ನಮ್ಮನ್ನು ಕಾಪಾಡಿ.. ಹೀಗಂತ ಭಾರತದ ಬೆನ್ನ ಹಿಂದೆ ಬಿದ್ದ ರಷ್ಯಾ!
ಭಾರತ ಜಗತ್ತಿನ ಟಾಪ್-5 ಆರ್ಥಿಕತೆ ಹೊಂದಿರುವ ರಾಷ್ಟ್ರಗಳ ಪೈಕಿ ಒಂದಾಗಿದ್ದು, ಇಡೀ ಜಗತ್ತು ಭಾರತದ ಜೊತೆಗೆ ಉತ್ತಮ ಸಂಬಂಧ ಹೊಂದಲು ಬಯಸುತ್ತದೆ. ಅದರಲ್ಲೂ ಈ ಸಾಲಿನಲ್ಲಿ ರಷ್ಯಾ ಮುಂದೆ ನಿಲ್ಲುತ್ತದೆ. ಯಾಕಂದ್ರೆ ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿರುವ ರಷ್ಯಾಗೆ ಆರ್ಥಿಕ ಹಿನ್ನಡೆಯ ಭೀತಿ ಕಾಡುತ್ತಿದೆ. ಪರಿಸ್ಥಿತಿ ಕೈಮೀರಿ ಹೋಗಿರುವ ಸಮಯಕ್ಕೆ, ಸಂಕಷ್ಟದಿಂದ ಪಾರು ಮಾಡಿ ಅಂತಾ ಭಾರತದ ಬೆನ್ನಹಿಂದೆ ಬಿದ್ದಿದೆ ರಷ್ಯಾ.
ರಷ್ಯಾ ಇಡೀ ಜಗತ್ತಿನಲ್ಲೇ ಅತಿದೊಡ್ಡ ಭೂಮಿ ಹೊಂದಿರುವ ದೇಶ, ಹಾಗೇ ಇಲ್ಲಿ ದೊಡ್ಡ ದೊಡ್ಡ ಕೈಗಾರಿಕೆಗಳು ಇವೆ. ಅಮೆರಿಕ & ಯುರೋಪ್ ಮೂಲದ ಕಂಪನಿಗಳು ರಷ್ಯಾದಲ್ಲಿ ವ್ಯವಹಾರ ನಡೆಸುತ್ತಿದ್ದವು. ಆದರೆ ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಘೋಷಣೆ ಮಾಡಿದ ಬಳಿಕ ಅಮೆರಿಕ ಮತ್ತು ಯುರೋಪ್ ಮೂಲದ ಕಂಪನಿಗಳು ಒಂದೊಂದಾಗಿ ರಷ್ಯಾ ಬಿಟ್ಟು ಎಸ್ಕೇಪ್ ಆಗಿವೆ. ಹೀಗಿದ್ದಾಗ ಅಮೆರಿಕ & ಯುರೋಪ್ ಕಂಪನಿಗಳು ಬಿಟ್ಟೋಗಿರುವ ದೊಡ್ಡ ದೊಡ್ಡ ಕಂಪನಿಗಳ ವ್ಯವಹಾರವನ್ನೆಲ್ಲಾ, ಭಾರತ ಮೂಲದ ಕಂಪನಿಗಳು ಮುನ್ನಡೆಸಲು ರಷ್ಯಾ ಬೇಡಿಕೆ ಮುಂದಿಟ್ಟಿದೆ ಎನ್ನಲಾಗಿದೆ.

ಚೀನಾ & ಭಾರತ ಸದಾ ಮುಂದೆ!
ಭಾರತದ ಜೊತೆ ಸಾಂಪ್ರದಾಯಿಕ ವ್ಯಾಪಾರ ಮುಂದುವರಿಸಿರುವ ರಷ್ಯಾಗೆ, ಈಗ ಮತ್ತಷ್ಟು ಆತ್ಮೀಯತೆ ಬೇಕಿದೆ. ಹೀಗಾಗಿಯೇ ಮುಂದಿನ ವರ್ಷ ಅಂದ್ರೆ 2024ರ ಜೂನ್ 5ರಿಂದ 8ರವರೆಗೂ ನಡೆಯುವ 'ಸೇಂಟ್ ಪೀಟರ್ಸ್‌ಬರ್ಗ್ ಇಂಟರ್‌ನ್ಯಾಶನಲ್ ಎಕನಾಮಿಕ್ ಫೋರಂ' ವೇದಿಕೆಯ ಸಮಯದಲ್ಲಿ ಎಲ್ಲಾ ಡೀಲ್ ಆಗುವ ನಿರೀಕ್ಷೆ ಇದೆ. ಈ ಕುರಿತು ಮಾತನಾಡಿರುವ ರಷ್ಯಾದ ಅಧಿಕಾರಿ ಅಲೆಕ್ಸಿ ವಾಲ್ಕೊವ್, ನಾವು ರಷ್ಯಾದಲ್ಲಿ ಹೂಡಿಕೆ ಮಾಡೋಕೆ ಹಲವು ದೇಶಗಳ ಬಳಿ ಮನವಿ ಮಾಡಿದ್ದೇವೆ. ಚೀನಾ & ಭಾರತ ಸೇರಿ ಹಲವು ದೇಶಗಳು ಇದರಲ್ಲಿ ಆಸಕ್ತಿ ತೋರಿಸಿವೆ. ಅದರಲ್ಲೂ ಭಾರತವೂ ಹಲವು ವಿಭಾಗಗಳಲ್ಲಿ ಹೂಡಿಕೆ ಮಾಡಬಹುದು ಎಂದಿದ್ದಾರೆ.
ಯಾವ ವಿಭಾಗದಲ್ಲಿ ಭಾರತದ ಹೂಡಿಕೆ?
ಇನ್ನು ಭಾರತ ಮೂಲದ ಹೂಡಿಕೆದಾರರ ಆಸಕ್ತಿದಾಯಕ ಕ್ಷೇತ್ರಗಳಾದ ವಾಹನ ಉತ್ಪಾದನೆ & ಸಾರಿಗೆ ವಿಭಾಗವು ಸೇರಿದಂತೆ ಜವಳಿ ಅಥವಾ ಲಘು ಕೈಗಾರಿಕೆ ವಿಭಾಗದಲ್ಲಿ ಹೂಡಿಕೆಯನ್ನ ನಿರೀಕ್ಷೆ ಮಾಡಿದೆ ರಷ್ಯಾ. ಚೀನಾ ಕೂಡ ಹಲವು ಕ್ಷೇತ್ರದಲ್ಲಿ ಹೂಡಿಕೆ ಮಾಡೋಕೆ ಇದೀಗ ಮುಂದೆ ಬಂದಿದೆ ಎನ್ನಲಾಗುತ್ತಿದೆ. ಹೀಗಾಗಿ ರಷ್ಯಾ ಸರ್ಕಾರ ಎರಡೂ ದೇಶಗಳ ಜೊತೆಯಲ್ಲಿ, ಮಹತ್ವದ ಮಾತುಕತೆ ಆರಂಭಿಸಿದೆ ಎನ್ನಲಾಗಿದೆ. ಕೆಲವೇ ದಿನದಲ್ಲಿ ಈ ಬಗ್ಗೆ ಒಂದು ರೀತಿ ಸ್ಪಷ್ಟ ಚಿತ್ರಣ ಸಿಗುವ ನಿರೀಕ್ಷೆ ಇದೆ.
ಸರ್ಕಾರಕ್ಕೆ ಹೆದರಿ ಓಡಿದ ಕಂಪನಿಗಳು!
ಮೊದಲೇ ಹೇಳಿದಂತೆ ರಷ್ಯಾ ಒಂದು ಬೃಹತ್ ದೇಶ, ಹೀಗಾಗಿ ಇಲ್ಲಿ ವ್ಯಾಪಾರ & ವಹಿವಾಟನ್ನ ನಡೆಸಲು ಉದ್ದಿಮೆಗಳಿಗೆ ಬೇಕಾದ ಕಚ್ಚಾ ವಸ್ತುಗಳು ಸುಲಭವಾಗಿ ಸಿಗುತ್ತವೆ. ಇದೇ ಕಾರಣ ನೂರಾರು ಕಂಪನಿಗಳು ಅಮೆರಿಕ & ಯುರೋಪ್ ಮೂಲದಿಂದ ಬಂದು ರಷ್ಯಾದಲ್ಲಿ ಉದ್ದಿಮೆ ಶುರು ಮಾಡಿದ್ದವು.

ಆದರೆ ಯಾವಾಗ ರಷ್ಯಾ & ಉಕ್ರೇನ್ ನಡುವೆ ಭೀಕರ ಯುದ್ಧ ಶುರುವಾಗಿತ್ತೋ, ಅಲ್ಲಿಂದ ಎಲ್ಲಾ ಬದಲಾಗಿ ಹೋಗಿತ್ತು. ತಮ್ಮ ತಮ್ಮ ಸರ್ಕಾರಕ್ಕೆ ಈ ಎಲ್ಲಾ ಕಂಪನಿಗಳೂ ಹೆದರಿ, ಅಮೆರಿಕ & ಯುರೋಪ್‌ಗೆ ವಾಪಸ್ ಹೋಗಿವೆ. ಹೀಗಾಗಿ ರಷ್ಯಾದಲ್ಲಿ ಇದ್ದಿದ್ದ ಕಂಪನಿಗಳು ಅನಾಥವಾಗಿವೆ. ಅವುಗಳ ನೋಡಿಕೊಳ್ಳಲು ಹೊಸ ಹೂಡಿಕೆದಾರರು ರಷ್ಯಾಗೆ ಬೇಕಿದ್ದಾರೆ.
ಒಟ್ನಲ್ಲಿ ಭಾರತ ಈ ಸಮಯಲ್ಲಿ ಇಡುತ್ತಿರುವ ಹೆಜ್ಜೆ ಪ್ರಮುಖವಾಗಿದ್ದು, ಭವಿಷ್ಯದಲ್ಲಿಯು ಭಾರತಕ್ಕೆ ಇದರಿಂದ ಸಹಾಯ ಆಗಲಿದೆ. ಏಕೆಂದರೆ ಭವಿಷ್ಯದಲ್ಲಿ ರಷ್ಯಾ ಸೂಪರ್ ಪವರ್ ಆಗಲಿದ್ದು, ಇದರಿಂದ ಇಡೀ ಜಗತ್ತು ರಷ್ಯಾ ಬೆನ್ನ ಹಿಂದೆ ಓಡುವ ಸ್ಥಿತಿ ಬರಲಿದೆ ಅಂತಿದ್ದಾರೆ ತಜ್ಞರು. ಹೀಗಿದ್ದಾಗ ಭಾರತ ಕೂಡ ಜಾಣ ನಡೆ ಇಡುತ್ತಿದ್ದು, ಅಮೆರಿಕ ಜೊತೆಗಿನ ಸ್ನೇಹಕ್ಕೆ ಕುತ್ತು ಬರದ ರೀತಿಯಲ್ಲಿ ರಷ್ಯಾ ಜೊತೆಗೂ ಬಂಧವನ್ನು ಬೆಳೆಸುತ್ತಿದೆ.












Click it and Unblock the Notifications