'ಮೋದಿ ಹತ್ಯೆಗೆ 50 ಕೋಟಿ ರೂ!' ತೇಜ್ ಬಹದ್ದೂರ್ ಶಾಕಿಂಗ್ ವಿಡಿಯೋ
Recommended Video
ವಾರಣಾಸಿ, ಮೇ 07: ಪ್ರಧಾನಿ ನರೇಂದ್ರ ಮೊದಿ ಅವರ ಹತ್ಯೆಗೆ 50 ಕೋಟಿ ರೂ. ನೀಡುವ ಬಗ್ಗೆ ವಾರಣಾಸಿಯ ಎಸ್ಪಿ ಅಭ್ಯರ್ಥಿ ತೇಜ್ ಬಹದ್ದೂರ್ ಯಾದವ್ ಮಾತನಾಡುತ್ತಿರುವ ಶಾಕಿಂಗ್ ವಿಡಿಯೋವೊಂದು ಹೊರಬಂದಿದ್ದು, ಆತಂಕ ಸೃಷ್ಟಿಸಿದೆ.
ಆದರೆ ಈ ವಿಡಿಯೋವನ್ನು ತಿರುಚಲಾಗಿದೆ, ಎಡಿಟ್ ಮಾಡಲಾಗಿದೆ ಎಂದು ಯಾದವ್ ಪ್ರತಿಕ್ರಿಯಿಸಿದ್ದಾರೆ. "ಈ ವಿಡಿಯೋದಲ್ಲಿರುವುದು ತಾನೇ. ಈ ವಿಡಿಯೋವನ್ನು ನನಗೇ ಗೊತ್ತಿಲ್ಲದೆ 2017 ರಲ್ಲಿ ಮಾಡಲಾಗಿತ್ತು. ನಾನು ಸೈನಿಕರು ಎದುರಿಸುತ್ತಿರುವ ಹಲವು ಸಮಸ್ಯೆಗಳ ಬಗ್ಗೆ ಈ ವಿಡಿಯೋದಲ್ಲಿ ಮಾತನಾಡಿದ್ದೆ. ಆದರೆ ಯಾವುದೇ ಕಾರಣಕ್ಕೂ ಪ್ರಧಾನಿ ಮೋದಿ ಹತ್ಯೆಯ ಬಗ್ಗೆ ಮಾತನಾಡಿರಲಿಲ್ಲ. ಇದು ವಾಸ್ತವಕ್ಕೆ ದೂರವಾದುದು" ಎಂದಿದ್ದಾರೆ.

ವಾರಣಾಸಿ ಕ್ಷೇತ್ರದಲ್ಲಿ ನರೇಂದ್ರ ಮೊದಿ ಅವರ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ತೇಜ್ ಬಹದ್ದೂರ್ ಅವರಿಗೆ ಎಸ್ಪಿ-ಬಿಎಸ್ಪಿ ಮೈತ್ರಿಕೂಟ ಬೆಂಬಲ ನೀಡಿ, ಅವರನ್ನು ಎಸ್ಪಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿತ್ತು. ಆದರೆ ತೇಜ್ ಬಹದ್ದೂರ್ ಅವರು ಸೈನಿಕರಿಗೆ ಕಳಪೆ ಆಹಾರ ನೀಡಲಾಗುತ್ತದೆ ಎಂದು ದೂರಿ ವಿಡಿಯೋ ಮಾಡಿದ ನಂತರ ಸೇನೆಯಿಂದ ಅಮಾನತ್ತಾಗಿದ್ದವರು. ಅವರ ವಿರುದ್ಧ ಭ್ರಷ್ಟಾಚಾರದ ಆರೋಪವೂ ಇತ್ತು. ಈ ಬಗ್ಗೆ ಸ್ಪಷ್ಟನೆ ನೀಡಿ ಪತ್ರ ನೀಡುವಂತೆ ಚುನಾವಣಾ ಆಯೋಗ ಕೇಳಿದ್ದರೂ, ಅದನ್ನು ಅವರು ಸಲ್ಲಿಸದ ಕಾರಣ ಅವರ ನಾಮಪತ್ರ ತಿರಸ್ಕೃತವಾಗಿತ್ತು.
ಮೋದಿ ಹತ್ಯೆಯ ಕುರಿತ ವಿಡಿಯೋ ಬಗ್ಗೆ ಆತಂಕ ಬಿಜೆಪಿ ಆತಂಕ ವ್ಯಕ್ತಪಡಿಸಿದೆ.












Click it and Unblock the Notifications