ಇನ್ನು ಮುಂದೆ ರೈಲ್ವೆ ನಿಲ್ದಾಣದಲ್ಲಿ ಶುದ್ಧ ಕುಡುಯುವ ನೀರು ಸಿಗಲಿಲ್ಲ ಅಥವಾ ಸಿಕ್ಕರೂ ಹೆಚ್ಚಿನ ಬೆಲೆ ನೀಡಬೇಕಾಗುತ್ತದೆ ಎಂಬ ಆರೋಪಗಳಿಗೆಲ್ಲ ಕೇಂದ್ರ ಸರ್ಕಾರ ಮುಕ್ತಿ ಹಾಡಲು ಮುಂದಾಗಿದೆ. ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆಂಡ್ ಟೂರಿಸಂ ಕಾರ್ಪೋರೇಷನ್ (ಐಆರ್ ಸಿಟಿಸಿ) ಶುದ್ಧ ಕುಡಿಯುವ ನೀರು ಒದಗಿಸುವ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಿದೆ.

ದೇಶದ 1200 ರೈಲ್ವೆ ನಿಲ್ದಾಣಗಳಲ್ಲಿ 5 ಸಾವಿರ ವೆಂಡಿಂಗ್ ಮೆಷಿನ್ ಗಳನ್ನು ಅಳವಡಿಸಿ ಪ್ರಯಾಣಿಕರಿಗೆ ಶುದ್ಧ ಕುಡಿಯುವ ನೀರು ನೀಡಲಾಗುವುದು. ಕೇವಲ 5 ರುಪಾಯಿಗೆ ಒಂದು ಲೀಟರ್ ಮತ್ತು 3 ರು. ಗೆ ಅರ್ಧ ಲೀಟರ್ ನೀರು ನೀಡಲಾಗುವುದು ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ. ಇದು ಹೊಸ ಉದ್ಯೋಗವಕಾಶವನ್ನು ಸೃಷ್ಟಿ ಮಾಡಲಿದೆ.[ಬೆಂಗಳೂರು : ಪ್ರೀಪೇಯ್ಡ್ ಟ್ಯಾಕ್ಸಿ ದರಗಳು ಹೆಚ್ಚಳ]

india

ಕಾಯ್ದಿರಿಸದ ಟಿಕೆಟ್‌ಗಳಿಗೂ ಮೊಬೈಲ್ ದೃಢೀಕರಣ
ಆಧುನಿಕ ಪದ್ಧತಿಯನ್ನು ಒಂದೊಂದಾಗಿ ಅಳವಡಿಸಿಕೊತ್ತಿರುವ ರೈಲ್ವೆ ಇಲಾಖೆ ಕಾಯ್ದಿರಿಸಿದ ಟಿಕೆಟ್‌ಗಳಿಗೂ ಮೊಬೈಲ್ ಟಿಕೆಟ್‌ ಸೇವೆ ನೀಡುವ ಅಪ್ಲಿಕೇಷನ್‌ ಬಿಡಿಗಡೆ ಮಾಡಿದೆ. ರೈಲ್ವೆ ಸಚಿವ ಸುರೇಶ್ ಪ್ರಭು ಹೊಸ ಅಪ್ಲಿಕೇಷನ್ ಅನ್ನು ಬುಧವಾರ ಲೋಕಾರ್ಪಣೆ ಮಾಡಿದ್ದಾರೆ.[30 ಸೆಕೆಂಡ್ ನಲ್ಲಿ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಹೇಗೆ?]

ಮೊಬೈಲ್ ಟಿಕೆಟ್‌ ಅಪ್ಲಿಕೇಷನ್ ಜತೆಗೆ ಎಸ್‌ಎಂಎಸ್ ಮೂಲಕ ಪ್ರಯಾಣಿಕರು ಇಳಿಯಬೇಕಾದ ನಿಲ್ದಾಣಗಳ ಬಗ್ಗೆ ಸೂಚನೆ ನೀಡುವ ಹಾಗೂ ಹಿಂದಿ ಭಾಷೆಯಲ್ಲಿ ಇ-ಟಿಕೆಟ್‌ ಸೇವೆ ನೀಡುವ ಪೋರ್ಟಲ್‌ ಗೂ ಚಾಲನೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+