ಜೈಲಿನಲ್ಲಿದ್ದ ಅತ್ಯಾಚಾರ ಆರೋಪಿಯನ್ನು ಕೊಂದ ಸಹಆರೋಪಿ!

ಶಿಮ್ಲಾ(ಹಿಮಾಚಲ ಪ್ರದೇಶ), ಜುಲೈ 19: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಆಕೆಯನ್ನು ಕೊಲೆ ಮಾಡಿದ್ದ ಆರು ಆರೋಪಿಗಳಲ್ಲಿ ಒಬ್ಬ ಆರೋಪಿ ಜೈಲಿನಲ್ಲೇ ಹತ್ಯೆಗೀಡಾದ ಘಟನೆ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ನಡೆದಿದೆ. ಈತನನ್ನು ಮತ್ತೊಬ್ಬ ಆರೋಪಿಯೇ ಹತ್ಯೆಗೈದಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

ಜುಲೈ 4 ರಂದು, ಶಿಮ್ಲಾದ ಕೊಟೈ ನಲ್ಲಿ, ಶಾಲೆಯಿಂದ ವಾಪಾಸಾಗುತ್ತಿದ್ದ ಅಪ್ರಾಪ್ತೆಯೊಬ್ಬಳನ್ನು ಅಪಹರಿಸಿ, ಅತ್ಯಾಚಾರ ಎಸಗಲಾಗಿತ್ತು. ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ ಆರು ಜನ ಕಾಮುಕರು, ಆ ಬಾಲಕಿಯನ್ನು ಕೊಂದು ಪರಾರಿಯಾಗಿದ್ದರು.

Shimla minor girl rape and murder case: a culprit dies in jail!

ಘಟನೆ ನಡೆದ ಎರಡು ದಿನದ ನಂತರ ಬಾಲಕಿಯ ಶವವನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆಯೇ ಕಾಮುಕರನ್ನು ಶೀಘ್ರವೇ ಬಂಧಿಸುವಂತೆ ಸಾರ್ವಜನಿಕರಿಂದ ಒತ್ತಡ ಸೃಷ್ಟಿಯಾಗಿತ್ತು. ಹಿಮಾಚಲ ಪ್ರದೇಶ ಸರ್ಕಾರವೂ ಅಪರಾಧಿಗಳ ಕುರಿತು ಸುಳಿವು ನೀಡಿದವರಿಗೆ ಒಂದು ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿತ್ತು. ನಂತರ ಆರು ಜನ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು.

ಆದರೂ ಘಟನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಇನ್ನು ಮುಂದೆ ಇಂಥ ಘಟನೆ ನಡೆಯದಂತೆ ಮುಂಜಾಗೃತೆ ವಹಿಸುವ ಸಲುವಾಗಿ ಶಿಮ್ಲಾ ಸರ್ಕಾರ ಈ ಘಟನೆಯ ವಿಚಾರಣೆಯನ್ನು ಕೇಂದ್ರ ತನಿಖಾ ದಳಕ್ಕೆ ವಹಿಸಿತ್ತು. ಇದೀಗ ಒಬ್ಬ ಆರೋಪಿ ಜಅಯಲಿನಲ್ಲಿಯೇ ಹತ್ಯೆಯಾಗಿರುವುದು ಪ್ರಕರಣದ ಕುರಿತು ಮತ್ತಷ್ಟು ಕುತೂಹಲ ಮೂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+