Tamannaah Bhatia: ನಟಿ ತಮನ್ನಾ ಭಾಟಿಯಾ ಬಗ್ಗೆ ಓದೋದು ಬೇಡವಂತೆ ಮಕ್ಕಳು!
ಬೆಂಗಳೂರು, ಜೂನ್. 28: ಪಠ್ಯ ಪುಸ್ತಕಗಳಲ್ಲಿ ಸಾಧಕರು, ಗಣ್ಯರು ಮತ್ತು ಸಿನಿಮಾ ನಟ ನಟಿಯರ ಬಗ್ಗೆ ಪಾಠಗಳಿರುವುದು ಸಾಮಾನ್ಯ. ಅಂತಹದ್ದೆ ಒಂದು ಪಾಠ ಸದ್ಯಕ್ಕೆ ಸಖತ್ ವಿವಾದಕ್ಕೆ ಒಳಗಾಗಿದೆ. ವಿದ್ಯಾರ್ಥಿಗಳ ಪೋಷಕರು ಶಾಲೆಯ ವಿರುದ್ಧ ಗರಂ ಆಗಿದ್ದಾರೆ. ಹಾಗಾದರೆ, ಆ ನಟಿ ಯಾರು ಅನ್ನೊ ಕುತೂಹಲ ನಿಮಗಿದ್ದರೆ.. ಇಲ್ಲಿದೆ ಮಾಹಿತಿ.
ಸಿಂಧಿ ಸಮುದಾಯದ ಪ್ರಸಿದ್ಧ ವ್ಯಕ್ತಿಗಳನ್ನು ಪರಿಚಯಿಸುವ ಸಲುವಾಗಿ ಅಧ್ಯಯನದ ಭಾಗವಾಗಿ ಹೆಬ್ಬಾಳದ ಖಾಸಗಿ ಶಾಲೆಯೊಂದು ನಟಿ ತಮನ್ನಾ ಭಾಟಿಯಾ ಅವರ ಪಾಠವನ್ನು ಏಳನೇ ತರಗತಿಯ ವಿದ್ಯಾರ್ಥಿಗಳಿಗೆ ಪರಿಚಯಿಸಿದೆ. ಇದು ವಿವಾದಕ್ಕೆ ಕಾರಣವಾಗಿದೆ. ಈ ಕ್ರಮಕ್ಕೆ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಪೋಷಕರೇ ವಿರೋಧ ವ್ಯಕ್ತಪಡಿಸಿದ್ದಾರೆ.

ಏಳನೆ ತರಗತಿಗೆ ನಟಿ ತಮನ್ನಾ ಭಾಟಿಯಾ ಅವರ ಪಾಠ ಪರಿಚಯ ಮಾಡಿದೆ. ಇದನ್ನು ವಿರೋಧಿಸಿ ಶಾಲೆಯ ಆಡಳಿತದ ಗಮನಕ್ಕೆ ತಂದಾಗ, ಅದು ಸರಿಯಾಗಿ ಪ್ರತಿಕ್ರಿಯೆ ನೀಡಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ. ಹೀಗಾಗಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮತ್ತು ಕರ್ನಾಟಕದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಅಸೋಸಿಯೇಟೆಡ್ ಮ್ಯಾನೇಜ್‌ಮೆಂಟ್‌ಗಳಿಗೆ (ಕೆಎಎಂಎಸ್) ದೂರು ನೀಡಿದ್ದಾರೆ.
ರಣವೀರ್ ಸಿಂಗ್ ಓಕೆ... ತಮನ್ನಾ ನಾಟ್ ಒಕೆ!
ತಮನ್ನಾ ಭಾಟಿಯಾ ತೆಲುಗು, ತಮಿಳು ಮತ್ತು ಹಿಂದಿ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಹಲವು ಹಿಟ್ ಹಾಡುಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಕನ್ನಡದ ಸೂಪರ್ ಹಿಟ್ ಕೆಜಿಎಫ್ ಚಿತ್ರದಲ್ಲಿ 'ಜೋಕೆ.. ನಾನು ಬಳ್ಳಿಯ ಮಿಂಚು' ಹಾಡಿನಲ್ಲಿ ಮಿಂಚು ಹರಿಸಿದ್ದಾರೆ. ದಕ್ಷಿಣ ಭಾರತದ ಸಿನಿಮಾಗಳಲ್ಲಿ ಮಿಂಚಿದ್ದ ಅವರು ಬಾಲಿವುಡ್‌ನಲ್ಲಿಯೂ ಕಮಾಲ್ ಮಾಡುತ್ತಿದ್ದಾರೆ. ಈಗ ಇವರ ಜೊತೆಗೆ ಬಾಲಿವುಡ್ ನಟ ರಣವೀರ್ ಸಿಂಗ್ ಅವರಂತಹ ಸಿಂಧಿ ಸಮುದಾಯದ ಪ್ರಮುಖ ಮತ್ತು ಯಶಸ್ವಿ ವ್ಯಕ್ತಿಗಳ ಪಾಠವನ್ನು ಹೊಂದಿದೆ.

ಆದರೆ, ನಟ ರಣವೀರ್ ಸಿಂಗ್ ಅವರ ಪಾಠಕ್ಕೆ ವಿರೋಧ ವ್ಯಕ್ತಪಡಿಸಿರುವ ಪೋಷಕರು, ತಮನ್ನಾ ಭಾಟಿಯಾ ಅವರ ಪಾಠಕ್ಕೆ ವಿರೋಧ ವ್ಯಕ್ಪಡಿಸಿದ್ದಾರೆ. ಪಠ್ಯಕ್ರಮದಲ್ಲಿ ಆಕೆಯ ಬಗ್ಗೆ ಪಾಠವನ್ನು ಪರಿಚಯಿಸುವ ಅಗತ್ಯವಿಲ್ಲ ರಂದು ವಿದ್ಯಾರ್ಥಿಗಳ ಪೋಷಕರು ಶಾಲೆಯ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಸಿಂಧಿ ಸಮುದಾಯದ ಬಗ್ಗೆ ಪಾಠ
ಹೆಬ್ಬಾಳದ ಶಾಲೆಯು ಸಿಂಧಿಗಳ ಕುರಿತು 7 ನೇ ತರಗತಿಯ ಪಠ್ಯಪುಸ್ತಕವನ್ನು ಹೊಂದಿದೆ. ಅದರಲ್ಲಿ ಒಂದು ಅಧ್ಯಾಯವು "ವಿಭಜನೆಯ ನಂತರದ ಜೀವನ: ಸಿಂಧ್‌ನಲ್ಲಿ ವಲಸೆ, ಸಮುದಾಯ ಮತ್ತು ಕಲಹ, 1947 ರಿಂದ 1962" ಎಂದಿದೆ. ಇದರಲ್ಲಿ ತಮ್ಮ ಸಮುದಾಯ ಮತ್ತು ಸಂಸ್ಕೃತಿಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲು ಅವಕಾಶ ಮಾಡಿಕೊಟ್ಟಿದೆ. ಇದರಲ್ಲೇ ತಮನ್ನಾ ಭಾಟಿಯಾ ಬಗ್ಗೆ ಹೇಳಲಾಗಿದೆ.
ಮಕ್ಕಳಿಗೆ ಮತ್ತೊಂದು ಸಂಸ್ಕೃತಿಯ ಬಗ್ಗೆ ಪರಿಚಯಿಸಲು ನಮಗೆ ಯಾವುದೇ ವಿರೋಧವಿಲ್ಲ. ಆದರೆ ನಮ್ಮ ಆಕ್ಷೇಪಣೆಯು 7 ನೇ ತರಗತಿ ವಿದ್ಯಾರ್ಥಿಗಳಿಗೆ ಸೂಕ್ತವಲ್ಲ. ಸಮುದಾಯದಲ್ಲಿನ ಹಿರಿಯ ನಟರ ಪಾಠಗಳ ಬಗ್ಗೆ ನಮಗೆ ಯಾವುದೇ ಸಮಸ್ಯೆಗಳಿಲ್ಲ, ಆದರೆ ಮಕ್ಕಳು ಈ ನಟಿಯ ಬಗ್ಗೆ ಇಂಟರ್ನೆಟ್‌ನಲ್ಲಿ ಹುಡುಕಿದರೆ, ಅವರು ಅನುಚಿತ ವಿಷಯಗಳು ಸಿಗುತ್ತವೆ. ನಟಿಯ ಪಾಠದ ಬಗ್ಗೆ ಆಕ್ಷೇಪಣೆ ಸಲ್ಲಿಸಿದರೆ ತಮ್ಮ ವರ್ಗಾವಣೆ ಪ್ರಮಾಣಪತ್ರ ನೀಡುವುದಾಗಿ ಆಡಳಿತ ಮಂಡಳಿ ಬೆದರಿಕೆ ಹಾಕುತ್ತಿದೆ" ಎಂದು ಪೋಷಕರು ಆರೋಪಿಸಿದ್ದಾರೆ.












Click it and Unblock the Notifications