ತೆಲಂಗಾಣ, ಛತ್ತೀಸಗಢ ಪೊಲೀಸರ ಜಂಟಿ ಕಾರ್ಯಾಚರಣೆ: 10 ನಕ್ಸಲರು ಬಲಿ
ಬಿಜಾಪುರ್(ಛತ್ತೀಸ್ ಗಢ), ಮಾರ್ಚ್ 02: ತೆಲಂಗಾಣ ಮತ್ತು ಛತ್ತೀಸ್ ಗಢ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಒಟ್ಟು 10 ನಕ್ಸಲರು ಬಲಿಯಾಗಿದ್ದಾರೆ.
ಛತ್ತೀಸ್ ಗಢ ರಾಜ್ಯದ ಬಿಜಾಪುರ ಜಿಲ್ಲೆಯ ಪುಜಾರಿ ಕಾಂಕೆರ್ ಎಂಬಲ್ಲಿ ಕಾರ್ಯಾಚರಣೆ ನಡೆದಿದೆ. ಕಾರ್ಯಾಚರಣೆಯ ಸಂದರ್ಭದಲ್ಲಿ ಓರ್ವ ಪೊಲೀಸ್ ಸಿಬ್ಬಂದಿಗೂ ಗಾಯವಾಗಿದೆ. ಘಟನೆ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಫೆಬ್ರವರಿ 26 ನಡೆದ ಕಾರ್ಯಾಚರಣೆಯಲ್ಲಿ ಇಬ್ಬರು ನಕ್ಸಲ್ ಮಹಿಳೆಯರನ್ನು ಎನ್ ಕೌಂಟರ್ ಮೂಲಕ ಬಲಿಹಾಕಲಾಗಿತ್ತು.












Click it and Unblock the Notifications