ಲೈಂಗಿಕ ಕಿರುಕುಳದ ವಿಡಿಯೋ ವೈರಲ್: ತಮಿಳುನಾಡಿನಲ್ಲಿ 7 ವಿದ್ಯಾರ್ಥಿಗಳು ಸಸ್ಪೆಂಡ್

ಚೆನ್ನೈ, ನವೆಂಬರ್ 09: ಲೈಂಗಿಕ ಕಿರುಕುಳವನ್ನು ಒಳಗೊಂಡಿರುವ (Ragging) ಕುಚೇಷ್ಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು ಏಳು ಹಿರಿಯ ವೈದ್ಯಕೀಯ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿದೆ.

ಲೈಂಗಿಕ ಕಿರುಕುಳ ಸಹಿತವಾಗಿ ಮಾಡಿದ ಕುಚೇಷ್ಟೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಈ ಸಂಬಂಧ ಪೊಲೀಸರು ಸಮಗ್ರ ತನಿಖೆಗೆ ಕೋರಿದ್ದು, ವಿಚಾರಣೆಯನ್ನು ಮುಂದುವರಿಸಲಾಗಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದ 1.52 ನಿಮಿಷದ ವಿಡಿಯೋದಲ್ಲಿ ಹುಲ್ಲುಹಾಸಿನ ಮೇಲೆ ಪುಶ್-ಅಪ್‌ಗಳನ್ನು ಮಾಡುತ್ತಿರುವ ಪುರುಷರು ಇದ್ದಾರೆ. ಇದರ ಮಧ್ಯೆ ಬ್ರೀಫ್‌ಗಳಲ್ಲಿ ಏನೆಂದು ಗುರುತಿಸಲಾಗದ ದೃಶ್ಯಗಳನ್ನು ತೋರಿಸುತ್ತದೆ. ಕೆಲವು ವಿದ್ಯಾರ್ಥಿಗಳು ಕೊಚ್ಚೆ ಗುಂಡಿಯಲ್ಲಿ ಈಜಲು ಪ್ರಯತ್ನಿಸುತ್ತಿದ್ದಾರೆ. ದೃಶ್ಯಗಳಲ್ಲಿ ಇಬ್ಬರು ಪುರುಷರು ಅನುಚಿತವಾಗಿ ತಬ್ಬಿಕೊಳ್ಳುವುದನ್ನು ತೋರಿಸುತ್ತವೆ, ಜೊತೆಗೆ ಒಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಯ ಜನನಾಂಗಗಳಿಗೆ ಹೊಡೆಯುವುದು ಮತ್ತು ಸ್ಪರ್ಶಿಸುವುದು ವಿಡಿಯೋದಲ್ಲಿ ಕಂಡು ಬಂದಿದೆ.

Sex Harassment case: 7 Tamil Nadu Medical Students Suspended After Video Viral

ಕಿರಿಯ ವಿದ್ಯಾರ್ಥಿಗಳಿಗೆ ಕೀಟಲೆ:

ಯುವಕರ ಗುಂಪು ಒಂದು ತುದಿಯಿಂದ ಮತ್ತೊಂದು ತುದಿಗೆ ಧಾವಿಸುವುದು ವಿಡಿಯೋದಲ್ಲಿ ಕಂಡುಬರುತ್ತದೆ. ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳನ್ನು ಈ ರೀತಿ ಮಾಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಕುರಿತು ಸ್ಪಷ್ಟನೆ ನೀಡಿರುವ ಸಿಎಂಸಿ ವೆಲ್ಲೂರ್ ಅಧಿಕಾರಿಗಳು ಅನಾಮಧೇಯ ದೂರಿನ ಆಧಾರದ ಮೇಲೆ ಸಮಿತಿಯು ತನಿಖೆ ನಡೆಸಿದೆ ಎಂದು ಹೇಳಿದರು. "ನಾವು Ragging ಆರೋಪದ ಮೇಲೆ ಏಳು ಹಿರಿಯ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿದ್ದೇವೆ. ಅಲ್ಲದೇ ಸಂಪೂರ್ಣ ತನಿಖೆಯನ್ನು ಕೋರಿ ಪೊಲೀಸರಿಗೆ ದೂರು ನೀಡಿದ್ದೇವೆ," ಎಂದು ಸಿಎಂಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿದ್ಯಾಸಂಸ್ಥೆಯಿಂದ ದೂರನ್ನು ಪಡೆದಿರುವುದನ್ನು ದೃಢಪಡಿಸಿದ ವೆಲ್ಲೂರಿನ ಪೊಲೀಸ್ ವರಿಷ್ಠಾಧಿಕಾರಿ ಎಸ್ ರಾಜೇಶ್ ಕಣ್ಣನ್, "ವಿಡಿಯೋ ಅಸಲಿಯೇ ಅಥವಾ ನಕಲಿಯೇ ಎಂದು ನಾವು ಪರಿಶೀಲಿಸುತ್ತಿದ್ದೇವೆ. ಕಾಲೇಜು ನಮಗೆ ಸ್ವೀಕರಿಸಿದ ಅನಾಮಧೇಯ ದೂರನ್ನು ನಮ್ಮೊಂದಿಗೆ ಹಂಚಿಕೊಂಡಿದೆ," ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+