ಸಿಎಂ ವಿಜಯ್ ವಿರುದ್ಧ ದಾಖಲಿಸಿದ್ದ ವಿಚ್ಛೇದನ ಅರ್ಜಿ ವಾಪಸ್ ಪಡೆದ ಪತ್ನಿ ಸಂಗೀತ
Sangeetha Vijay: ತಮಿಳುನಾಡು ಸಿಎಂ ಹಾಗೂ ಪತಿ ಸಿ.ಜೋಸೆಫ್ ವಿಜಯ್ ವಿರುದ್ಧ ದಾಖಲಿಸಿದ್ದ ವಿಚ್ಛೇದನ ಪ್ರಕರಣ ಅರ್ಜಿಯನ್ನು ಪತ್ನಿ ಸಂಗೀತ ಅವರು ಇಂದು (ಶುಕ್ರವಾರ, ಆಗಸ್ಟ್ 7) ವಾಪಸ್ ಪಡೆದಿದ್ದಾರೆ.
ಅರ್ಜಿಯನ್ನು ಹಿಂಪಡೆದ ಹಿನ್ನೆಲೆಯಲ್ಲಿ ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯವು ವಿಜಯ್ ವಿರುದ್ಧದ ವಿಚ್ಛೇದನ ಪ್ರಕರಣವನ್ನು ಇತ್ಯರ್ಥಗೊಳಿಸಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್ ಮುಂದೆ ಹಾಜರಾದ ಸಂಗೀತಾ ತಾವು ಡಿವೋರ್ಸ್ ಅರ್ಜಿಯನ್ನು ಹಿಂಪಡೆಯಲು ಬಯಸುತ್ತಿರುವುದಾಗಿ ತಿಳಿಸಿದರು.

ಚರ್ಚೆಗೆ ಗ್ರಾಸವಾಗಿದ್ದ ನಟಿಯೊಂದಿಗಿನ ನಂಟಿನ ಸುದ್ದಿ
ವಿಜಯ್ ಹಾಗೂ ಸಂಗೀತಾ ಆಗಸ್ಟ್ 25, 1999ರಂದು ಅಂತರ್ ಧರ್ಮೀಯ ವಿವಾಹಾಗಿದ್ದು, ವಿಜಯ್ ಕ್ರಿಶ್ಚಿಯನ್ ಆದರೆ, ಸಂಗೀತಾ ಹಿಂಧೂ ಧರ್ಮಕ್ಕೆ ಸೇರಿದವರು. ಆಗಸ್ಟ್ 26, 2000ದಲ್ಲಿ ಮೊದಲ ಮಗ ಹುಟ್ಟಿದರೆ, 2005ಲ್ಲಿ ಮಗಳಿಗೆ ಪೋಷಕರಾಗಿದ್ದರು. ವಿಜಯ್ ಟಿವಿಕೆ ಸಂಘಟಿಸಿ, ತಮಿಳುನಾಡು ಮುಖ್ಯಮಂತ್ರಿಯಾದ ನಂತರ ಇವರಿಬ್ಬರ ವೈವಾಹಿಕ ವಿವಾದ ದೊಡ್ಡ ಸುದ್ದಿಯಾಗಿದ್ದು, ನಟಿಯೊಂದಿಗೆ ವಿಜಯ್ ನಂಟಿನ ಬಗ್ಗೆ ಚರ್ಚೆಗೆ ಗ್ರಾಸವಾಗಿತ್ತು.
ಫೆಬ್ರವರಿ 2ರಂದು ಡಿವೋರ್ಸಿಗೆ ಅರ್ಜಿ ಸಲ್ಲಿಸಿದ್ದ ಸಂಗೀತಾ
ಫೆಬ್ರವರಿ 2ರಂದು ಡಿವೋರ್ಸಿಗೆ ಅರ್ಜಿ ಸಲ್ಲಿಸಿದ್ದ ಪತ್ನಿ ಸಂಗೀತಾ ಅವರು, ಪತಿ ವಿಜಯ್‌ಗೆ ನಟಿಯೊಂದಿಗಿನ ನಂಟಿನ ಬಗ್ಗೆ ಪ್ರಸ್ತಾಪ ಮಾಡಿದ್ದರು. ತಮಿಳುನಾಡು ಚುನಾವಣೆ ವೇಳೆಯಲ್ಲಿ ಸಂಗೀತಾ ಡಿವೋರ್ಸಿಗೆ ಅರ್ಜಿ ಸಲ್ಲಿಸಿದ್ದು ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಹಲವು ವಿಚಾರಣೆಗೆ ಇವರಿಬ್ಬರೂ ಗೈರಾಗಿದ್ದು, ಮುಕ್ತ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಕೋರ್ಟ್ ಆದೇಶ ನೀಡಿತ್ತು.
ಅನುಮಾನ ವ್ಯಕ್ತಪಡಿಸಿದ್ದ ಜನ
ವಿಜಯ್ ಅವರು ತಮಿಳುನಾಡು ಚುನಾವಣೆಯಲ್ಲಿ ಗೆದ್ದು, ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ವೇಳೆ ನಟಿ ತ್ರಿಷಾ ಆಗಮಿಸಿ ಮಿಂಚಿದರೇ ಹೊರತು, ಪತ್ನಿ ಸಂಗಿತ ಆಗಲಿ, ಮಕ್ಕಳಾಗಲಿ ಬಂದಿರಿಲಿಲ್ಲ. ನಂತರ ವಿಜಯ್ ಕರ್ನಾಟಕದ ಕೊಲ್ಲೂರಿಗೆ ಆಗಮಿಸಿ ದಾಂಪತ್ಯ ಜೀವನ ಸರಿ ಹೋಗುವಂತೆ ಪ್ರಾರ್ಥಿಸಿದ್ದಾರೆಂಬ ಗುಲ್ಲೂ ಹರಡಿತ್ತು. ಆದರೆ ಮತ್ತೆ ತ್ರಿಷಾ ಜೊತೆ ಹುಟ್ಟು ಹಬ್ಬ ಆಚರಿಸಿಕೊಂಡ ಫೋಟೋ ವೈರಲ್ ಆದಾಗ, ಈ ಜೋಡಿ ಒಂದಾಗೋದು ಅನುಮಾನ ಅಂತಲೇ ಜನರು ಮಾತನಾಡಿಕೊಂಡಿದ್ದರು.
ಆದರೆ ವಿಜಯ್ ಹಾಗೂ ಸಂಗೀತಾ ಒಂದಾಗುತ್ತಾರಾ ಎಂಬ ಪ್ರಶ್ನೆಗೆ ಆಪ್ತರು ಇಲ್ಲವೆಂದೇ ಹೇಳುತ್ತಾರೆ. ಬಹಳ ವರ್ಷಗಳಿಂದ ಈ ಜೋಡಿ ಬೇರೆ ಬೇರೆ ಇದ್ದು, ಚುನಾವಣೆ ಸಮಯದಲ್ಲಿ ವಿಚ್ಛದನಕ್ಕೆ ಅರ್ಜಿ ಹಾಕಿದ್ದು, ಇದೀಗ ಹಿಂಪಡೆದಿದ್ದಾರೆ. ಮುಂದೆಯೂ ಅದೇ ರೀತಿ ಬೇರೆಯೇ ಆಗಿರುತ್ತಾರೆ ಬಿಟ್ಟರೆ, ಒಂದಾಗುವುದಿಲ್ಲವೆಂದೇ ಹೇಳಲಾಗುತ್ತಿದೆ.
ಅಪ್ಪನ ಸಾಧನೆಯನ್ನ ಕೊಂಡಾಡಿದ ಮಗ
ಕೆಲವು ದಿನಗಳ ಹಿಂದೆಯಷ್ಟೇ ಮಗ ಜೇಸನ್ ಸಂಜಯ್ ತನ್ನ ತಂದೆ ತಮಿಳುನಾಡು ರಾಜಕೀಯದಲ್ಲಿ ಮಾಡಿದ ಸಾಧೆಯೆನ್ನು ಕೊಂಡಾಡಿದ್ದರು. ಅಪ್ಪನ ಯಶಸ್ಸು ನಮಗೆ ಹೆಮ್ಮೆ ತಂದಿರುವುದಾಗಿಯೂ ಹೇಳಿದ್ದರು. ಇದರಿಂದ ಕುಟುಂಬದ ಹೊಣೆಯೂ ಹೆಚ್ಚಾಗಿದೆ ಎಂದಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು. ಆಗಿಂದಲೇ ವಿಜಯ್ ಸಂಗೀತಾ ಮತ್ತೆ ಒಂದಾಗಬಹುದು, ಕುಟುಂಬದಲ್ಲಿ ಎಲ್ಲವೂ ಸರಿಯಾಗಿದೆ ಎಂಬ ಊಹಾಪೋಹಗಳು ಹರಿದಾಡಿದ್ದವು. ಅದಕ್ಕೆ ಪುಷ್ಠಿ ನೀಡುವಂತೆ ಇಂದು ಸಂಗೀತಾ ತಮ್ಮ ಅರ್ಜಿಯನ್ನು ಹಿಂಪಡೆದಿದ್ದಾರೆ. ಇದಕ್ಕೆ ವಿಜಯ್ ಅವರ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಹೇಳುವುದಾದರೆ ಪತ್ನಿ ಸಂಗೀತ ಅವರೇ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯನ್ನು ವಾಪಸ್ ಪಡೆದುಕೊಂಡಿರುವುದರಿಂದ ಈ ಕಾನೂನು ಹೋರಾಟಕ್ಕೆ ತೆರೆ ಬಿದ್ದಂತಾಗಿದೆ. ವಿಜಯ್ ಹಾಗೂ ಸಂಗೀತ ಅವರ ಸಂಸಾರ ಚೆನ್ನಾಗಿರಲಿ, ಇನ್ಮುಂದೆಯಾದರೂ ಯಾವುದೇ ಬಿರುಕಿಗೆ ದಾರಿ ಮಾಡಿಕೊಡದೆ ಸಂತಸದಿಂದ ಜೀವನ ಸಾಗಿಸಲಿ ಎನ್ನುವುದೇ ಅಭಿಮಾನಿಗಳ ಆಶಯವಾಗಿದೆ.


Click it and Unblock the Notifications
