ನಮಗೂ ಅವಕಾಶ ಕೊಡಿ: ವಿವಿಧ ರಾಜ್ಯದ ಬಹುಮತ ಹೊಂದಿದ ಪಕ್ಷಗಳ ಬೇಡಿಕೆ

ಕರ್ನಾಟಕದಲ್ಲಿ ಬಹುಮತ ಹೊಂದಿರದ ಬಿಜೆಪಿ ಪಕ್ಷಕ್ಕೆ ಸರ್ಕಾರ ರಚನೆಗೆ ರಾಜ್ಯಪಾಲರು ಆಹ್ವಾನ ನೀಡಿರುವ ಬೆನ್ನಲ್ಲೆ ದೇಶದ ವಿವಿಧ ರಾಜ್ಯಗಳಲ್ಲಿ ಹೆಚ್ಚು ಸ್ಥಾನ ಗೆದ್ದಿದ್ದರೂ ವಿದ್ದರೂ ವಿರೋಧ ಪಕ್ಷದಲ್ಲಿ ಕೂತಿರುವ ಪಕ್ಷಗಳು ಎದ್ದು ಕುಳಿತಿವೆ.

ಕರ್ನಾಟಕದ ರಾಜ್ಯಪಾಲರು ಹೆಚ್ಚು ಸ್ಥಾನ ಗೆದ್ದ ಪಕ್ಷಕ್ಕೆ ಅವಕಾಶ ನೀಡಿದಂತೆ ಇಲ್ಲಿಯೂ ನಮಗೆ ಅವಕಾಶ ನೀಡಿ ಎಂದು ರಾಜ್ಯಪಾಲರನ್ನು ಎಡ ತಾಕುತ್ತಿವೆ. ಅದರಲ್ಲಿ ಪ್ರಮುಖವಾದುದು ಗೋವಾ, ಮಣಿಪುರ ಮತ್ತು ಬಿಹಾರ.

ಗೋವಾನಲ್ಲಿ ಕಾಂಗ್ರೆಸ್ ಪಕ್ಷ 17 ಸ್ಥಾನಗಳೊಂದಿಗೆ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೆ ಬಿಹಾರದಲ್ಲಿ ಆರ್‌ಜೆಡಿ ದೊಡ್ಡ ಪಕ್ಷವಾಗಿದೆ ಆದರೆ ಎರಡೂ ರಾಜ್ಯಗಳಲ್ಲಿ ಕಡಿಮೆ ಸ್ಥಾನ ಗಳಿಸಿರುವ ಬಿಜೆಪಿಯು ಇತರೆ ಪಕ್ಷಗಳ ಜೊತೆ ಸೇರಿ ಸರ್ಕಾರ ರಚಿಸಿವೆ.

ನಮಗೂ ಸರ್ಕಾರ ರಚನೆಗೆ ಅವಕಾಶ ಕೊಡಿ

ನಮಗೂ ಸರ್ಕಾರ ರಚನೆಗೆ ಅವಕಾಶ ಕೊಡಿ

ಕರ್ನಾಟಕದಲ್ಲಿನ ರಾಜಕೀಯ ಬೆಳವಣಿಗೆ ಬಗ್ಗೆ ಮಾತನಾಡಿರುವ ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್‌, ಕರ್ನಾಟಕದಲ್ಲಿ ಅತಿ ದೊಡ್ಡ ಪಕ್ಷವನ್ನು ಸರ್ಕಾರ ರಚನೆಗೆ ಆಹ್ವಾನ ನೀಡುರುವುದ ಸರಿ ಎಂದಾದರೆ ಹಾಗೂ ಅದು ಜನಾದೇಶಕ್ಕೆ ನೀಡುವ ಗೌರವ ಎಂದಾದರೆ ಬಿಹಾರದಲ್ಲಿ ಬಿಜೆಪಿ ಮತ್ತು ಜೆಡಿಯು ಮೈತ್ರಿ ಸರ್ಕಾರಕ್ಕೆ ಅವಕಾಶ ನೀಡಿರುವುದು ಸರಿಯೇ ಎಂದು ಬಿಜೆಪಿ ಮತ್ತು ಬಿಹಾರ ಮುಖ್ಯಮಂತ್ರಿ ಹೇಳಬೇಕು ಎಂದಿದ್ದಾರೆ.

ಕುದುರೆ ವ್ಯಾಪಾರವೇ ಅಮಿತ್ ಶಾ ಸೂತ್ರ

ಕುದುರೆ ವ್ಯಾಪಾರವೇ ಅಮಿತ್ ಶಾ ಸೂತ್ರ

ಕರ್ನಾಟಕದಲ್ಲಿ ಬಿಜೆಪಿಯು ಹೇಗೆ ಬಹುಮತ ಸಾಬೀತು ಪಡಿಸುತ್ತದೆ, ಕರ್ನಾಟಕದಲ್ಲಿ ಬಿಜೆಪಿಯನ್ನು ಉಳಿಸಿಕೊಳ್ಳಲು ಅಮಿತ್ ಶಾ ಬಳಿ ಇರುವ ಸೂತ್ರವೆಂದರೆ 'ಕುದುರೆ ವ್ಯಾಪಾರ' ಎಂದಿರುವ ತೇಜಸ್ವಿ ಯಾದವ್, ಸಿಬಿಐ, ಇಡಿ ಸಂಸ್ಥೆಗಳನ್ನೆಲ್ಲಾ ಬಳಸಿ ಅಮಿತ್ ಶಾ ಶಾಸಕರನ್ನು ಕೊಳ್ಳುತ್ತಾರೆ. ಈಗ ನಾವು (ಪ್ರಾದೇಶಿಕ ಪಕ್ಷಗಳು) ಒಂದಾಗದಿದ್ದರೆ ಹಿಂದೆ ಬಿಹಾರ, ಇಂದು ಕರ್ನಾಟಕದಂತೆ ನಾಳೆ ರಾಜಸ್ಥಾನವನ್ನೂ ಬಿಜೆಪಿ ಮುಗಿಸಿಬಿಡುತ್ತದೆ ಎಂದಿದ್ದಾರೆ.

ಆರ್‌ಜೆಡಿಯಿಂದ ರಾಜ್ಯಪಾಲರಿಗೆ ಮನವಿ

ಆರ್‌ಜೆಡಿಯಿಂದ ರಾಜ್ಯಪಾಲರಿಗೆ ಮನವಿ

ಬಿಹಾರದ ಅತಿ ದೊಡ್ಡ ಪಕ್ಷವಾದ ಆರ್‌ಜೆಡಿಯು ನಾಳೆ (ಶುಕ್ರವಾರ) ರಾಜ್ಯಪಾಲರನ್ನು ಭೇಟಿ ಆಗಿ ಸರ್ಕಾರ ರಚಿಸಲು ಆಹ್ವಾನ ನೀಡುವಂತೆ ಮನವಿ ಮಾಡಲಿದೆ, ಕರ್ನಾಟಕದಲ್ಲಿ ಅವಕಾಶ ನೀಡಿರುವಂತೆ ನಮಗೂ ಅವಕಾಶ ನೀಡಿರೆಂದು ನಾವು ಮನವಿ ಮಾಡುತ್ತೇವೆ ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ.

ಮಣಿಪುರದಲ್ಲೂ ರಾಜ್ಯಪಾಲರಿಗೆ ಮನವಿ

ಮಣಿಪುರದಲ್ಲೂ ರಾಜ್ಯಪಾಲರಿಗೆ ಮನವಿ

ಮಣಿಪುರ ಮಾಜಿ ಮುಖ್ಯಮಂತ್ರಿ ಬ್ರಿಯನ್ ಸಿಂಗ್‌ ಕೂಡ ನಾಳೆ (ಶುಕ್ರವಾರ) ರಾಜ್ಯಪಾಲರನ್ನು ಭೇಟಿ ಆಗಲಿದ್ದು, ಮಣಿಪುರದಲ್ಲಿ ಅತಿ ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್‌ಗೆ ಸರ್ಕಾರ ರಚನೆಗೆ ಅವಕಾಶ ನೀಡುವಂತೆ ಕೋರಲಿದ್ದಾರೆ. ಬಿಜೆಪಿಗೆ ಅವಕಾಶ ಸಿಗುವಂತಿದ್ದರೆ ನಮಗೆ ಏಕೆ ಸಿಗುವುದಿಲ್ಲ ಎಂದು ಮಣಿಪುರದ ಮಾಜಿ ಮುಖ್ಯಮಂತ್ರಿ ಪ್ರಶ್ನೆ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+