ರಕ್ಷಣಾ ಇಲಾಖೆಯ ಮುಂದಿನ ಕಾರ್ಯದರ್ಶಿ ಸಂಜಯ್ ಮಿತ್ರಾ
1982ರ ಬ್ಯಾಚ್ ನ ಪಶ್ಚಿಮ ಬಂಗಾಳದ ಕೇಡರ್ ನ ಅಧಿಕಾರಿಯಾದ ಸಂಜಯ್ ಮಿತ್ರಾ ಅವರನ್ನು ಇತ್ತೀಚೆಗೆ ಕೇಂದ್ರ ಗೃಹ ಇಲಾಖೆಯ ವಿಶೇಷ ಅಧಿಕಾರಿಯನ್ನಾಗಿ ವರ್ಗಾಯಿಸಲಾಗಿತ್ತು. ಇದೀಗ, ಅವರನ್ನು ರಕ್ಷಣಾ ಇಲಾಖೆಯ ಕಾರ್ಯದರ್ಶಿಯ ಹೊಣೆ ನೀಡಲಾಗಿದೆ.
ನವದೆಹಲಿ, ಮೇ 11: ಕೇಂದ್ರ ರಸ್ತೆ ಮತ್ತು ಸಾರಿಗೆ ಇಲಾಖೆಯ ಕಾರ್ಯದರ್ಶಿಯಾಗಿದ್ದ ಸಂಜಯ್ ಮಿತ್ರಾ ಅವರನ್ನು ರಕ್ಷಣಾ ಇಲಾಖೆಯ ನೂತನ ಕಾರ್ಯದರ್ಶಿಯನ್ನಾಗಿ ಕೇಂದ್ರ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.
1982ರ ಬ್ಯಾಚ್ ನ ಪಶ್ಚಿಮ ಬಂಗಾಳದ ಕೇಡರ್ ನ ಅಧಿಕಾರಿಯಾದ ಸಂಜಯ್ ಮಿತ್ರಾ ಅವರನ್ನು ಇತ್ತೀಚೆಗೆ ಕೇಂದ್ರ ಗೃಹ ಇಲಾಖೆಯ ವಿಶೇಷ ಅಧಿಕಾರಿಯನ್ನಾಗಿ ವರ್ಗಾಯಿಸಲಾಗಿತ್ತು. ಇದೀಗ, ಅವರನ್ನು ರಕ್ಷಣಾ ಇಲಾಖೆಯ ಕಾರ್ಯದರ್ಶಿಯ ಹೊಣೆ ನೀಡಲಾಗಿದೆ.

ಸದ್ಯಕ್ಕೆ ರಕ್ಷಣಾ ಇಲಾಖೆಯ ಕಾರ್ಯದರ್ಶಿ ಹುದ್ದೆಯಲ್ಲಿರುವ ಜಿ. ಮೋಹನ್ ಕುಮಾರ್ ಅವರು ಮೇ 24ರಂದು ನಿವೃತ್ತಿ ಹೊಂದಲಿದ್ದು, ಅಂದೇ ಸಂಜಯ್ ಮಿತ್ರಾ ಅಧಿಕಾರ ಸ್ವೀಕಾರ ಮಾಡಲಿದ್ದಾರೆ.
ಸಂಜಯ್ ಮಿತ್ರಾ ಅವರ ನೇಮಕದ ಜತೆಯಲ್ಲೇ, 1984ರ ಬ್ಯಾಚ್ ನ ಜಮ್ಮು-ಕಾಶ್ಮೀರ ಕೇಡರ್ ನ ಐಎಎಸ್ ಅಧಿಕಾರಿಯಾದ ಬ್ರಿಜ್ ರಾಜ್ ಶರ್ಮಾ ಅವರನ್ನು ಕೇಂದ್ರ ಗೃಹ ಸಚಿವಾಲಯದ ಹೆಚ್ಚುವರಿ ಕಾರ್ಯರ್ಶಿಯನ್ನಾಗಿ ನೇಮಿಸಲಾಗಿದೆ.
ಬುಧವಾರ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಈ ಎರಡೂ ನೇಮಕಾತಿಗಳಿಗೆ ಒಪ್ಪಿಗೆ ನೀಡಲಾಗಿದೆ.

Click it and Unblock the Notifications