School Holiday: ಮಾರ್ಚ್-ಏಪ್ರಿಲ್ ತಿಂಗಳ ಶಾಲಾ ರಜೆ ದಿನಗಳು
School Holiday: ಈ ವರ್ಷ ಅಂದರೆ 2025ರ ಆರಂಭದಿಂದಲೂ ದೇಶದ ಹಲವೆಡೆ ಶಾಲಾ-ಕಾಲೇಜುಗಳಿಗೆ ಸಾಲು ರಜೆಗಳನ್ನೇ ನೀಡಲಾಗಿದೆ. ಹಾಗೆಯೇ ಇದೀಗ ಮಾರ್ಚ್-ಹಾಗೂ ಏಪ್ರಿಲ್ ತಿಂಗಳಲ್ಲಿ ಈ ಭಾಗದ ಶಾಲೆಗಳಿಗೆ ಸಾಲು ರಜೆಗಳನ್ನೇ ನೀಡಲಾಗಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ರಜೆ ಹಬ್ಬದೂಟ ಸಿಕ್ಕಂತಾಗಲಿದೆ. ಹಾಗಾದರೆ ಕಾರಣ ಏನು ಹಾಗೂ ಎಲ್ಲೆಲ್ಲಿ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಈಗಾಗಲೇ ಜನವರಿ ಆರಂಭದಿಂದಲೂ ಒಂದಲ್ಲ ಒಂದು ಕಾರಣಕ್ಕೆ ಶಾಲಾ-ಕಾಲೇಜುಗಳಿಗೆ ಸಾಲು ರಜೆ ಘೋಷಣೆ ಮಾಡಲಾಗಿದೆ. ಉತ್ತರ ಭಾರತದ ಹಲವೆಡೆ ಭಾರೀ ಚಳಿ ಹಿನ್ನೆಲೆ ತಿಂಗಳುಗಟ್ಟಲೇ ರಜೆ ನೀಡಲಾಗಿತ್ತು. ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭ ಮೇಳದ ವೇಳೆಯೂ ಭಕ್ತರು ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದ್ದ ಕಾರಣ ಶಾಲೆಗಳನ್ನು ಮುಚ್ಚಲಾಗಿತ್ತು. ಬದಲಿಗೆ ವಿದ್ಯಾರ್ಥಿಗಳಿಗೆ ಮನೆಯಿಂದಲೇ ಆನ್‌ಲೈನ್ ಕ್ಲಾಸ್‌ಗಳನ್ನು ಮಾಡಲಾಗಿದ್ದು, ಶಿಕ್ಷಕರು ಮಾತ್ರ ಶಾಲೆಗೆ ಹಾಜರಾಗಬೇಕು ಎಂದು ಸೂಚಿಸಲಾಗಿತ್ತು.

ಕರ್ನಾಟಕದಲ್ಲಿ ಸರ್ಕಾರಿ ರಜೆಗಳನ್ನು ಹೊತರು ಪಡಿಸಿ ಪ್ರತಿಭಟನೆ, ವಿಶೇಷ ಕಾರ್ಯಕ್ರಮಗಳ ವೇಳೆಯಷ್ಟೇ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಇನ್ನೂ ಇದೀಗ ಹಲವು ರಾಜ್ಯಗಳಲ್ಲಿ ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ಸರಣಿ ರಜೆಗಳೇ ಇರಲಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ರಜೆಗಳ ಹಬ್ಬದೂಟ ಬಡಿಸಿದಂತೆ ಆಗಲಿದೆ. ಪುಣೆಯಲ್ಲಿ ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಸರಣಿ ರಜೆಗಳೇ ಇವೆ.
ಮಾರ್ಚ್ ರಜೆಗಳು: ಪುಣೆಯಲ್ಲಿ ಮಾರ್ಚ್‌ನಲ್ಲಿ ಹಲವು ಸಾರ್ವಜನಿಕ ರಜಾದಿನಗಳು ಬರಲಿವೆ. ಮಾರ್ಚ್ 13ರಂದು ಹೋಳಿ ಹಬ್ಬ, ಮಾರ್ಚ್ 14ರಂದು ಧುಲಿ ವಂದನಾ ಇರಲಿದ್ದು, ಈ ದಿನಗಳಂದು ಈ ಭಾಗದ ಶಾಲೆಗಳಿಗೆ ರಜೆ ಇರಲಿದೆ. ಮರಾಠಿ ಕ್ಯಾಲೆಂಡರ್ ಪ್ರಕಾರ, ಮಾರ್ಚ್ 17ರಂದು ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ, ಮಾರ್ಚ್ 30 ಗುಡಿ ಪಾಡ್ವಾ ಮತ್ತು ಮಾರ್ಚ್ 31 ರಂಜಾನ್ ಹಿನ್ನೆಲೆ ಶಲಾಗಳಿಗೆ ರಜೆ ಇರಲಿದೆ. ಇನ್ನು ಇಲ್ಲಿ ಹಲವು ಶಾಲೆಗಳಿಗೆ ಶನಿವಾರ ಕೂಡ ರಜೆಗಳು ಇರಲಿವೆ ಎನ್ನುವ ಮಾಹಿತಿ ಇದೆ.
ಏಪ್ರಿಲ್ ರಜೆಗಳು: ಮತ್ತೊಂದೆಡೆ ಏಪ್ರಿಲ್ 6ರಂದು ರಾಮನವಮಿ, ಏಪ್ರಿಲ್ 10ರಂದು ಮಹಾವೀರ ಜಯಂತಿ ಮತ್ತು ಏಪ್ರಿಲ್ 18ರಂದು ಗುಡ್ ಫ್ರೈಡೇ ಸೇರಿ ಸರಣಿ ರಜೆಗಳು ಇರಲಿವೆ. ಇದನ್ನು ಹೊರತು ಪಡಿಸಿದರೆ ಭಾನುವಾರದಂದು ಶಾಲೆಗಳಿಗೆ ರಜೆ ಇರಲಿದೆ.












Click it and Unblock the Notifications