ಲೋಕಸಭೆ ಚುನಾವಣೆ: ಸಾಮಾಜಿಕ ಮಾಧ್ಯಮಗಳಿಂದ ಸ್ವಯಂ ನೀತಿ ಸಂಹಿತೆ ಅಳವಡಿಕೆ

ನವದೆಹಲಿ, ಮಾರ್ಚ್ 21: ಸಾಮಾಜಿಕ ಮಾಧ್ಯಮಗಳ ವೇದಿಕೆಯಲ್ಲಿ ಚುನಾವಣಾ ಪ್ರಚಾರದ ಕುರಿತಾಗಿ ಸ್ವಯಂ ನಿರ್ಬಂಧಗಳನ್ನು ಹಾಕಿಕೊಂಡಿರುವುದಾಗಿ ಬುಧವಾರ ಸಾಮಾಜಿಕ ಮಾಧ್ಯಮಗಳು ತಿಳಿಸಿವೆ..

ಫೇಸ್‌ಬುಕ್, ಟ್ವಿಟ್ಟರ್ ಮತ್ತು ವಾಟ್ಸಾಪ್‌ಗಳಲ್ಲಿ ಮತದಾನ ಆರಂಭವಾಗುವ 48 ಗಂಟೆಗಳಲ್ಲಿ ಯಾವುದೇ ರಾಜಕೀಯ ಪ್ರಚಾರ ನಡೆಸಲು ಅವಕಾಶವಿಲ್ಲ. ಈ ಅವಧಿಯಲ್ಲಿ ರಾಜಕೀಯ ವಿಚಾರಗಳನ್ನು ಪ್ರಕಟಿಸುವ ಮೂಲಕ ಉಲ್ಲಂಘನೆ ಮಾಡಿದರೆ ಚುನಾವಣಾ ಆಯೋಗದ ಆದೇಶದಂತೆ ಮೂರು ಗಂಟೆಯಲ್ಲಿ ಅದನ್ನು ತೆಗೆದುಹಾಕಲಾಗುತ್ತದೆ.

'ಸ್ವಯಂ ನೀತಿ ಸಂಹಿತೆ'ಯನ್ನು ಅನುಸರಿಸುವುದಾಗಿ ಪ್ರತಿಜ್ಞೆ ಮಾಡಿರುವ ಫೇಸ್‌ಬುಕ್, ಟ್ವಿಟ್ಟರ್‌ ಮುಂತಾದ ಸಾಮಾಜಿಕ ಮಾಧ್ಯಮಗಳು ಚುನಾವಣೆ ಆರಂಭಕ್ಕೆ ಮೂರು ವಾರ ಮುನ್ನವೇ ತಮ್ಮ ನಿರ್ಧಾರವನ್ನು ಚುನಾವಣಾ ಆಯೋಗಕ್ಕೆ ತಿಳಿಸಿವೆ.

social media platforms adopt election code content violating poll code will be removed in 3 hours

'ಭಾರತೀಯ ಅಂತರ್ಜಾಲ ಮತ್ತು ಮೊಬೈಲ್ ಸಂಸ್ಥೆ (ಐಎಎಂಎಐ) ಮತ್ತು ಫೇಸ್‌ಬುಕ್, ಟ್ವಿಟ್ಟರ್, ವಾಟ್ಸಾಪ್, ಗೂಗಲ್, ಶೇರ್‌ಚಾಟ್ ಮತ್ತು ಟಿಕ್‌ಟಾಕ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳ ಪ್ರತಿನಿಧಿಗಳೊಂದಿಗೆ ಮಂಗಳವಾರ ನಡೆದ ಸಭೆಯ ಬಳಿಕ ನೀತಿ ಸಂಹಿತೆಯನ್ನು ಸಿದ್ಧಪಡಿಸಲಾಗಿದೆ ಎಂದು ಚುನಾವಣಾ ಆಯೋಗದ ಹೇಳಿಕೆ ತಿಳಿಸಿದೆ.

ಜನ ಪ್ರತಿನಿಧಿ ಕಾಯ್ದೆ, 1951ರ ಸೆಕ್ಷನ್ 126ರ ಅಡಿ ಯಾವುದೇ ನೀತಿ ಸಂಹಿತೆ ಉಲ್ಲಂಘನೆಯಾದರೆ ಸಿನ್ಹಾ ಸಮಿತಿ ಶಿಫಾರಸಿನಂತೆ ಮೂರು ಗಂಟೆಗಳಲ್ಲಿ ಕ್ರಮ ತೆಗೆದುಕೊಳ್ಳುವುದಾಗಿ ಸಾಮಾಜಿಕ ಮಾಧ್ಯಮಗಳು ಒಪ್ಪಿಕೊಂಡಿವೆ ಎಂದು ಅದು ತಿಳಿಸಿದೆ.

ಅಂತರ್ಜಾಲ ಪ್ರಚಾರದ ನಿಯಮಾವಳಿಗಳನ್ನು ಇದೇ ಮೊದಲ ಬಾರಿಗೆ ಸಾಮಾಜಿಕ ಮಾಧ್ಯಮಗಳು ಸ್ವಪ್ರೇರಣೆಯಿಂದ ಅಳವಡಿಸಿಕೊಂಡಿವೆ.

ಸಾಮಾಜಿಕ ಮಾಧ್ಯಮಗಳಲ್ಲಿ ಪಾಲ್ಗೊಳ್ಳುವವರು ಪೇಯ್ಡ್ ರಾಜಕೀಯ ಜಾಹೀರಾತುಗಳಿಗಾಗಿ ಈಗಾಗಲೇ ಅಸ್ತಿತ್ವದಲ್ಲಿರುವ ತಮ್ಮ ಲೇಬಲ್‌ಗಳನ್ನು ಬಳಸಿಕೊಳ್ಳಬೇಕು. ಯಾವುದೇ ಪ್ರಮಾನೀಕರಣವಿಲ್ಲದ ಜಾಹೀರಾತುಗಳು ಚುನಾವಣಾ ಆಯೋಗದ ಗಮನಕ್ಕೆ ಬಂದರೆ ತಕ್ಷಣ ಕ್ರಮ ತೆಗೆದುಕೊಳ್ಳಲಾಗುತ್ತದೆ.

ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಮತ್ತು ಚುನಾವಣಾ ಆಯೋಗದ ಮಧ್ಯೆ ಐಎಎಂಎಐ ಕೊಂಡಿಯಂತೆ ಕೆಲಸ ಮಾಡಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+