ನಟಿಯಿಂದ ನಿರ್ಮಾಪಕನ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ
ಮುಂಬೈ, ಮಾರ್ಚ್ 24 : 'ಬಾಬಿ ಜಿ ಘರ್ ಪರ್ ಹೇ' ಧಾರಾವಾಹಿಯ ನಟಿಯೊಬ್ಬರು ನಿರ್ಮಾಪಕರೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ದೂರು ದಾಖಲಿಸಿದ್ದಾರೆ.
ಹಿಂದೆ ಟಿವಿ ಶೋ ನಿರ್ಮಾಪಕ ಸಂಜಯ್ ಕೊಹ್ಲಿ ಎನ್ನುವರ ವಿರುದ್ಧ 'ಬಾಬಿ ಜಿ ಘರ್ ಪರ್ ಹೇ' ಧಾರಾವಾಹಿಯ ನಟಿ ಶಿಲ್ಪ ಶಿಂಧೆ ಎನ್ನುವರು ಮುಂಬೈನ ವಾಲ್ವಿ ನೈಹಿಗಾಂವ್ ಪೊಲೀಸ್ ಠಾಣೆಯಲ್ಲಿ ಗುರುವಾರ ದೂರು ನೀಡಿದ್ದಾರೆ.

ಹಿಂದೆಯೇ ಶೋ ಇಂದ ಹೊರ ಬಂದಿದ್ದೆ. ಆದರೂ ನನ್ನ ಮೇಲೆ ನಿರ್ಮಾಪಕ ಮಾನಸಿಕ ಹಿಂಸೆ ನೀಡುತ್ತಿದ್ದ. ಹಾಗೂ ಬಾಬಿ ಜಿ ಘರ್ ಪರ್ ಹೇ ಧಾರಾವಾಹಿಯಲ್ಲಿ ನಟನೆಯನ್ನು ಮುಂದುವರೆಸುವಂತೆ ಒತ್ತಾಯಿಸಿ ಅದರಿಂದ ಲಾಭವನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದ.
Mumbai: Shilpa Shinde files FIR in Waliv against Bhabhi Ji Ghar Par Hai's producer Sanjay Kohli, accusing him of sexual harassment(file pic) pic.twitter.com/R8TWtzJ8jM
— ANI (@ANI_news) March 24, 2017
ಅಲ್ಲದೆ ನನ್ನನ್ನು ಒಮ್ಮೆ ಮುಟ್ಟಿ ಅನುಚಿವಾಗಿ ವರ್ತಿಸಿದ್ದಾನೆ. ಇದಕ್ಕೆ ನಾನು ತೀವ್ರವಾಗಿ ವಿರೋಧಿಸಿದ್ದೆ. ಈ ವಿಷಯವನ್ನು ಎಲ್ಲೂ ಹೇಳದಂತೆ ಬೆದರಿಕೆ ಹಾಕಿದ್ದ ಎಂದು ಎಂದು ಶಿಲ್ಪ ಶಿಂಧೆ ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.












Click it and Unblock the Notifications