Get Updates
Get notified of breaking news, exclusive insights, and must-see stories!

ಮೋದಿ ಸಂದರ್ಶಕ ಅಕ್ಷಯ್ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಸಿದ್ದಾರ್ಥ್

Recommended Video

      ನರೇಂದ್ರ ಮೋದಿ ಜೊತೆಗಿನ ಅಕ್ಷಯ್ ಕುಮಾರ್ ಸಂದರ್ಶನವನ್ನ ಟೀಕೆ ಮಾಡಿದ ಬಹುಭಾಷಾ ನಟ | Oneindia Kannada

      ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಸರ್ಕಾರದ ನಡೆ ವಿರುದ್ಧ ಸಾಮಾಜಿಕ ಜಾಲ ತಾಣಗಳಲ್ಲಿ ದನಿಯೆತ್ತುವವರ ಸಾಲಿನಲ್ಲಿ ಬಹುಭಾಷಾ ನಟ ಸಿದ್ದಾರ್ಥ್ ಕೂಡಾ ಕಾಣಿಸಿಕೊಂಡಿದ್ದರು. ಪ್ರಧಾನಿ ಮೋದಿ ಅವರು ನಟ ಅಕ್ಷಯ್ ಕುಮಾರ್ ಅವರ ಜತೆ ರಾಜಕೀಯೇತರ ಮಾತುಕತೆ ನಡೆಸಿದ್ದರ ಬಗ್ಗೆ ನಟ ಸಿದ್ದಾರ್ಥ್ ಟ್ವೀಟ್ ಮಾಡಿದ್ದಾರೆ.

      ನರೇಂದ್ರ ಮೋದಿಯವರು ಅಕ್ಷಯ್​ ಕುಮಾರ್​ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಬಾಲ್ಯ, ಕುಟುಂಬದ ಬಗ್ಗೆ ಹಲವು ಸಂಗತಿಗಳನ್ನು ಹಂಚಿಕೊಂಡಿದ್ದರು. ಮೋದಿ ಅಲ್ಲದೆ ಅಕ್ಷಯ್ ಬಗ್ಗೆ ಎಲ್ಲಾ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದಲ್ಲದೆ, ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆಯಾಗುತ್ತಲೇ ಇದೆ. ಆದರೆ, ನಟ ಸಿದ್ದಾರ್ಥ್ ಅವರು ಸಂದರ್ಶಕ ಅಕ್ಷಯ್ ಅವರ ಬಗ್ಗೆ ಪ್ರತಿಕ್ರಿಯಿಸಿ ಅಕ್ಷಯ್​ ಕುಮಾರ್ ಅವರು ಓರ್ವ ಖಳನಾಯಕರಂತಾಗಿ ತುಂಬಾ ಕೆಳಮಟ್ಟದಲ್ಲಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

      Siddharth Makes A SHOCKING Statement Against Akshay Kumar

      ಸಿದ್ಧಾರ್ಥ್​ ಅವರ ಟ್ವೀಟ್​ಗೆ ಮೋದಿ ಹಾಗೂ ಅಕ್ಷಯ್ ಅಭಿಮಾನಿಗಳು ತಿರುಗೇಟು ನೀಡಿದ್ದಾರೆ. ಕೆಲವರು ಸಿದ್ದಾರ್ಥ್ ವಿರುದ್ಧ ಕಿಡಿಕಾರಿದ್ದಾರೆ. ಕೆಲವರು ಮೋದಿ ಅವರ ಈ ಸಂದರ್ಶನ ಬೇಕಾಗಿರಲಿಲ್ಲ ಎಂದಿದ್ದಾರೆ.

      ನರೇಂದ್ರ ಮೋದಿಯವರ ಜೀವನ ಆಧಾರಿತ ಸಿನಿಮಾ 'ಪಿಎಂ ನರೇಂದ್ರ ಮೋದಿ' ಟ್ರೇಲರ್​ಬಿಡುಗಡೆಯಾದಾಗ ಕೂಡ ಸಿದ್ದಾರ್ಥ್ ಕಿಡಿಕಾರಿದ್ದರು. ಮೋದೀಜಿಯವರು ಏಕವ್ಯಕ್ತಿಯಾಗಿ ಬ್ರಿಟಿಷರನ್ನು ಸೋಲಿಸಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ ಎನಿಸುತ್ತದೆ ಅದನ್ನು ತೋರಿಸಿಲ್ಲ ಎನಿಸುತ್ತದೆ. ಅದೇನಾದರೂ ತೋರಿಸಿದ್ದರೆ ಪ್ರಗತಿಪರರ, ನಕ್ಸಲರ, ಕಮ್ಯೂನಿಸ್ಟ ಹಾಗೂ ನೆಹರೂ ಅವರಿಗೆ ಟಾಂಗ್​ ಕೊಡಬಹುದಿತ್ತು. ಈ ಟ್ರೇಲರ್​ಚೀಪ್​ ಗಿಮಿಕ್​ಎಂದು ಲೇವಡಿ ಮಾಡಿದ್ದರು. ಈಗ ಮೋದಿ ಸಂದರ್ಶನದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+