ಚುನಾವಣೆ ಅಖಾಡಕ್ಕಿಳಿದ ಜೆಎನ್ ಯು ವಿದ್ಯಾರ್ಥಿ ಸಂಘಟನೆ ನಾಯಕಿ

ನವದೆಹಲಿ, ಮಾರ್ಚ್ 13: ಜೆಎನ್ ಯು ವಿದ್ಯಾರ್ಥಿ ಸಂಘಟನೆಯ ನಾಯಕಿ, ಮೋದಿ ಸರ್ಕಾರದ ವಿರೋಧಿ ಶೆಹ್ಲಾ ರಶೀದ್ ಶೋರಾ ಅವರು ಸಕ್ರಿಯ ರಾಜಕೀಯ ಎಂಟ್ರಿ ಕೊಡುತ್ತಿರುವುದಾಗಿ ಘೋಷಿಸಿದ್ದಾರೆ. ಮಾಜಿ ಐಎಎಸ್ ಅಧಿಕಾರಿ ಶಾಹ್ ಫೈಝಲ್ ಅವರು ಸ್ಥಾಪಿಸಲಿರುವ ಹೊಸ ಪಕ್ಷದ ಮೂಲಕ ಶೆಹ್ಲಾ ಅವರು ಲೋಕಸಭೆ ಚುನಾವಣೆ ಸ್ಪರ್ಧಿಸಲಿದ್ದಾರೆ ಎಂದು ದಿಪ್ರಿಂಟ್ ವರದಿ ಮಾಡಿದೆ.

ಪ್ರತಿಭಾವಂತ ಕಾಶ್ಮೀರಿ ಫೈಝಲ್ ಅವರ ಪಕ್ಷದಲ್ಲಿ ಶೆಹ್ಲಾ ಅವರಿಗೆ ಪ್ರಮುಖ ಸ್ಥಾನ ಸಿಗಲಿದೆ. ಕಳೆದ ಕೆಲವು ತಿಂಗಳುಗಳಿಂದ ಪಕ್ಷದ ರೂಪುರೇಷೆ ಬಗ್ಗೆ ಭಾರಿ ಚರ್ಚೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

Shehla Rashid to join ex-IAS officer Shah Faesal’s party, contest state or Lok Sabha polls

31 ವರ್ಷ ವಯಸ್ಸಿನ ರಶೀದ್ ಅವರು ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಮಾಜಿ ಉಪಾಧ್ಯಕ್ಷೆಯಾಗಿದ್ದಾರೆ. ಸದ್ಯ ತಂತ್ರಜ್ಞಾನ ಹಾಗೂ ಸಿಟಿಜನ್ -ಸ್ಟೇಟ್ ಸಂಬಂಧ ಕುರಿತ ಪಠ್ಯ ವಿಷಯದ ಮೇಲೆ ಪಿಎಚ್ ಡಿ ಮಾಡುತ್ತಿದ್ದಾರೆ.

2016ರ ಫೆಬ್ರವರಿಯಲ್ಲಿ ಸಂಸತ್ ದಾಳಿ ರೂವಾರಿ ಅಫ್ಜಲ್ ಗುರು ನೇಣು ಶಿಕ್ಷೆ ವಿರೋಧಿಸಿ ಜೆಎನ್ ಯು ವಿದ್ಯಾರ್ಥಿಗಳಾದ ಕನ್ಹಯ್ಯ ಕುಮಾರ್, ಉಮರ್ ಖಾಲಿದ್, ಅನಿರ್ಬಾನ್ ಭಟ್ಟಾಚಾರ್ಯ ಅವರು ಬಂಧನರಾದ ಬಳಿಕ ರಶೀದ್ ಬೆಳಕಿಗೆ ಬಂದರು. ದೇಶದ್ರೋಹಿದ ಆರೋಪದ ಮೇಲೆ ಮೂವರು ಬಂಧನಕ್ಕೊಳಗಾದಾಗ ವಿದ್ಯಾರ್ಥಿಗಳನ್ನು ಒಗ್ಗೂಡಿಸಿ, ಪ್ರತಿಭಟನೆಯನ್ನು ಶೆಹ್ಲಾ ಮುಂದುವರೆಸಿದ್ದರು.

ಕೇಂದ್ರ ಸರ್ಕಾರದ ವಿರುದ್ಧವಾಗಿ ಪ್ರತಿಭಟನಾ ರೂಪವಾಗಿ ಐಎಎಸ್ ಹುದ್ದೆ ತೊರೆದಿದ್ದ ಷಾ ಫೈಝಲ್ ಅವರು ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದಾಗಿ ಜನವರಿ ತಿಂಗಳಿನಲ್ಲಿ ಎನ್ ಡಿ ಟಿವಿಗೆ ನೀಡಿದ ಸಂದರ್ಶನದಲ್ಲಿ ಘೋಷಿಸಿದ್ದರು. 2010ನೇ ಸಾಲಿನ ಐಎಎಸ್ ಅಧಿಕಾರಿ.

ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಸೇವಾ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದ ಮೊದಲ ಕಾಶ್ಮೀರಿ ಫೈಝಲ್ ಅವರು ನ್ಯಾಷನಲ್ ಕಾನ್ಫರೆನ್ಸ್ ಸೇರಿ ಬಾರಾಮುಲ್ಲಾ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಸುದ್ದಿಯಿತ್ತು. ಆದರೆ, ಈಗ ಮತ್ತದೇ ಚಿಂತನೆ, ಸಿದ್ಧಾಂತಗಳನ್ನು ಸಾಕಾರಗೊಳಿಸಲು ಹೊಸ ಪಕ್ಷ ಸ್ಥಾಪಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+