ಭಾರತದ ಮೊದಲ ಮುಸ್ಲಿಂ ಫೈಟರ್ ಪೈಲಟ್ ಆಗಲಿದ್ದಾರೆ ಸಾನಿಯಾ ಮಿರ್ಜಾ
ಉಕ್ನೋ, ಡಿಸೆಂಬರ್ 23: ಜ್ಞಾನ ಯಾರೊಬ್ಬರ ಸ್ವತ್ತಲ್ಲ ಎಂಬುದಕ್ಕೆ ಶ್ರಮಪಟ್ಟು ಓದಿ ಮುಂದೆ ಮಕ್ಕಳು ಎಲ್ಲರ ಕಣ್ಣಿಗೆ ಕಾಣುತ್ತಾರೆ. ಅಂತವರ ಸಾಲಿನಲ್ಲಿ ನಿಲ್ಲುವ ತಾಜಾ ಉದಾಹರಣೆ ಉತ್ತರಪ್ರದೇಶದ ಮಿರ್ಜಾಪುರದ ಸಾಧಾರಣ ಮುಸ್ಲಿಂ ಕುಟುಂಬದ ಮಗಳು ಸಾನಿಯಾ ಮಿರ್ಜಾ.
ಮಿರ್ಜಾಪುರದ ಮುಸ್ಲಿಂ ಟಿವಿ ಮೆಕ್ಯಾನಿಕ್‌ರೊಬ್ಬರ ಮಗಳಾದ ಸಾನಿಯಾ ಮಿರ್ಜಾ ಎಂಬಾಕೆ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ (ಎನ್‌ಡಿಎ) ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಈ ಮೂಲಕ ಅವರು ಭಾರತದ ಮೊದಲ ಮುಸ್ಲಿಂ ಪೈಟರ್ ಪೈಲಟ್ ಆಗಲಿದ್ದಾರೆ.
ಮಿರ್ಜಾಪುರ ದೇಹತ್ ಕೊಟ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಜಸೋವರ್ ಗ್ರಾಮದ ಸಾನಿಯಾ ಮಿರ್ಜಾ ಅವರು ದೇಶದ ಮೊದಲ ಮಹಿಳಾ ಫೈಟರ್ ಪೈಲಟ್ ಅವ್ನಿ ಚತುರ್ವೇದಿ ಅವರಂತೆ ಯುದ್ಧ ವಿಮಾನದ ಪೈಲಟ್ ಆಗುವ ಹಂಬಲ ಹೊಂದಿದ್ದಾರೆ. ತಮ್ಮ ಯಶಸ್ಸಿನ ಬಗ್ಗೆ ಸಾನಿಯಾ ಅವರು, ಹಿಂದಿ ಮಾಧ್ಯಮದ ವಿದ್ಯಾರ್ಥಿಗಳು ಸಹ ದೃಢಸಂಕಲ್ಪ ಮಾಡಿದರೆ ಯಶಸ್ಸು ಗಳಿಸಬಹುದು ಎಂದು ಹಿಂದಿ ಮಾಧ್ಯಮ ಶಾಲೆಯಲ್ಲಿ ಓದಿದ ಅವರು ಹೇಳಿದ್ದಾರೆ. ಡಿಸೆಂಬರ್ 27 ರಂದು ಅವರು ಪುಣೆಯಲ್ಲಿ ಎನ್‌ಡಿಎ ಖಡಕ್ವಾಸ್ಲಾಗೆ ಸೇರಲಿದ್ದಾರೆ.

ಸಾನಿಯಾ ಅವರ ಈ ಸಾಧನೆಗೆ ಅವರ ಪೋಷಕರು ಹಾಗೂ ಗ್ರಾಮಸ್ಥರು ಆಕೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ದೇಶದ ಮೊದಲ ಫೈಟರ್ ಪೈಲಟ್ ಅವ್ನಿ ಚತುರ್ವೇದಿಯನ್ನು ಸಾನಿಯಾ ಮಿರ್ಜಾ ತನ್ನ ರೋಲ್ ಮಾಡೆಲ್ ಎಂದು ಪರಿಗಣಿಸಿದ್ದಾರೆ. ಮೊದಲಿನಿಂದಲೂ ಅವರು ಅವ್ನಿಆ ಅವರಂತೆ ಇರಬೇಕೆಂದು ಬಯಸಿದ್ದಳು ಎಂದು ಸಾನಿಯಾ ತಂದೆ ಶಾಹಿದ್ ಅಲಿ ನಗುತ್ತಾ ಹೇಳಿದರು.
ಸಾನಿಯಾ 10ನೇ ತರಗತಿವರೆಗಿನ ಶಾಲಾ ಶಿಕ್ಷಣವನ್ನು ತನ್ನ ಹಳ್ಳಿಯಲ್ಲಿಯೇ ಮುಗಿಸಿದ್ದಾರೆ. ಅವರು ಪಂಡಿತ್ ಚಿಂತಾಮಣಿ ದುಬೆ ಇಂಟರ್ ಕಾಲೇಜಿನಲ್ಲಿ 1ರಿಂದ 10ನೇ ತರಗತಿಯವರೆಗೆ ಓದಿದ್ದಾರೆ. ಬಳಿಕ ನಗರದ ಗುರುನಾನಕ್ ಬಾಲಕಿಯರ ಇಂಟರ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾರೆ. ಬಳಿಕ 12ನೇ ತರಗತಿಯಲ್ಲಿ ಉತ್ತರ ಪ್ರದೇಶ (ಯುಪಿ) ಬೋರ್ಡ್‌ನಲ್ಲಿ ಜಿಲ್ಲಾ ಟಾಪರ್ ಆಗಿದ್ದರು. ಅಲ್ಲಿಂದಲೇ ಅವರು ಎನ್‌ಡಿಎಗೆ ತನ್ನ ತಯಾರಿಯನ್ನು ಪ್ರಾರಂಭಿಸಿದರು.
ಸಾನಿಯಾ ತಾಯಿ ತಬಸ್ಸುಮ್ ಮಿರ್ಜಾ, ನಮ್ಮ ಮಗಳು ನಮಗೆ ಮತ್ತು ಇಡೀ ಗ್ರಾಮಕ್ಕೆ ಹೆಮ್ಮೆ ತಂದಿದ್ದಾಳೆ. ಹಳ್ಳಿಯ ಪ್ರತಿಯೊಬ್ಬ ಹೆಣ್ಣುಮಕ್ಕಳು ಅವರ ಕನಸುಗಳನ್ನು ಅನುಸರಿಸಲು ಅವಳು ಪ್ರೇರೇಣೆಯಾಗಿದ್ದಾಳೆ ಎಂದು ಹೇಳಿದ್ದಾರೆ. ಸಾನಿಯಾ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ 2022 ಪರೀಕ್ಷೆಯಲ್ಲಿ ಫೈಟರ್ ಪೈಲಟ್‌ನಲ್ಲಿ ಮಹಿಳೆಯರಿಗೆ ಕೇವಲ ಎರಡು ಸೀಟುಗಳನ್ನು ಮಾತ್ರ ಮೀಸಲಿಡಲಾಗಿದೆ. ನಾನು ಮೊದಲ ಪ್ರಯತ್ನದಲ್ಲಿ ಸೀಟು ಹಿಡಿಯಲು ಸಾಧ್ಯವಾಗಲಿಲ್ಲ. ಆದರೆ ನನ್ನ ಎರಡನೇ ಪ್ರಯತ್ನದಲ್ಲಿ ನಾನು ಸ್ಥಾನವನ್ನು ಕಂಡುಕೊಂಡಿದ್ದೇನೆ ಎಂದು ಅವರು ಹೇಳಿದರು.

ನ್ಯಾಷನಲ್ ಡಿಫೆನ್ಸ್ ಅಕಾಡೆಮಿ 2022ರ ಪರೀಕ್ಷೆಯಲ್ಲಿ ಪುರುಷ ಮತ್ತು ಮಹಿಳೆ ಸೇರಿದಂತೆ ಒಟ್ಟು 400 ಸೀಟುಗಳಿದ್ದವು. ಇದರಲ್ಲಿ ಮಹಿಳೆಯರಿಗೆ 19 ಸೀಟುಗಳಿದ್ದು, ಫೈಟರ್ ಪೈಲಟ್‌ಗಳಿಗೆ ಎರಡು ಸೀಟುಗಳನ್ನು ಮೀಸಲಿಡಲಾಗಿತ್ತು. ಈ ಎರಡು ಸ್ಥಾನಗಳಲ್ಲಿ ಸಾನಿಯಾ ತಮ್ಮ ಪ್ರತಿಭೆಯ ಬಲದ ಮೇಲೆ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications