ಪ್ರಧಾನಿ ಮೋದಿ ಮನವಿ ಮೇರೆಗೆ ಸೌದಿ ಜೈಲಿಂದ 850 ಕೈದಿಗಳ ಬಿಡುಗಡೆ
Recommended Video

ಸೌದಿಯ ರಾಜ ಮೊಹ್ಮದ್ ಬಿನ್ ಸಲ್ಮಾನ್ ಅವರು ತಮ್ಮ ದೇಶದ ಜೈಲುಗಳಲ್ಲಿರುವ ಭಾರತದ 850 ಕೈದಿಗಳ ಬಿಡುಗಡೆಗೆ ಆದೇಶ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಮನವಿಯನ್ನು ಪುರಸ್ಕರಿಸಿ, ಈ ಆದೇಶವನ್ನು ನೀಡಿದ್ದಾರೆ.
ಮತ್ತೊಂದು ದೊಡ್ಡ ಬೇಡಿಕೆ ಪೂರೈಸಲಾಗಿದೆ! ಪ್ರಧಾನಿ ನರೇಂದ್ರ ಮೋದಿ ಅವರು ಮನವಿ ಮಾಡಿದ ಮೇರೆಗೆ ಸೌದಿ ಅರೇಬಿಯಾದ ರಾಜ ಸೌದಿಯ ಜೈಲುಗಳಲ್ಲಿ ಇರುವ 850 ಭಾರತೀಯರ ಬಿಡುಗಡೆ ಆದೇಶಿಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಭಾರತೀಯ ಕೈದಿಗಳ ಬಿಡುಗಡೆ ಜತೆಗೆ ಭಾರತದಿಂದ ಹಜ್ ಯಾತ್ರೆಗೆ ತೆರುಳುವ ಕೋಟ್ ಅನ್ನು ಎರಡು ಲಕ್ಶಕ್ಕೆ ಏರಿಸುವುದಾಗಿ ಕೂಡ ತಿಳಿಸಿದ್ದಾರೆ.

ಪುಲ್ವಾಮಾದಲ್ಲಿ ಉಗ್ರ ದಾಳಿ ನಡೆದ ನಂತರದ ಈ ಭೇಟಿ ಬಹಳ ಮಹತ್ವ ಪಡೆದುಕೊಂಡಿದೆ. ಪಾಕಿಸ್ತಾನವನ್ನು ಜಾಗತಿಕ ಮಟ್ಟದಲ್ಲಿ ಏಕಾಂಗಿಯಾಗಿ ಮಾಡಬೇಕು ಎಂಬುದು ಭಾರತದ ಉದ್ದೇಶವಾಗಿದೆ. ಈ ಮಧ್ಯೆ ಸೌದಿ ರಾಜ ಪಾಕಿಸ್ತಾನಕ್ಕೆ ಭೇಟಿ ನೀಡಿ, ಇಪ್ಪತ್ತು ನಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡುವುದಾಗಿ ಘೋಷಿಸಿದ್ದಾರೆ. ಜತೆಗೆ ಎರಡು ಸಾವಿರದ ನೂರು ಪಾಕಿಸ್ತಾನಿ ಕೈದಿಗಳ ಬಿಡುಗಡೆಗೆ ಆದೇಶಿಸಿದ್ದಾರೆ.
ಭಾರತದ ಪ್ರವಾಸ ಮುಗಿಸಿದ ನಂತರ ಸೌದಿ ರಾಜ ಮೊಹ್ಮದ್ ಬಿನ್ ಸಲ್ಮಾನ್ ಚೀನಾಗೆ ತೆರಳುವ ನಿರೀಕ್ಷೆ ಇದೆ.












Click it and Unblock the Notifications