India & Russia: ಪ್ರಧಾನಿ ಮೋದಿ ನೋಡಿ ಕಲಿಯಿರಿ ಅಂತಿದ್ದಾರೆ ಪುಟಿನ್!
ರಷ್ಯಾ ಮತ್ತು ಭಾರತದ ನಡುವೆ ಶತ ಶತಮಾನಗಳ ಸಂಬಂಧ ಇದೆ. ಅದ್ರಲ್ಲೂ ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಭಾರತ & ರಷ್ಯಾ ಸಂಬಂಧ ಇನ್ನಷ್ಟು ಗಟ್ಟಿಯಾಗಿದೆ. ಹೀಗಾಗಿ ಯಾರೇ ಈ ಸ್ನೇಹ ಮುರಿಯಲು ಯತ್ನಿಸಿದರೂ ಸಾಧ್ಯವಾಗುತ್ತಿಲ್ಲ. ಇದೀಗ ಖುದ್ದು ರಷ್ಯಾ ಅಧ್ಯಕ್ಷರು ಭಾರತ ಪ್ರಧಾನಿ ಬಗ್ಗೆ ಹೊಗಳಿದ್ದಾರೆ. ಹಾಗೇ ಭಾರತದ ಆ ಒಂದು ಯೋಜನೆ ಬಗ್ಗೆ ಗ್ರೇಟ್ ಅಂತಿದ್ದಾರೆ.
ಭಾರತ ಆರ್ಥಿಕವಾಗಿ ಬೆಳೆಯುತ್ತಿದ್ದು, ಭಾರತದ ಜೊತೆಗೆ ಜಗತ್ತಿನ ಹಲವು ದೇಶಗಳಿಗೆ ಈಗ ಸ್ನೇಹ ಬೇಕು. ಅಮೆರಿಕ, ಯುರೋಪ್ ರಾಷ್ಟ್ರಗಳಿಂದ ಹಿಡಿದು ಚೀನಾ & ರಷ್ಯಾ ತನಕವು ಭಾರತದ ಜೊತೆಗೆ ಸ್ನೇಹ ಬಯಸುತ್ತಿರುವ ದೇಶಗಳು ಹಲವು. ಪರಿಸ್ಥಿತಿ ಹೀಗಿದ್ದಾಗ ರಷ್ಯಾ ಮತ್ತು ಭಾರತದ ಸಂಬಂಧ ತುಂಬಾ ಗಟ್ಟಿಯಾಗಿದೆ. ಅದರಲ್ಲೂ ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಘೋಷಿಸಿದ ನಂತರ ಭಾರತ ರಷ್ಯಾಗೆ ಪರೋಕ್ಷ ಬಲ ನೀಡಿದೆ. ಅದರಲ್ಲೂ ರಷ್ಯಾ ಉತ್ಪಾದಿಸುವ ಕಚ್ಚಾ ತೈಲವನ್ನು ತರಿಸಿಕೊಂಡು, ಯುರೋಪ್ ದೇಶಗಳಿಗೆ ರಫ್ತು ಮಾಡಿ ರಷ್ಯಾಗೆ ಸಹಾಯ ಮಾಡಿದೆ. ಹೀಗಿದ್ದಾಗ ಖುದ್ದು ರಷ್ಯಾ ಅಧ್ಯಕ್ಷ ಪುಟಿನ್ ಈಗ ಪ್ರಧಾನಿ ಮೋದಿ ಅವರನ್ನ ಹೊಗಳಿದ್ದಾರೆ.

ಮೋದಿ ಗ್ರೇಟ್ ಅಂದ್ರು ಪುಟಿನ್!
ಭಾರತದ ಆರ್ಥಿಕತೆ ಟಾಪ್-5 ಪಟ್ಟಿಯಲ್ಲಿದೆ. ಈ ಪೈಕಿ ಮೇಕ್ ಇನ್ ಇಂಡಿಯಾ ಪರಿಕಲ್ಪನೆ ಕುರಿತು ಜಗತ್ತೇ ಮಾತಾಡುತ್ತಿದೆ. ರಷ್ಯಾ ಅಧ್ಯಕ್ಷ ಪುಟಿನ್ ಕೂಡ ಅದೇ ಮಾತು ಪುನರ್ ಪ್ರಸ್ತಾಪ ಮಾಡಿದ್ದು, ಮೋದಿ ಅವರ ಪರಿಕಲ್ಪನೆ ಅತ್ಯದ್ಭುತ ಅಂತಾ ಹೊಗಳಿದ್ದಾರೆ. ಇದಿಷ್ಟೇ ಅಲ್ಲ, ಮೇಕ್ ಇನ್ ಇಂಡಿಯಾ ಯೋಜನೆ ಉತ್ತೇಜಿಸುವಲ್ಲಿ ಮೋದಿ ಸರಿಯಾದ ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ. ಹಾಗಾದರೆ ಪ್ರಧಾನಿ ಮೋದಿ ಅವರನ್ನ ದಿಢೀರ್ ಪುಟಿನ್ ಹೊಗಳಿದ್ದು ಏಕೆ? ಮುಂದೆ ಓದಿ.
ಭಾರತ ನೋಡಿ ಕಲಿಯಬೇಕು ಎಂದ ಪುಟಿನ್!
ಅಷ್ಟಕ್ಕೂ ರಷ್ಯಾ ಬಂದರು ನಗರಿ ವ್ಲಾಡಿವೋಸ್ಟಾಕ್‌ನಲ್ಲಿ ನಡೆದ 8ನೇ ಈಸ್ಟರ್ನ್ ಎಕನಾಮಿಕ್ ಫೋರಂನಲ್ಲಿ ಅಂದರೆ ಇಇಎಫ್ ಶೃಂಗಸಭೆಯಲ್ಲಿ ಪುಟಿನ್ ಮಾತನಾಡಿದ್ದಾರೆ. ಈ ವೇಳೆ, ಪುಟಿನ್ ಪ್ರಧಾನಿ ಪ್ರಧಾನಿ ನರೇಂದ್ರ ಮೋದಿಯವರ 'ಮೇಕ್ ಇನ್ ಇಂಡಿಯಾ' ನೀತಿಯನ್ನು ಶ್ಲಾಘಿಸಿದ್ದಾರೆ. ರಷ್ಯಾ ನಿರ್ಮಿತ ಕಾರುಗಳ ಕುರಿತು ಪ್ರಶ್ನೆಗೆ ಪ್ರತಿಕ್ರಿಯಿಸಿದ ಪುಟಿನ್, ರಷ್ಯಾದ ಈ ಹಿಂದಿನ ದಿನಗಳನ್ನು ನೆನಪು ಮಾಡಿಕೊಂಡರು. 90 ರ ದಶಕದಲ್ಲಿ ರಷ್ಯಾ ಹೇಗೆ ತನ್ನ ಸ್ವಂತ ನೆಲದಲ್ಲಿ ಕಾರು ಉತ್ಪಾದನೆ ಮಾಡದೆ, ಆಮದು ಮಾಡಿಕೊಳ್ಳುತ್ತಿತ್ತು ಎಂಬುದನ್ನ ಹೇಳಿದರು.
ರಷ್ಯಾ ಅಧ್ಯಕ್ಷ ಪುಟಿನ್ ಹೇಳಿದ್ದು ಇಷ್ಟು
ಪುಟಿನ್ ರಷ್ಯಾದ ಹಿಂದಿನ ಯೋಜನೆ ಕುರಿತು ಮಾತನಾಡುತ್ತಾ, ನಮ್ಮಲ್ಲಿ 90ರ ದಶಕದಲ್ಲಿ ದೇಶೀಯವಾಗಿ ತಯಾರಿಸಿದ ಕಾರುಗಳು ಇರಲಿಲ್ಲ. ಆದ್ರೆ ಈಗ ರಷ್ಯಾದಲ್ಲೇ ಕಾರು ಉತ್ಪಾದನೆ ನಡೆಯುತ್ತಿದೆ. ಭಾರತದಂತೆ ರಷ್ಯಾದಲ್ಲೂ ರಷ್ಯಾ ನಿರ್ಮಿತ ಆಟೊಮೊಬೈಲ್ ವಸ್ತುಗಳನ್ನ ಬಳಸುವುದು ಸೂಕ್ತ ಎಂದಿದ್ದಾರೆ. ಈ ಮೂಲಕ ಸ್ವಂತ ನೆಲದಲ್ಲಿ ಉತ್ಪಾದನೆ ಮಾಡುವ ಮೂಲಕ, ಆಮದು ಮಾಡಿಕೊಳ್ಳದೆಯೆ ದೇಶದ ಅಭಿವೃದ್ಧಿಗೆ ಕೈಜೋಡಿಸಿ ಎಂದು ಪುಟಿನ್ ಕರೆ ನೀಡಿದ್ದಾರೆ. ಹಾಗೇ ಭಾರತ ನೋಡಿ ಕಲಿಯಬೇಕು ಎಂದು ಭಾರತವನ್ನೂ ಮನಸ್ಸು ತುಂಬಿ ಹೊಗಳಿದ್ದಾರೆ ಪುಟಿನ್.

ಈ ಹಿಂದೆ ಕೂಡ ಪ್ರಧಾನಿ ಮೋದಿ ಅವರನ್ನ ಹಲವು ಬಾರಿ ಪುಟಿನ್ ಹೊಗಳಿದ್ದರು. ಈಗ ಮತ್ತೊಮ್ಮೆ ವ್ಲಾದಿಮಿರ್ ಪುಟಿನ್ ಭಾರತದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಈ ಮೂಲಕ ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ನಡೆಯುವ ಸಂದರ್ಭದಲ್ಲಿ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಹಾಗೇ ಭವಿಷ್ಯದಲ್ಲಿ ಭಾರತ ಮತ್ತು ರಷ್ಯಾ ಸಂಬಂಧ ಇನ್ನಷ್ಟು ಗಟ್ಟಿ ಆಗುವ ಮುನ್ಸೂಚನೆ ನೀಡಿದೆ. ಹಾಗೆ ಮೇಕ್ ಇನ್ ಇಂಡಿಯಾ ಯೋಜನೆಗೆ ಈ ಮೂಲಕ ಜಾಗತಿಕವಾಗಿ ದೊಡ್ಡ ಪ್ರಚಾರ ಸಿಕ್ಕಂತಾಗಿದೆ.












Click it and Unblock the Notifications