ಅತಿ ಹೆಚ್ಚು ಸ್ಪ್ಯಾಮ್ ಕರೆ: 4ನೇ ಸ್ಥಾನದಲ್ಲಿ ಭಾರತ
ನವದೆಹಲಿ, ಡಿಸೆಂಬರ್ 18: ಅತಿ ಹೆಚ್ಚು ಸ್ಪ್ಯಾಮ್ ಕರೆ ಮಾಡಿದ ದೇಶಗಳ ಪಟ್ಟಿಯಲ್ಲಿ ಭಾರತ 4ನೇ ಸ್ಥಾನದಲ್ಲಿದೆ ಎಂದು ಟ್ರೂ ಕಾಲರ್ ಹೇಳಿದೆ.
ಮಾರಾಟ ಮತ್ತು ಟೆಲಿಮಾರ್ಕೆಟಿಂಗ್ ಕರೆಗಳ ಸಂಖ್ಯೆಯಲ್ಲಿನ ಹೆಚ್ಚಳದಿಂದಾಗಿ ಈ ಪಟ್ಟಿಯಲ್ಲಿ ಭಾರತದಲ್ಲಿ ಸ್ಪ್ಯಾಮ್ ಕರೆಗಳಲ್ಲಿ ಏರಿಕೆಯಾಗಿದೆ. ಈ ವರ್ಷ ಎಲ್ಲಾ ವರ್ಗಗಳ ಮಾರಾಟ-ಸಂಬಂಧಿತ ಕರೆಗಳಲ್ಲಿ ಬಹುಪಾಲು ಇನ್ ಕಮಿಂಗ್ ಸ್ಪ್ಯಾಮ್ ಕರೆಗಳೇ(93.5 ಪ್ರತಿಶತ) ಆಗಿವೆ.
ಹಣಕಾಸು ಸೇವೆಗಳ ಸ್ಪ್ಯಾಮ್ ಕರೆಗಳು ಶೇಕಡಾ 3.1ರಷ್ಟಿದ್ದರೆ, ಕಿರಿಕಿರಿ ಉಂಟು ಮಾಡುವ ಕರೆಗಳು ಮತ್ತು ಸ್ಕ್ಯಾಮ್ ಕರೆಗಳು ಕ್ರಮವಾಗಿ ಶೇಕಡಾ 2 ಮತ್ತು 1.4 ಶೇಕಡಾ ಇದೆ.

ಈ ವರ್ಷ ಭಾರತದಲ್ಲಿ ಕೇವಲ ಒಬ್ಬ ಸ್ಪ್ಯಾಮರ್‍ನಿಂದ 202 ಮಿಲಿಯನ್ ಸ್ಪ್ಯಾಮ್ ಕರೆಗಳು ಬಂದಿವೆ. ಅದು ಪ್ರತಿದಿನ 6,64,000ಕ್ಕೂ ಹೆಚ್ಚು ಮತ್ತು ಪ್ರತಿದಿನ ಪ್ರತಿ ಗಂಟೆಗೆ 27,000 ಸ್ಪ್ಯಾಮ್ ಕರೆಗಳು ಬಂದಿದೆ ಎಂದು ವರದಿ ಹೇಳುತ್ತದೆ.
ಸ್ಪ್ಯಾಮ್ ಕರೆಗಳಿಂದ ಹೆಚ್ಚು ಪ್ರಭಾವಿತವಾಗಿರುವ 20 ದೇಶಗಳ ಪಟ್ಟಿಯಲ್ಲಿ ಭಾರತವು ಈ ವರ್ಷ ನಾಲ್ಕನೇ ಸ್ಥಾನದಲ್ಲಿದೆ ಎಂದು ವರದಿಯೊಂದು ಬಹಿರಂಗಪಡಿಸಿದೆ. ಟ್ರೂ ಕಾಲರ್‌ನ ಹೊಸ ವರದಿಯು ಸ್ಪ್ಯಾಮ್ ಕರೆಗಳು ಮತ್ತು ಜಗತ್ತಿನಾದ್ಯಂತ ಅದರ ಪರಿಣಾಮಗಳ ಕುರಿತು ನಡೆಸಿದ ಅಧ್ಯಯನದಿಂದ ಭಾರತದಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಸ್ಪ್ಯಾಮ್ ಕರೆಗಳ ಪರಿಣಾಮ ಹೆಚ್ಚಾಗಿದೆ ಎಂದು ತೋರಿಸಿದೆ.
2020ರಲ್ಲಿ ಒಂಭತ್ತನೇ ಸ್ಥಾನದಲ್ಲಿದ್ದ ಭಾರತ ಈಗ ಬ್ರೆಜಿಲ್, ಪೆರು ಮತ್ತು ಉಕ್ರೇನ್ ನಂತರದ ನಾಲ್ಕನೇ ಸ್ಥಾನದಲ್ಲಿದೆ. ಪ್ರತಿ ಬಳಕೆದಾರರಿಗೆ ತಿಂಗಳಿಗೆ ಸರಾಸರಿ 32.9 ಸ್ಪ್ಯಾಮ್ ಕರೆಗಳೊಂದಿಗೆ ಬ್ರೆಜಿಲ್ ಅಗ್ರಸ್ಥಾನದಲ್ಲಿದೆ, ಪೆರುವಿನಲ್ಲಿ ಪ್ರತಿ ಬಳಕೆದಾರರಿಗೆ ತಿಂಗಳಿಗೆ 18.02 ಕರೆಗಳಿಗಿಂತ ಹೆಚ್ಚಿನ ಸಂಖ್ಯೆ ಪಡೆದು ಇದು ಎರಡನೇ ಸ್ಥಾನದಲ್ಲಿದೆ.
ಇಂಟರ್‌ನೆಟ್ ದಿಗ್ಗಜ ಗೂಗಲ್, ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ನೂತನ ಆಯ್ಕೆಯೊಂದನ್ನು ಪರಿಚಯಿಸಿದೆ. ನಮ್ಮ ದೇಶ ಸಹಿತ ಐದು ರಾಷ್ಟ್ರಗಳಲ್ಲಿ ಗೂಗಲ್ ಈ ನೂತನ ಆಯ್ಕೆ ಪರಿಚಯಿಸುತ್ತಿದ್ದು, ಟ್ರೂಕಾಲರ್ ಮಾದರಿಯಲ್ಲೇ ಆಂಡ್ರಾಯ್ಡ್ ಬಳಕೆದಾರರು ಸ್ಪಾಮ್ ಕರೆಗಳನ್ನು ನಿಯಂತ್ರಿಸಬಹುದು ಮತ್ತು ಬೇಡವಾದ ಕರೆಗಳನ್ನು ತಿರಸ್ಕರಿಸುವ ಆಯ್ಕೆಯನ್ನು ನೀಡಿದೆ.
ಗೂಗಲ್ ಫೋನ್ ಅಪ್ಲಿಕೇಶನ್‌ನಲ್ಲಿ ವೆರಿಫೈಡ್ ಕಾಲ್ಸ್ ಎನ್ನುವ ಫೀಚರ್ ಅನ್ನು ಬಿಡುಗಡೆ ಮಾಡಿದ್ದು, ಆಂಡ್ರಾಯ್ಡ್ ಫೋನ್ ಬಳಕೆದಾರರು ಕಿರಿಕಿರಿ ಉಂಟುಮಾಡುವ ಕರೆಗಳನ್ನು ತಿರಸ್ಕರಿಸುವ ಜತೆಗೆ, ರಿಪೋರ್ಟ್ ಮಾಡುವ ಆಯ್ಕೆ ಪಡೆಯಲಿದ್ದಾರೆ.
ಅಲ್ಲದೆ, ಬ್ಯುಸಿನೆಸ್ ವೆರಿಫೈ ಆಯ್ಕೆ ಕೂಡ ಇದ್ದು, ನೈಜ ಕರೆಗಳನ್ನು ಗ್ರಾಹಕರು ದೃಢೀಕರಿಸಬಹುದು ಮತ್ತು ನಕಲಿ ಕರೆಗಳನ್ನು ತಿರಸ್ಕರಿಸಿ, ರಿಪೋರ್ಟ್ ಮಾಡಬಹುದು.
ವೆರಿಫೈಡ್ ಕಾಲ್‌ನಲ್ಲಿ ಆಂಡ್ರಾಯ್ಡ್ ಬಳಕೆದಾರರು ಕರೆ ಮಾಡಿದವರ ಹೆಸರು, ಲೋಗೋ ಮತ್ತು ಕಂಪನಿಯ ಕರೆಯಾಗಿದ್ದಲ್ಲಿ, ಕರೆ ಮಾಡಿರುವ ಕಾರಣವನ್ನು ತಿಳಿದುಕೊಳ್ಳಬಹುದು. ಅದನ್ನು ಗೂಗಲ್ ದೃಢೀಕರಿಸಿದ್ದರೆ ನಿಮಗೆ ಮಾಹಿತಿ ದೊರೆಯುತ್ತದೆ.
ನಕಲಿಯಾಗಿದ್ದರೆ ಅಲ್ಲಿಯೇ ಸ್ಪಾಮ್ ಕರೆ ಅಲರ್ಟ್ ತೋರಿಸುವುದರಿಂದ, ಅನಗತ್ಯ ಕರೆಗಳ ಸಮಸ್ಯೆಯಿಂದ ಪಾರಾಗಲು ಈ ಆಯ್ಕೆ ಸೂಕ್ತವೆನಿಸಲಿದೆ. ಗೂಗಲ್ ಫೋನ್ ಆಪ್ಲಿಕೇಶನ್‌ನಲ್ಲಿ ಮಾತ್ರ ಈ ಆಯ್ಕೆ ದೊರೆಯಲಿದ್ದು, ಭಾರತ ಮಾತ್ರವಲ್ಲದೆ, ಅಮೆರಿಕ, ಮೆಕ್ಸಿಕೋ, ಬ್ರೆಝಿಲ್ ಮತ್ತು ಸ್ಪೇನ್‌ನಲ್ಲಿ ಲಭ್ಯವಾಗಲಿದೆ.












Click it and Unblock the Notifications