ಭಾರತಕ್ಕೆ ಅತಿ ಕಡಿಮೆ ಬೆಲೆಗೆ ಕೊರೊನಾ ಲಸಿಕೆ ನೀಡಲಿದೆ ಸೆರಂ ಇನ್‌ಸ್ಟಿಟ್ಯೂಟ್

ನವದೆಹಲಿ, ಡಿಸೆಂಬರ್ 08: ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾವು ಅತಿ ಕಡಿಮೆ ಬೆಲೆಗೆ ಭಾರತಕ್ಕೆ ಕೊರೊನಾ ಲಸಿಕೆ ಕೊವಿಸೀಲ್ಡ್‌ನ್ನು ಒದಗಿಸಲು ಮುಂದಾಗಿದೆ.

ಒಂದು ಡೋಸ್‌ಗೆ 250 ರೂ.ನಂತೆ ಕೇಂದ್ರ ಸರ್ಕಾರಕ್ಕೆ ಲಸಿಕೆಯನ್ನು ನೀಡಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಆಸ್ಟ್ರಾ ಜೆನೆಕಾ ಲಸಿಕೆಯನ್ನು ತುರ್ತು ಬಳಕೆಗೆ ಅನುಮತಿ ನೀಡುವಂತೆ ಸೋಮವಾರ ಸೆರಂ ಇನ್‌ಸ್ಟಿಟ್ಯೂಟ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು, ಇದರ ಬೆನ್ನಲ್ಲೇ ಅತಿ ಕಡಿಮೆ ಬೆಲೆಗೆ ಲಸಿಕೆಯನ್ನೂ ಕೂಡ ನೀಡಲಿದೆ ಎನ್ನುವ ಮಾಹಿತಿ ದೊರೆತಿದೆ.

Serum Institute Likely To Supply Covid Vaccine At Rs 250 Per Dose

ಭಾರತದ ಖಾಸಗಿ ಮಾರುಕಟ್ಟೆಯಲ್ಲಿ ಕೊರೊನಾ ಲಸಿಕೆ 1 ಸಾವಿರ ರೂಗೆ ಲಭ್ಯವಾಗಲಿದೆ ಎಂದು ಆದರ್ ಪೂನಾವಾಲಾ ತಿಳಿಸಿದ್ದರು. ಆದರೆ ಸರ್ಕಾರು ದೊಡ್ಡ ಪ್ರಮಾಣದಲ್ಲಿ ಲಸಿಕೆಯನ್ನು ತರಿಸಿಕೊಳ್ಳುವುದರಿಂದ ಸರ್ಕಾರಕ್ಕೆ 250ರೂಗೆ ಕೊರೊನಾ ಲಸಿಕೆಯನ್ನು ನೀಡಲಿದೆ.

ಬೇರೆ ದೇಶಗಳಿಗೆ ಕೊರೊನಾ ಲಸಿಕೆಯನ್ನು ನೀಡುವ ಮೊದಲು ಭಾರತಕ್ಕೆ ನೀಡಬೇಕು ಎನ್ನುವುದು ಸೆರಂ ಇನ್‌ಸ್ಟಿಟ್ಯೂಟ್‌ನ ಧ್ಯೇಯವಾಗಿದೆ.

ಈಗಾಗಲೇ ಭಾರತದಲ್ಲಿ 97 ಲಕ್ಷ ಕೊರೊನಾ ಸೋಂಕಿತರಿದ್ದಾರೆ. ಅಮೆರಿಕ ಬಳಿಕ ಅತಿ ಹೆಚ್ಚು ಕೊರೊನಾ ಸೋಂಕಿತರಿರುವ ರಾಷ್ಟ್ರ ಭಾರತವಾಗಿದೆ. ಫೈಜರ್ ಹಾಗೂ ಆಸ್ಟ್ರಾಜೆನೆಕಾವು ತುರ್ತು ಬಳಕೆಗೆ ಅನುಮತಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದವು.

ವೈದ್ಯಕೀಯ ಅಗತ್ಯತೆಯನ್ನು ಗಮನದಲ್ಲಿಟ್ಟುಕೊಂಡು ಅನುಮತಿ ನೀಡುವಂತೆ ಪುಣೆಯ ಎಸ್‌ಐಐ, ಡಿಜಿಸಿಐಗೆ ವಿನಂತಿಸಿದೆ. ಹೀಗಾಗಿ ಕೆಲವೇ ವಾರದಲ್ಲಿ ಕೊವಿಶೀಲ್ಡ್ ಕೊರೊನಾ ಲಸಿಕೆಗೆ ಅನುಮತಿ ಸಿಗುತ್ತದೆಯೇ ಎಂದು ಕಾದುನೋಡಬೇಕಿದೆ.

ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಇಡೀ ವಿಶ್ವದಲ್ಲೇ ಅತಿದೊಡ್ಡ ಔಷಧ ತಯಾರಕ ಕಂಪನಿಯಾಗಿದೆ. ಕೊರೊನಾ ಲಸಿಕೆಯನ್ನು ತುರ್ತು ಸಂದರ್ಭಗಳಲ್ಲಿ ನೀಡಲು ಅನುಮತಿ ನೀಡಬೇಕು ಎಂದು ಮನವಿ ಸಲ್ಲಿಸಿದೆ.

ಸೆರಂ ಇನ್‌ಸ್ಟಿಟ್ಯೂಟ್, ಆಸ್ಟ್ರಾ ಜೆನೆಕಾ, ಆಕ್ಸ್‌ಫರ್ಡ್ ಸೇರಿ ಕೊರೊನಾ ಲಸಿಕೆಯನ್ನು ಸಿದ್ಧಪಡಿಸುತ್ತಿದೆ. ಇದೀಗ ಸರ್ಕಾರವು ಅನುಮತಿ ನೀಡಿದರೆ ದೇಶದಲ್ಲೇ ತುರ್ತು ಸಂದರ್ಭದಲ್ಲಿ ಬಳಕೆಗೆ ಅವಕಾಶ ಪಡೆದ ಎರಡನೇ ಕೊರೊನಾ ಲಸಿಕೆ ಇದಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+