ಭೂತಾನ್ ಏರ್ ಲೈನ್ಸ್ ನಲ್ಲಿ ಬೆಂಕಿ: ತಪ್ಪಿದ ಭಾರೀ ದುರಂತ
ಕೋಲ್ಕತ್ತಾ, ಸೆಪ್ಟೆಂಬರ್ 9: ಕೋಲ್ಕತ್ತಾದಿಂದ ಬ್ಯಾಂಕಾಕ್ ಗೆ ಹೊರಟಿದ್ದ ಭೂತಾನ್ ಏರ್ ಲೈನ್ಸ್ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡು ಪ್ರಯಾಣಿಕರಲ್ಲಿ ಕೆಲಕಾಲ ಆತಂಕ ಸೃಷ್ಟಿಯಾದ ಘಟನೆ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಇಂದು(ಸೆ.9) ನಡೆದಿದೆ.
WB: Smoke detected from Royal Bhutan Airlines flight during take-off for Bangkok at Kolkata airport, fire brigade on spot. All pax deboarded
— ANI (@ANI) September 9, 2017
ಬ್ಯಾಂಕಾಕ್ ಗೆ ಟೇಕಾಫ್ ಆಗಬೇಕಿದ್ದ ವಿಮಾನದ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಏರ್ ಲೈನ್ಸ್ ಸಿಬ್ಬಂದಿಗಳ ಸಮಯಪ್ರಜ್ಞೆಯಿಂದ ಭಾರೀ ಅಪಘಾತವೊಂದು ತಪ್ಪಿದ್ದು,ಯಾವುದೇ ರೀತಿಯ ಅಪಾಯ ಸಂಭವಿಸಿಲ್ಲ ಎಂದು ಮೂಲಗಳು ತಿಳಿಸಿವೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.












Click it and Unblock the Notifications