School-Bank Holiday: ಫೆಬ್ರವರಿ 21 ರಜಾದಿನವೇ! ಹೌದು-ಅಲ್ಲಾ? ಇಲ್ಲಿದೆ ಮಾಹಿತಿ

ಬೆಂಗಳೂರು, ಫೆಬ್ರವರಿ 21: ನಿತ್ಯವು ಒಂದಲ್ಲಾ ಒಂದು ಕಡೆಗಳಲ್ಲಿ ಬ್ಯಾಂಕ್, ಶಾಲಾ-ಕಾಲೇಜುಗಳು ಸಾರ್ವತ್ರಿಕ ರಜೆ ಪಡೆದಿರುತ್ತವೆ. ರಜೆ ಬಂತೆಂದರೆ ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ಇನ್ನಿಲ್ಲದ ಖುಷಿ, ಹಬ್ಬ, ವಿಶೇಷ ಸಂದರ್ಭಗಳಲ್ಲಿ ರಜೆ ನೀಡಲಾಗುತ್ತದೆ. ಅದರಂತೆ ಇಂದು ಫೆಬ್ರವರಿ 21ರಂದು ಶುಕ್ರವಾರ ಎಲ್ಲಿ, ಯಾವ ಭಾಗದಲ್ಲಿ ಶಾಲೆಗಳು ರಜೆ ಇವೆಯಾ? ಇಲ್ಲವೋ ಎಂಬುದನ್ನು ತಿಳಿಯಿರಿ.

ಫೆಬ್ರವರಿ 21 ಶುಕ್ರವಾರ ಇದು ರಜಾದಿನವೇ ಅಥವಾ ಇಲ್ಲವೇ ಎಂದು ಹಲವರು ಆಶ್ಚರ್ಯ ಪಡುತ್ತಾರೆ. ನೀವು ಯಾವ ರಾಜ್ಯದಲ್ಲಿ ಇದ್ದೀರಿ ಎಂಬುದರ ಮೇಲೆ ಬ್ಯಾಂಕ್ ಆಗಲಿ, ಶಾಲಾ-ಕಾಲೇಜುಗಳ ರಜೆ ನೀರ್ಣವಾಗಿರುತ್ತದೆ. ಏಕೆಂದರೆ ಆಯಾ ರಾಜ್ಯಗಳಲ್ಲಿನ ದಿನಾಚರಣೆಗಳು, ಚುನಾವಣೆ ಬೇರೆ ಬೇರೆ ದಿನ ಇರುತ್ತವೆ. ಹೀಗಾಗಿ ಒಂದು ರಾಜ್ಯದಲ್ಲಿ ರಜೆ ಘೋಷಣೆ ಆದರೆ ಮತ್ತೊಂದು ಪ್ರದೇಶಗಳಿಗೆ ಅದು ಅನ್ವಯವಾಗುವುದಿಲ್ಲ

School College Holiday and Bank Holiday Update February 21st Holiday or Not Check Here

ಈ ಕೆಳಗಿನ ರಾಜ್ಯಗಳಲ್ಲಿ ವಿವಿಧ ಕಾರಣಗಳಿಗಾಗಿ ರಜಾದಿನ ಘೋಷಿಸಿದ್ದರೆ, ಇನ್ನು ಕೆಲವು ರಾಜ್ಯಗಳು ತಮ್ಮ ನಿಯಮಿತ ವೇಳಾಪಟ್ಟಿಯೇ ಮುಂದುವರಿಯುತ್ತದೆ. ಇಂದು ಯಾವೆಲ್ಲ ರಾಜ್ಯಗಳಲ್ಲಿ ರಜೆ ಇದೆ, ಇಲ್ಲ ಎಂಬ ವಿವರ ಇಲ್ಲಿದೆ.

ರಾಜ್ಯವಾರು ರಜಾದಿನಗಳ ವಿವರ

ಜಮ್ಮು ಮತ್ತು ಕಾಶ್ಮೀರ

ಕಣಿವೆ ರಾಜ್ಯದಲ್ಲಿ ಸದ್ಯ ಚಳಿಗಾಲದ ರಜಾದಿನಗಳು ಚಾಲ್ತಿಯಲ್ಲಿವೆ. ಈ ರಜೆಗಳೇ ಇಲ್ಲಿನ ಶಾಲಾ-ಕಾಲೇಜುಗಳಿಗೆ ಫೆಬ್ರವರಿ 26 ರವರೆಗೆ ಮುಂದುವರಿಯಲಿವೆ. ಚಳಿಗಾಲದ ತೀವ್ರತೆ ಹೆಚ್ಚಿರುವ ಕಾರಣ, ವಿದ್ಯಾರ್ಥಿಗಳು ಮತ್ತು ಬ್ಯಾಂಕ್‌ ಇನ್ನಿತರ ಉದ್ಯೋಗಿಗ ಹಿತ ರಕ್ಷಣೆಯಿಂದ ಚಳಿ ಸಮಸ್ಯೆಗೆ ಪರಿಹಾರಾರ್ಥವಾಗಿ ಸರ್ಕಾರ ರಜೆ ಘೋಷಿಸಿದೆ.

ಮೇಘಾಲಯ ರಾಜ್ಯದಲ್ಲಿ ರಜೆ ಇದೆಯಾ!

ಇಂದು ಶುಕ್ರವಾರ ಮೇಘಾಲಯದಲ್ಲಿ ಚುನಾವಣಾ ನಡೆಯುತ್ತಿದೆ. ಹೀಗಾಗಿ ರಾಜ್ಯದಲ್ಲಿ ಶಾಲೆಗಳಿಗೆ, ಬ್ಯಾಂಕ್‌ಗಳಿಗೆ ರಜೆ ದಿನವಾಗಿದೆ. ಮೇಘಾಲಯ ಸರ್ಕಾರವು ಪೂರ್ವ ಖಾಸಿ ಬೆಟ್ಟಗಳು, ಪಶ್ಚಿಮ ಖಾಸಿ ಮತ್ತು ನೈಋತ್ಯ ಖಾಸಿ ಬೆಟ್ಟಗಳು, ಪೂರ್ವ ಹಾಗೂ ಪಶ್ಚಿಮ ಖಾಸಿ ಬೆಟ್ಟಗಳು, ರಿ ಭೋಯ್, ಪೂರ್ವ ಜೈನ್ತಿಯಾ ಬೆಟ್ಟಗಳು ಮತ್ತು ಪಶ್ಚಿಮ ಜೈನ್ತಿಯಾ ಬೆಟ್ಟಗಳು ಜಿಲ್ಲೆಗಳ ಜನರಿಗೆ ಸಾರ್ವತ್ರಿಕ ರಜೆ ಘೋಷಿಸಿದೆ.

ವಾರಣಾಸಿ ರಜೆ ಅಪ್ಡೇಟ್ಸ್

ಸದ್ಯ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಮೇಳ ನಡೆಯುತ್ತಿದೆ. ಈ ಕಾರಣದಿಂದಾಗಿ ವಾರಣಾಸಿಯಲ್ಲಿನ ಶಾಲೆಗಳು ಫೆಬ್ರವರಿ 22 ರವರೆಗೆ ಮುಚ್ಚಟ್ಟಿವೆ. ನಂತರ ಎಂದಿನಂತೆ ಆರಂಭವಾಗಲಿವೆ. ವಿದ್ಯಾರ್ಥಿಗಳನ್ನು ಸುರಕ್ಷಿತತೆ ಕಾರಣದಿಂದ ರಜೆ ನೀಡಿ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಇಲ್ಲಿನ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದರೆ.

ಆಂಧ್ರಪ್ರದೇಶ ಸರ್ಕಾರ ರಜೆ ಘೋಷಣೆಯಾಗಿಲ್ಲ

ಆಂಧ್ರಪ್ರದೇಶ ರಾಜ್ಯ ಸರ್ಕಾರವು ಇಂದು ಫೆಬ್ರವರಿ 21 ರಂದು ಶಾಲೆಗಳಿಗೆ, ಬ್ಯಾಂಕ್‌ಗಳಿಗೆ ಯಾವುದೇ ರಜೆ ಘೋಷಿಸಿಲ್ಲ. ಎಂದಿನಂತೆ ಕಾರ್ಯ ನಿರ್ವಹಣೆ ಇರಲಿದೆ. ಇನ್ನು ಪಂಜಾಬ್‌ನಲ್ಲಿ ಇಂದು ಗುರು ರವಿದಾಸ್ ಜಯಂತಿ ಆಚರಣೆ ಇದ್ದರೂ ಸಹಿತ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ವಿದ್ಯಾರ್ಥಿಗಳು ಫುಲ್ ಖುಷಿಯಲ್ಲಿದ್ದಾರೆ.

ಹರಿಯಾಣ ರಾಜ್ಯದಲ್ಲೂ ಯಾವುದೇ ರಜೆ ದಿನಗಳು ಇಲ್ಲವೆಂದು ತಿಳಿದು ಬಂದಿದೆ. ಕರ್ನಾಟಕದಲ್ಲಿ ಇಂದು ರಜಾ ದಿನ ಅಲ್ಲದ್ದರಿಂದ ಎಂದಿನಂತೆ ಶಾಲಾ ಕಾಲೇಜುಗಳು ನಡೆಯಲಿವೆ. ಇವತ್ತಿನ ಈ ರಜೆಗಳು ಎಲ್ಲಾ ಸಂಸ್ಥೆಗಳು, ಖಾಸಗಿ ಶಾಲೆಗಳು, ಕಾಲೇಜುಗಳು ಮತ್ತು ಕಚೇರಿಗಳಿಗೆ ಒಂದೆ ತೆರನಾಗಿ ಅನ್ವಯಿಸುವುದಿಲ್ಲ ಎಂಬುದು ಗೊತ್ತಿರಲಿ.

ಪ್ರತಿ ದಿನ ಅಂದು ಶಾಲೆಗಳು ರಜೆಯೇ ಎಂಬುದು ತಿಳಿಯಲು ಆಡಳಿತ ಮಂಡಳಿ ಜೊತೆಗೆ ಸಂಪರ್ಕದಲ್ಲಿರಬೇಕು. ಹಣಕಾಸು ವಿಚಾರ ಸಂಬಂಧ ಬ್ಯಾಂಕ್ ರಜೆಗಳ ದಿನಗಳ ಕುರಿತು ಮೊದಲೇ ತಿಳಿಯಬೇಕು. ರಜೆ ವಿಚಾರದಲ್ಲಿ ಗೊಂದಲ ಉಂಟಾಗದಂತೆ ಎಚ್ಚರ ವಹಿಸಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+